ಪುನೀತ್​, ಡಾ. ರಾಜ್​ ಬಗ್ಗೆ ಶ್ರುತಿಗೆ ಇದ್ದ 2 ಆಸೆ ಈಡೇರಲೇ ಇಲ್ಲ; ‘ದ್ವಿತ್ವ’ ಬಗ್ಗೆ ಮಾತಾಡಿದ ನಟಿ

Edited By:

Updated on: Apr 10, 2022 | 10:11 AM

ರಾಘವೇಂದ್ರ ರಾಜ್​ಕುಮಾರ್​ ಮತ್ತು ಶ್ರುತಿ ನಟನೆಯ ‘13’ ಸಿನಿಮಾ ಸೆಟ್ಟೇರಿದೆ. ಈ ವೇಳೆ ಡಾ. ರಾಜ್​ಕುಮಾರ್​ ಮತ್ತು ಪುನೀತ್​ ರಾಜ್​​ಕುಮಾರ್​ ಅವರನ್ನು ಶ್ರುತಿ ನೆನಪು ಮಾಡಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಅನುಭವಿ ಕಲಾವಿದೆ ಶ್ರುತಿ (Shruthi) ಅವರು ‘13’ ಶೀರ್ಷಿಕೆಯ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನೆರವೇರಿದೆ. ಅವರ ಜೊತೆ ರಾಘವೇಂದ್ರ ರಾಜ್​ಕುಮಾರ್​ ಕೂಡ ಅಭಿನಯಿಸುತ್ತಿದ್ದಾರೆ. ಮುಹೂರ್ತದ ಸಂದರ್ಭದಲ್ಲಿ ಡಾ. ರಾಜ್​ಕುಮಾರ್​ (Dr Rajkumar) ಕುಟುಂಬದ ಬಗ್ಗೆ ಮತ್ತು ಪುನೀತ್​ ರಾಜ್​ಕುಮಾರ್​ (Puneeth Rajkumar) ಬಗ್ಗೆ ಶ್ರುತಿ ಮಾತನಾಡಿದರು. ‘ರಾಜ್​ಕುಮಾರ್​ ಅವರ ಬ್ಯಾನರ್​ ಮೂಲಕ ನಾನು ಚಿತ್ರರಂಗಕ್ಕೆ ಬಂದಾಗ ಅವರ ಜೊತೆ ನಟಿಸಬೇಕು ಎಂಬ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ‘ದ್ವಿತ್ವ’ ಚಿತ್ರಕ್ಕೆ ನಾನು ಸಹಿ ಮಾಡಿದೆ. 15 ದಿನ ಆಗಿದ್ದರೆ ನಾನು ಅಪ್ಪು ಅವರ ಜೊತೆ ನಟಿಸಬೇಕಿತ್ತು. ಆಗಲಿಲ್ಲ ಅಂತ ಬಹಳ ನೋವಿದೆ ನನಗೆ’ ಎಂದು ಹೇಳಿದ್ದಾರೆ ಶ್ರುತಿ. ಈಗ ರಾಘವೇಂದ್ರ ರಾಜ್​ಕುಮಾರ್​ ಜೊತೆ ನಟಿಸುತ್ತಿರುವುದಕ್ಕೆ ತಮಗೆ ಹೆಮ್ಮೆ ಇದೆ ಎಂದಿದ್ದಾರೆ.

ಇದನ್ನೂ ಓದಿ:

‘ಇದು ಲವ್ ಮ್ಯಾರೇಜ್​, ಲವ್ ಜಿಹಾದ್ ಅಲ್ಲ’; ನಟಿ ಶ್ರುತಿ ಹೀಗೆ ಹೇಳಿದ್ದೇಕೆ?

ರಾಘವೇಂದ್ರ ರಾಜ್​ಕುಮಾರ್​-ಶ್ರುತಿ ಹೊಸ ಚಿತ್ರ ‘13’; ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದ ಮುಹೂರ್ತ

Loading...
Unable to load recommendations.
Follow Us