ದೆಹಲಿ: ಮೆಟ್ರೋ ಕೋಚ್‌ನ ನೆಲದ ಮೇಲೆ ಕುಳಿತು ಯುವ ಜೋಡಿಯೊಂದು ಪರಸ್ಪರ ಚುಂಬಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದ್ದು, ದೆಹಲಿ ಮೆಟ್ರೋ (Delhi Metro) ರೈಲು ನಿಗಮವು ತನ್ನ ಪ್ರಯಾಣಿಕರಿಗೆ ಇಂತಹ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಮನವಿ ಮಾಡಿದೆ. ಇಂತಹ ಘಟನೆಗಳು ಕಂಡರೆ ಸಮೀಪದ ಲಭ್ಯವಿರುವ ಮೆಟ್ರೋ ಸಿಬ್ಬಂದಿ/ಸಿಐಎಸ್‌ಎಫ್‌ಗೆ ತಕ್ಷಣ ತಿಳಿಸಿ, ಅದರಿಂದಾಗಿ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಮೆಟ್ರೋ ಅಧಿಕಾರಿಗಳು ಪ್ರಯಾಣಿಕರಿಗೆ ತಿಳಿಸಿದ್ದಾರೆ. ಕಿಸ್ಸಿಂಗ್ ವಿಡಿಯೊ ವೈರಲ್ ಆಗಿದ್ದು ಇಂಟರ್ನೆಟ್ ಬಳಕೆದಾರರು ಕೋಪ ಮತ್ತು ಹಾಸ್ಯದಿಂದ ಪ್ರತಿಕ್ರಿಯಿಸಿದ್ದಾರೆ.
ವಿಡಿಯೊದಲ್ಲಿ, ಹುಡುಗಿ ಮೆಟ್ರೋ ಕೋಚ್‌ನ ನೆಲದ ಮೇಲೆ ಕುಳಿತಿದ್ದ ಹುಡುಗನ ಮಡಿಲಲ್ಲಿ ಮಲಗಿರುದ್ದು, ಹುಡುಗ ಚುಂಬಿಸುತ್ತಿರುವುದು ಕಾಣುತ್ತದೆ. ಈ ಜೋಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಡಿಎಂಆರ್ಸಿಯನ್ನು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಇಂಥದ್ದನ್ನು ವಿಡಿಯೊ ಮಾಡಿ ಹರಿಬಿಟ್ಟಿದ್ದು ಯಾಕೆ? ಎಂದು ವಿಡಿಯೊ ಚಿತ್ರೀಕರಿಸಿದವರನ್ನು ಪ್ರಶ್ನಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ದೆಹಲಿ ಮೆಟ್ರೋ ಕೋಚ್‌ಗಳಲ್ಲಿ ಚಿತ್ರೀಕರಿಸಲಾದ ಅನೇಕ ವಿಡಿಯೊಗಳು ವೈರಲ್ ಆಗಿವೆ.
ದೆಹಲಿ ಮೆಟ್ರೋವನ್ನು ಬಳಸುವಾಗ ತನ್ನ ಪ್ರಯಾಣಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಎಲ್ಲಾ ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಡಿಎಂಆರ್ಸಿ ಹೇಳಿದೆ.
ಇದನ್ನೂ ಓದಿ: 10 ಸಾವಿರ ಅಡಿ ಎತ್ತರದಿಂದ ಜಿಗಿಯುವಾಗ ಮೇಕ್ಅಪ್ ಮಾಡಿಕೊಂಡ ಮಹಿಳೆ; ವಿಡಿಯೋ ವೈರಲ್
ಪ್ರಯಾಣಿಕರು ಯಾವುದೇ ಅಸಭ್ಯ/ಅಶ್ಲೀಲ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು, ಅದು ಅಸ್ವಸ್ಥತೆಯನ್ನು ಉಂಟುಮಾಡಬಹುದು ಅಥವಾ ಇತರ ಸಹ ಪ್ರಯಾಣಿಕರ ಸಂವೇದನೆಗೆ ಧಕ್ಕೆ ತರಬಹುದು. ಡಿಎಂಆರ್ಸಿ ಯ ಕಾರ್ಯಾಚರಣೆಗಳು ಮತ್ತು ನಿರ್ವಹಣೆ ಕಾಯಿದೆಯು ಸೆಕ್ಷನ್ 59 ರ ಅಡಿಯಲ್ಲಿ ಇಂಥಾ ಅಸಭ್ಯತೆ ಶಿಕ್ಷಾರ್ಹ ಅಪರಾಧವೆಂದು ಹೇಳುತ್ತದೆ.
ದೆಹಲಿ ಮೆಟ್ರೋದಂತಹ ಸಾಮೂಹಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸುವಾಗ ಇಂತಹ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಮತ್ತು ಸಾಮಾಜಿಕ ಶಿಷ್ಟಾಚಾರ ಪಾಲಿಸಿ ಎಂದು ಡಿಎಂಆರ್ ಸಿ ಪ್ರಯಾಣಿಕರಿಗೆ ಮನವಿ ಮಾಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ