AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಹಲ್ಗಾಮ್ ಕರಾಳ ನೆನಪಿಗೆ 1 ವರ್ಷ: ದಾಳಿಯಲ್ಲಿ ಪ್ರಾಣಬಿಟ್ಟ ಬೆಂಗಳೂರಿನ ಭರತ್ ತಂದೆಯ ನೋವಿನ ಮಾತು

ಪಹಲ್ಗಾಮ್ ಕರಾಳ ನೆನಪಿಗೆ 1 ವರ್ಷ: ದಾಳಿಯಲ್ಲಿ ಪ್ರಾಣಬಿಟ್ಟ ಬೆಂಗಳೂರಿನ ಭರತ್ ತಂದೆಯ ನೋವಿನ ಮಾತು

Kiran Surya
| Edited By: |

Updated on:Apr 21, 2026 | 6:46 PM

Share

ಪುಲ್ವಾಮ ಮಾತ್ರವಲ್ಲ ಪಹಲ್ಗಾಮ್ ದಾಳಿ ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಮಿನಿ ಸ್ವಿಟ್ಜರ್​ಲ್ಯಾಂಡ್​ ಎಂದೇ ಕರೆಯುವ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್​​​ ದಾಳಿಗೆ ನಾಳೆಗೆ (ಏಪ್ರಿಲ್ 22) ಒಂದು ವರ್ಷ. ಕುಟುಂಬಸ್ಥರ ಜೊತೆ ಪ್ರಕೃತಿ ಸೌಂದರ್ಯದಲ್ಲಿ ಎಂಜಾಯ್ ಮಾಡುತ್ತಿದ್ದವರ ಮೇಲೆ ಭಯೋತ್ದಾದಕರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ 26 ಮಂದಿ ದುರ್ಮರಣಕ್ಕೀಡಾಗಿದ್ದರು. ಹೌದು... ಬೆಂಗಳೂರಿನಲ್ಲಿ ವಾಸವಿದ್ದ ಹಾವೇರಿಯ ಭರತ್ ಭೂಷಣ್, ಪಹಲ್ಗಾಮ್ ಗೆ ಪ್ರವಾಸಕ್ಕೆ ತೆರಳಿದ್ದಾಗ ಭಯೋತ್ಪಾದರಕ ನೀಚ ಕೃತ್ಯಕ್ಕೆ ಬಲಿಯಾಗಿದ್ದರು.

ಬೆಂಗಳೂರು, ಏಪ್ರಿಲ್ 21):  ಪುಲ್ವಾಮ ಮಾತ್ರವಲ್ಲ ಪಹಲ್ಗಾಮ್ ದಾಳಿ (pahalgam terror attack) ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಮಿನಿ ಸ್ವಿಟ್ಜರ್​ಲ್ಯಾಂಡ್​ ಎಂದೇ ಕರೆಯುವ ಜಮ್ಮು ಮತ್ತು ಕಾಶ್ಮೀರದ (Jammu And Kashmir) ಅನಂತನಾಗ್ ಜಿಲ್ಲೆಯ ಪಹಲ್ಗಾಮ್​​​ ದಾಳಿಗೆ ನಾಳೆಗೆ (ಏಪ್ರಿಲ್ 22) ಒಂದು ವರ್ಷ. ಕುಟುಂಬಸ್ಥರ ಜೊತೆ ಪ್ರಕೃತಿ ಸೌಂದರ್ಯದಲ್ಲಿ ಎಂಜಾಯ್ ಮಾಡುತ್ತಿದ್ದವರ ಮೇಲೆ ಭಯೋತ್ದಾದಕರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ 26 ಮಂದಿ ದುರ್ಮರಣಕ್ಕೀಡಾಗಿದ್ದರು. ಹೌದು… ಬೆಂಗಳೂರಿನಲ್ಲಿ ವಾಸವಿದ್ದ ಹಾವೇರಿಯ ಭರತ್ ಭೂಷಣ್, ಪಹಲ್ಗಾಮ್ ಗೆ ಪ್ರವಾಸಕ್ಕೆ ತೆರಳಿದ್ದಾಗ ಭಯೋತ್ಪಾದರಕ ನೀಚ ಕೃತ್ಯಕ್ಕೆ ಬಲಿಯಾಗಿದ್ದರು. ಭರತ್ ತನ್ನ ಮೂರು ವರ್ಷದ ಮಗನನ್ನ ಕೈಯಲ್ಲಿ ಹಿಡಿದುಕೊಂಡು ನಿಂತಿದ್ದ ವೇಳೆ ಮಗುವನ್ನ ಕೆಳಗೆ ಇಳಿಸಿದ ಉಗ್ರರು, ಪತ್ನಿ ಮುಂದೆಯೇ ಭರತ್ ತಲೆಗೆ ಗುಂಡು ಹಾರಿಸಿ ಹತ್ಯೆ ಗೈದಿದ್ದರು. 40 ವರ್ಷಗಳಿಂದ ಕುಟುಂಬದಲ್ಲಿದ್ದ ಭರತ್​​​​​​​​ ಭೂಷಣ್ ಈಗ ಒಂದು ವರ್ಷದಿಂದ ಇಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಟಿವಿ9 ಕನ್ನಡದ ಜೊತೆಗೆ ತಂದೆ ಚೆನ್ನವೀರಪ್ಪ ತಾಯಿ ಶೈಲಾ ಕುಮಾರಿ ನೋವು ಹಂಚಿಕೊಂಡಿದ್ದಾರೆ.

ಭರತ್ ಭೂಷಣ್ ಕುಟುಂಬ ಆರ್.ಆರ್ ನಗರ ವಿಧಾನಸಭಾ ಕ್ಷೇತದ ಮತ್ತಿಕೆರೆಯ ಗೋಕುಲದಲ್ಲಿ ವಾಸವಾಗಿದ್ದಾರೆ. ಭರತ್ ಭೂಷಣ್ ತಂದೆ- ಚೆನ್ನವೀರಪ್ಪ ಅವರಿಗೆ 76 ವರ್ಷ, ತಾಯಿ ಶೈಲಾ ಕುಮಾರಿ ಅವರಿಗೆ 70 ವರ್ಷ. ಈ ವಯಸ್ಸಿನಲ್ಲಿ ಮಗನನ್ನು ಕಳೆದುಕೊಂಡು ಇಬ್ಬರು ಹಿರಿಯ ಜೀವಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ: Pahelgam Terrorist Attack: ಶವಪೆಟ್ಟಿಗೆಯಲ್ಲಿ ಪತಿ ಭರತ್ ಭೂಷಣ್ ದೇಹ ನೋಡುತ್ತಲೇ ಕುಸಿದುಬಿದ್ದ ಪತ್ನಿ ಸುಜಾತಾ

ಇನ್ನೂ ಭರತ್ ಭೂಷಣ್ ತಂದೆ ಚೆನ್ನವೀರಪ್ಪ ಅವರಿಗೆ ಇಬ್ಬರು ಮಕ್ಕಳಿದ್ದು, ಭರತ್ ಭೂಷಣ್ ಎರಡನೇ ಪುತ್ರ. ಭರತ್ ಭೂಷಣ್ ಗೆ ಸದ್ಯ 41 ವರ್ಷ ವಯಸ್ಸಾಗಿತ್ತು.ಬಿಇ ಮೆಕಾನಿಕಲ್, ಎಂಬಿಎ ಪದವಿ ಪಡೆದಿದ್ದ, ಹೆಂಡತಿ ಡಾ. ಸುಜಾತಾ ಎಂಬಿಬಿಎಸ್. ಎಂಡಿ ಮಾಡಿದ್ದು, ಭರತ್ ಗೆ 3.5 ವರ್ಷದ ಅವೀಶ್ ಸೂರ್ಯಾಂಶ್ ಅನ್ನೋ ಮಗನಿದ್ದಾನೆ. ಈ ತಿಂಗಳು ಏಪ್ರಿಲ್ 11 ರಂದು ಭರತ್ ಭೂಷಣ್ ತೀರಿಕೊಂಡ ನಕ್ಷತ್ರದ ಪ್ರಕಾರ ಕುಟುಂಬಸ್ಥರು ವರ್ಷದ ತಿಥಿ ಕಾರ್ಯ ಮಾಡಿದ್ದಾರೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಜಮ್ಮ- ಕಾಶ್ಮೀರ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸೇರಿ ಒಟ್ಟು- 35 ಲಕ್ಷದಷ್ಟು ಪರಿಹಾರ ನೀಡಿದ್ರಂತೆ.

ಒಟ್ಟಿನಲ್ಲಿ ಜಮ್ಮ-ಕಾಶ್ಮೀರದ ಪಹಲ್ಗಾಮ್ ದಾಳಿಗೆ ನಾಳೆಗೆ ಒಂದು ವರ್ಷವಾಗ್ತಿದ್ದು, ಉಗ್ರರ ದಾಳಿಗೆ ಬಲಿಯಾದ ಬೆಂಗಳೂರಿನ ಕನ್ನಡಿಗ ಭರತ್ ಭೂಷಣ್ ತಂದೆ-ತಾಯಿ ಭರತ್ ಇಲ್ಲದೆ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 21, 2026 06:35 PM
Follow Us