Viral: ಅಮೆರಿಕದಲ್ಲೂ ಮಂಗಳೂರಿನ ಯಕ್ಷಗಾನದ ರಂಗು, ವೈರಲ್‌ ಆಯ್ತು ವಿಡಿಯೋ

ಯಕ್ಷಗಾನ ಕರಾವಳಿಯ ಗಂಡು ಕಲೆ. ಈ ಕಲೆಯ ಕಂಪು ರಾಜ್ಯ, ದೇಶ ಮಾತ್ರವಲ್ಲದೆ ವಿದೇಶದಲ್ಲೂ ಪಸರಿಸಿದೆ. ಹೌದು ವಿವಿಧ ಮೇಳಗಳು ದುಬೈ, ಕತಾರ್‌ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಯಕ್ಷಗಾನದ ಕಲೆಯನ್ನು ಪ್ರದರ್ಶಿಸಿವೆ. ಇದೀಗ ಈ ಕಲೆಯ ರಂಗು ದೂರದ ಅಮೇರಿಕಾದಲ್ಲೂ ಪಸರಿಸಿದ್ದು, ಈ ಕುರಿತ ಸುಂದರ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Viral: ಅಮೆರಿಕದಲ್ಲೂ ಮಂಗಳೂರಿನ ಯಕ್ಷಗಾನದ ರಂಗು, ವೈರಲ್‌ ಆಯ್ತು ವಿಡಿಯೋ
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 26, 2024 | 5:15 PM

ಯಕ್ಷಗಾನದ ಜನಪ್ರಿಯತೆ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನ ದೇಶ ಮಾತ್ರವಲ್ಲದೇ ವಿದೇಶದಲ್ಲೂ ಖ್ಯಾತಿ ಪಡೆದಿದೆ. ದಕ್ಷಿಣ ಕನ್ನಡ, ಉಡುಪಿ ಮಲೆನಾಡಿನ ಕಡೆ ಯಕ್ಷಗಾನ ಬಯಲಾಟಗಳು ನಡೆಯುತ್ತಲೇ ಇರುತ್ತವೆ. ಇದೀಗ ದೂರದ ಅಮೆರಿಕದಲ್ಲೂ ಯಕ್ಷಗಾನದ ಕಂಪು ಪಸರಿಸಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಕೆಲ ದಿನಗಳ ಹಿಂದೆ ಅಮೆರಿಕದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಸರಕಾರಿ ಕಾರ್ಯಕ್ರಮದ ಪರೇಡ್‌ನಲ್ಲಿ ಯಕ್ಷಗಾನ ಕಲೆಯನ್ನು ಪ್ರದರ್ಶಿಸಲಾಯಿತು. ಪರೇಡ್‌ನಲ್ಲಿ ಯಕ್ಷಗಾನ ಕಲಾವಿದರು ಪಟ್ಲ ಸತೀಶ್‌ ಶೆಟ್ಟಿ ಕಂಠದಲ್ಲಿ ಮೂಡಿಬಂದ ಅದ್ಭುತ ಭಾಗವತಿಕೆಗೆ ಹೆಜ್ಜೆ ಹಾಕಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

ಈ ಕುರಿತ ವಿಡಿಯೋವನ್ನು ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿಯವರ ಅಭಿಮಾನಿ ಹೆಸರಿನ ಫೇಸ್‌ಬುಕ್‌ ಪೇಜ್‌ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಅಮೆರಿಕದ ಬೀದಿ ಬೀದಿಯೂ ಯಕ್ಷಗಾನಮಯ, ಪಟ್ಲಮಯ; ಸ್ವಾತಂತ್ರ್ಯೋತ್ಸವದ ಸರ್ಕಾರಿ ಕಾರ್ಯಕ್ರಮದ ಪರೇಡ್‌ನಲ್ಲಿ ವಿಜೃಂಭಿಸಿದ ನಮ್ಮ ಹೆಮ್ಮೆಯ ಕಲೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಪರೇಡ್‌ನಲ್ಲಿ ಭಾಗವಸಿದ್ದ ಯಕ್ಷಗಾನ ಕಲಾವಿದರು ಪಟ್ಲ ಸತೀಶ್‌ ಶೆಟ್ಟಿ ಕಂಠದಲ್ಲಿ ಮೂಡಿಬಂದ ಅದ್ಭುತ ಭಾಗವತಿಕೆಗೆ ಹೆಜ್ಜೆ ಹಾಕುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಭಾಂಗ್‌ ಲಸ್ಸಿ ತಂದ ಎಡವಟ್ಟು, ಭಾಂಗ್‌ ಸೇವಿಸಿ ಆಸ್ಪತ್ರೆ ಸೇರಿದ ಬ್ರಿಟಿಷ್‌ ಇನ್‌ಫ್ಲುಯೆನ್ಸರ್‌

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆಹಾ… ಎಂತಹ ಅದ್ಭುತ ಕಂಠಸಿರಿʼ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼತುಂಬಾನೇ ಚೆಂದವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ