ಮಳೆ ಪ್ರಾರಂಭವಾಗುತ್ತಿದ್ದಂತೆ ಹೋಟೆಲ್‌ಗಳಿಗೆ ತೆರಳುವ ಬದಲಾಗಿ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಂತೆ ಸ್ವಿಗ್ಗಿ, ಝೊಮ್ಯಾಟೋದಂತಹ ಆನ್‌ಲೈನ್ ಫುಡ್ ಸರ್ವೀಸ್‌ಗಳು ಮನೆ ಬಾಗಿಲಿನ ತನಕ ಆಹಾರ ತಂದುಕೊಡುತ್ತದೆ. ಇದೀಗ ಮುಂಬೈ ವ್ಯಕ್ತಿಯೊಬ್ಬರು ಡೆಲಿವರಿ ಬಾಯ್ನ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಈ ಸಮಯದಲ್ಲಿ ಫುಡ್ ಡೆಲಿವರಿ ಬಾಯ್ ಮಳೆಯನ್ನೂ ಲೆಕ್ಕಿಸದೇ ಸರಿಯಾದ ಆಹಾರ ತಂದುಕೊಟ್ಟಿದ್ದು, ಈ ಕುರಿತು ಗ್ರಾಹಕರೊಬ್ಬರು ಫೋಸ್ಟ್ ಹಂಚಿಕೊಂಡಿದ್ದಾರೆ. ಥ್ರೆಡ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಎಲ್ಲಡೆ ವೈರಲ್ ಆಗಿದೆ.
ಚೆಂಬೂರಿನ ರೆಸ್ಟೋರೆಂಟ್‌ನಿಂದ ನಾವು ಆರ್ಡರ್ ಮಾಡಿದ್ದೆವು. ಒಂದೆಡೆ ಮಳೆಯಿಂದ ರಸ್ತೆ ಜಲಾವೃತಗೊಂಡಿದ್ದು, ಬೈಕ್ ಕೆಟ್ಟುಹೋಗಿದ್ದರೂ ಕೂಡ ತಮ್ಮ ಮನೆಯವರೆಗೂ ನಡೆದುಕೊಂಡು ಬಂದು ಆಹಾರವನ್ನು ತಂದುಕೊಟ್ಟಿದ್ದಾನೆ. ಸರಿಯಾದ ಸಮಯಕ್ಕೆ ಬಟರ್ ಚಿಕನ್ ಪಾರ್ಸೆಲ್ ಅನ್ನು ಸುರಕ್ಷಿತವಾಗಿ ತಂದು ತಲುಪಿಸಿದ್ದಾನೆ ಎಂದು ಗ್ರಾಹಕರಾದ ಮಿತ್ತಲ್ ಸ್ವಾತಿ ಇನ್‌ಸ್ಟಾಗ್ರಾಮ್ ಥ್ರೆಡ್ನಲ್ಲಿ ಬರೆದುಕೊಂಡಿದ್ದಾರೆ.
Post by @mittal.swatiView on Threads
ಇದನ್ನೂ ಓದಿ: ಮಹಿಳೆ ಕಛೇರಿಗಳಲ್ಲಿ ಕೆಲಸ ಪಡೆಯಲು ಪತಿಯ ಅನುಮತಿ ಅಗತ್ಯ; 18 ದೇಶಗಳಲ್ಲಿ ಈ ನಿಯಮ ಜಾರಿಯಲ್ಲಿದೆ
mittal.swati ಎಂಬ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ. ಜೊತೆಗೆ ಸಾಕಷ್ಟು ಜನರು ಕಾಮೆಂಟ್ ಮೂಲಕ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ