ಹೈದರಾಬಾದ್ನಲ್ಲಿ ಝೊಮ್ಯಾಟೊ(Zomato) ಡೆಲಿವರಿ ಏಜೆಂಟ್ ಒಬ್ಬರು ಕುದುರೆ ಏರಿ ಆಹಾರ ಡೆಲಿವರಿ ಮಾಡಲು ಹೊರಟಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹಾಗಾದರೆ ಡೆಲಿವರಿ ಏಜೆಂಟ್ ಈ ಕಸರತ್ತು ಮಾಡಲು ಕಾರಣವೇನೆಂಬುದರ ಕುರಿತು ಮಾಹಿತಿ ಇಲ್ಲಿದೆ. ಈ ಡೆಲಿವರಿ ಬಾಯ್ ಹೈದರಾಬಾದ್‌ನ ಜನನಿಬಿಡ ರಸ್ತೆಯಲ್ಲಿ ವಾಹನಗಳ ನಡುವೆ ಕುದುರೆ ಮೇಲೆ ಪಾರ್ಸೆಲ್ ಅನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಹಿಟ್ ಆ್ಯಂಡ್ ರನ್ ಕಾನೂನು ಹಿಂಪಡೆಯುವ ಕುರಿತು ಟ್ರಕ್, ಬಸ್ ಚಾಲಕರು ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿದರು. ಈ ನಡುವೆ ಪೆಟ್ರೋಲ್ ಬಂಕ್ಗಳಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಮೂರು ಗಂಟೆಗಳ ಕಾಲ ಪೆಟ್ರೋಲ್ ಬಂಕ್ನಲ್ಲಿ ನಿಂತಿದ್ದೆ, ಬಳಿಕ ತಮ್ಮ ಬೈಕ್ ಅನ್ನು ಪೆಟ್ರೋಲ್ ಬಂಕ್ ಬಳಿಯೇ ಇಟ್ಟು ಕುದುರೆ ಬಾಡಿಗೆಗೆ ತೆಗೆದುಕೊಂಡು ಸವಾರಿ ಮುಂದುವರೆಸಿದೆ ಎಂದು ಹೇಳಿದ್ದಾರೆ.
ಡೆಲಿವರಿ ಬಾಯ್ ಕುದುರೆಯ ಮೇಲೆ ಆಹಾರವನ್ನು ತಲುಪಿಸಲು ಇಂಪೀರಿಯಲ್ ಹೋಟೆಲ್ ಬಳಿಯ ಚಂಚಲಗುಡಕ್ಕೆ ಬಂದಿದ್ದಾರೆ. ಟ್ರಕ್ ಡ್ರೈವರ್‌ಗಳ ಮುಷ್ಕರದಿಂದಾಗಿ ಪೆಟ್ರೋಲ್ ಕೊರತೆ ಉಂಟಾಗಿದ್ದು, ಯುವಕನಿಗೆ ಕುದುರೆಯ ಮೇಲೆ ಆಹಾರವನ್ನು ತಲುಪಿಸುವುದು ಅನಿವಾರ್ಯವಾಗಿತ್ತು ಎಂದು ಯುವಕ ಹೇಳಿದ್ದಾನೆ.
ಮತ್ತಷ್ಟು ಓದಿ: ಮುಷ್ಕರ ವಾಪಸ್ ಪಡೆದ ಟ್ರಕ್ ಚಾಲಕರು; ಜನರು ನಿರಾಳ
ಇತ್ತೀಚೆಗೆ ಕೇಂದ್ರ ಸರ್ಕಾರವು ಹಿಟ್ ಆ್ಯಂಡ್ ರನ್ ಕೇಸ್‌ನಲ್ಲಿ ಹೊಸ ನಿಬಂಧನೆಗಳನ್ನು ಜಾರಿಗೆ ತಂದಿದೆ.ದರ ಅಡಿಯಲ್ಲಿ 7 ಲಕ್ಷ ರೂಪಾಯಿಗಳವರೆಗೆ ದಂಡ ಮತ್ತು 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
When petrol bunks ran out of fuel in #Hyderabad, @zomato delivery arrived on horseback … at Chanchalguda, next to Imperial Hotel… after long, long queues & closure of petrol pumps as a fallout of #TruckersStrike over #NewLaw on hit-and-run accidents @ndtv @ndtvindia pic.twitter.com/bYLT5BuvQh
— Uma Sudhir (@umasudhir) January 3, 2024
ಈ ಕಾನೂನು ವಿರೋಧಿಸಿ ಟ್ರಕ್, ಬಸ್, ಅನೇಕ ಸಂಘಟನೆಗಳು ಮುಷ್ಕರ ನಡೆಸಿದ್ದವು. ಆದರೆ, ಈ ಹೊಸ ಕಾನೂನನ್ನು ಶೀಘ್ರದಲ್ಲೇ ಜಾರಿಗೆ ತರುವುದಿಲ್ಲ ಎಂದು ಸರ್ಕಾರ ಈಗಷ್ಟೇ ಘೋಷಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Wed, 3 January 24