17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ ನೋಡಿ..

Updated on: Jan 29, 2026 | 7:34 PM

ವಿಧಾನಸೌಧದ ಮುಂಭಾಗದಲ್ಲಿ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಆಗಿದೆ. ಇಂದು (ಜ.29) ಸಿಎಂ ಸಿದ್ದರಾಮಯ್ಯ ಅವರು ಚಿತ್ರೋತ್ಸವ ಉದ್ಘಾಟನೆ ಮಾಡಿದ್ದಾರೆ. ‘ಸ್ತ್ರೀ ಎಂದರೇ ಅಷ್ಟೇ ಸಾಕೆ’ ಎಂಬ ಥೀಮ್​​ನಲ್ಲಿ ಈ ಬಾರಿಯ ಬೆಂಗಳೂರು ಚಲನಚಿತ್ರೋತ್ಸವ ನಡೆಯಲಿದೆ. ಲೈವ್ ವಿಡಿಯೋ ಇಲ್ಲಿದೆ ನೋಡಿ..

ವಿಧಾನಸೌಧದ ಮುಂಭಾಗದಲ್ಲಿ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (17th Bengaluru International Film Festival) ಉದ್ಘಾಟನೆ ಆಗಿದೆ. ಇಂದು (ಜನವರಿ 29) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚಿತ್ರೋತ್ಸವ ಉದ್ಘಾಟನೆ ಮಾಡಿದ್ದಾರೆ. ‘ಸ್ತ್ರೀ ಎಂದರೇ ಅಷ್ಟೇ ಸಾಕೆ’ ಎಂಬ ಥೀಮ್​​ನಲ್ಲಿ ಈ ಬಾರಿಯ ಸಿನಿಮೋತ್ಸವ ನಡೆಯಲಿದೆ. ನಟ ಪ್ರಕಾಶ್ ರಾಜ್, ನಟಿ ರುಕ್ಮಿಣಿ ವಸಂತ್ ಸೇರಿದಂತೆ ಹಲವರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ವಾರ್ತಾ ಇಲಾಖೆ, ಚಲನಚಿತ್ರ ಅಕಾಡೆಮಿ ಹಾಗೂ ಚಲನ‌ಚಿತ್ರ ವಾಣಿಜ್ಯ ಮಂಡಳಿ ಸಹಯೋಗದೊಂದಿಗೆ ಈ ಸಿನಿಮೋತ್ಸವ ನಡೆಯುತ್ತಿದೆ. ಇಂದಿನಿಂದ ಫೆಬ್ರವರಿ 6ರವರೆಗೂ ನಡೆಯಲಿದೆ. ಬೆಂಗಳೂರಿನ ರಾಜಾಜಿನಗರದ ಲುಲು ಮಾಲ್‍ನ ಸಿನಿಪೊಲಿಸ್‍ ಮಲ್ಟಿಪ್ಲೆಕ್ಸ್, ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿ ಮತ್ತು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಿನಿಮಾಗಳ ಪ್ರದರ್ಶನ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.