ಲೈಕ್ಸ್, ವೀವ್ಸ್, ಫಾಲೋವರ್ಸ್ ಗಳಿಸಲು, ರಾತ್ರೋರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನ ಹಲವಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರು ಪ್ರಾಣವನ್ನೂ ಲೆಕ್ಕಿಸದೆ ಡೇಂಜರಸ್ ರೀಲ್ಸ್‌ಗಳನ್ನು ಮಾಡುವವರಿದ್ದಾರೆ. ಹೀಗೆ ಹುಚ್ಚಾಟ ಮೆರೆದು ಪಜೀತಿಗೆ ಸಿಲುಕಿದವರ, ಅಮೂಲ್ಯವಾದ ಜೀವವನ್ನೇ ಕಳೆದುಕೊಂಡವರ ಸುದ್ದಿಗಳನ್ನು ನೀವು ಕೇಳಿರುತ್ತೀರಿ ಅಲ್ವಾ. ಈ ರೀತಿ ಮಿತಿ ಮೀರಿ ವರ್ತಿಸುವುದು ಅಪಾಯ ಅಂತ ಗೊತ್ತಿದ್ರೂ ಕೂಡಾ ಇಲ್ಲೊಬ್ಬಳು ಯುವತಿ ಇದಕ್ಕೆಲ್ಲಾ ಕ್ಯಾರೇ ಅನ್ನದೆ ಎಲೆಕ್ಟ್ರಿಕ್ ಕಂಬದ ಮೇಲೆ ನಿಂತು ಡೇಂಜರಸ್ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗ್ಬೇಕು ಎಂಬ ಉದ್ದೇಶದಿಂದ ಯುವತಿಯೊಬ್ಬಳು ಎಲೆಕ್ಟ್ರಿಕ್ ಕಂಬದ ಮೇಲೆ ಹತ್ತಿ ವಿದ್ಯುತ್ ತಂತಿಯನ್ನು ಹಿಡಿದು ರೀಲ್ಸ್ ಮಾಡಿದ್ದಾಳೆ. ಕಂಬದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ಈ ಕುರಿತ ವಿಡಿಯೋವನ್ನು ChotaNewsTelugu ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಎಲೆಕ್ಟ್ರಿಕ್ ಕಂಬದ ಮೇಲೇರಿ ನಿಂತು ಯುವತಿಯೊಬ್ಬಳು ಡೇಂಜರಸ್ ರೀಲ್ಸ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಗೆಳತಿಗೆ 4BHK ಫ್ಲ್ಯಾಟ್, ಐಷಾರಾಮಿ ಕಾರ್ ಗಿಫ್ಟ್ ಕೊಟ್ಟ ತಿಂಗಳಿಗೆ 13 ಸಾವಿರ ಸಂಬಳ ಪಡೆಯುವ ಯುವಕ
ಡಿಸೆಂಬರ್ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಹುಚ್ಚುತನದ ಪರಮಾವಧಿʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕುʼ ಎಂದು ಆಗ್ರಹಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ