ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಬಿಜೆಪಿ ಶಾಸಕ
ವಿಧಾನಸಭೆ ಅಧಿವೇಶನದಲ್ಲಿಂದು ಬಳ್ಳಾರಿ ಬ್ಯಾನರ್ ಗಲಾಟೆ ಬಾರೀ ಸದ್ದು ಮಾಡಿದ್ದು, ಈ ವೇಳೆ ಮಧ್ಯೆ ಪ್ರವೇಶಿಸಿದ ಬಿಜೆಪಿ ಶಾಸಕ ಮುನಿರತ್ನ ಸಹ ತಮ್ಮ ರಾಜರಾಜೇಶ್ವರಿ ಕ್ಷೇತ್ರದಲ್ಲಿನ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ನಾನೊಬ್ಬ ಶಾಸಕನಾಗಿ ಗನ್ಮ್ಯಾನ್ ಬೇಕೆಂದು ಮನವಿ ಮಾಡಿದ್ದೆ. ಸ್ಪೀಕರ್, ಸಿಎಂ, ಗೃಹ ಸಚಿವರು ಸೇರಿ ಎಲ್ಲರಿಗೂ ಮನವಿ ಕೊಟ್ಟಿದ್ದೆ. ಈಗ ಸಿಎಂ ಸಿದ್ದರಾಮಯ್ಯನವರು ಗನ್ಮ್ಯಾನ್ ನೀಡಿದ್ದಾರೆ. ಅವರು ಚೆನ್ನಾಗಿರಬೇಕು. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಸೋತಿರುವವರು MLA ಅಂತಿದ್ದಾರೆ. ಯಾರು, ಯಾವಾಗ ಏನಾಗಬೇಕೆಂದು ದೇವರು ಹಣೆಯಲ್ಲಿ ಬರೆದಿರ್ತಾನೆ. ಕ್ಷೇತ್ರದಲ್ಲಿ ಕೆಲವರು ಹಿಂಸೆ ಕೊಡುತ್ತಾರೆ. ಅದರಲ್ಲೇ ಖುಷಿ ಪಡುತ್ತಿದ್ದಾರೆ ಎಂದು ಹೆಸರು ಹೇಳದ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದರು.
ಬೆಂಗಳೂರು, (ಜನವರಿ 29):ವಿಧಾನಸಭೆ ಅಧಿವೇಶನದಲ್ಲಿಂದು ( Assembly Session) ಬಳ್ಳಾರಿ ಬ್ಯಾನರ್ ಗಲಾಟೆ (Bellary Banner Row) ಬಾರೀ ಸದ್ದು ಮಾಡಿದ್ದು, ಈ ವೇಳೆ ಮಧ್ಯೆ ಪ್ರವೇಶಿಸಿದ ಬಿಜೆಪಿ ಶಾಸಕ ಮುನಿರತ್ನ (Munirathna) ಸಹ ತಮ್ಮ ರಾಜರಾಜೇಶ್ವರಿ ಕ್ಷೇತ್ರದಲ್ಲಿನ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ನಾನೊಬ್ಬ ಶಾಸಕನಾಗಿ ಗನ್ಮ್ಯಾನ್ ಬೇಕೆಂದು ಮನವಿ ಮಾಡಿದ್ದೆ. ಸ್ಪೀಕರ್, ಸಿಎಂ, ಗೃಹ ಸಚಿವರು ಸೇರಿ ಎಲ್ಲರಿಗೂ ಮನವಿ ಕೊಟ್ಟಿದ್ದೆ. ಈಗ ಸಿಎಂ ಸಿದ್ದರಾಮಯ್ಯನವರು ಗನ್ಮ್ಯಾನ್ ನೀಡಿದ್ದಾರೆ. ಅವರು ಚೆನ್ನಾಗಿರಬೇಕು. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಸೋತಿರುವವರು MLA ಅಂತಿದ್ದಾರೆ. ಯಾರು, ಯಾವಾಗ ಏನಾಗಬೇಕೆಂದು ದೇವರು ಹಣೆಯಲ್ಲಿ ಬರೆದಿರ್ತಾನೆ. ಕ್ಷೇತ್ರದಲ್ಲಿ ಕೆಲವರು ಹಿಂಸೆ ಕೊಡುತ್ತಾರೆ. ಅದರಲ್ಲೇ ಖುಷಿ ಪಡುತ್ತಿದ್ದಾರೆ ಎಂದು ಹೆಸರು ಹೇಳದ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದರು.
ರಾಜರಾಜೇಶ್ವರಿನಗರ ಸೂಕ್ಷ್ಮ ಪ್ರದೇಶ ಎಂದು ಹೇಳುತ್ತಾರೆ. ಇದುವರೆಗೆ ಎಷ್ಟು ಪೊಲೀಸ್ ಅಧಿಕಾರಿಗಳು ಅಮಾನತಾಗಿದ್ದಾರೆ ಗೊತ್ತಾ? ಕ್ಷೇತ್ರದಲ್ಲಿ ಪೊಲೀಸರಾಗಿ ಬರಬೇಕೆಂದರೆ MLA ವಿರುದ್ಧ ಕೇಸ್ ಹಾಕ್ಬೇಕು. ಅಂಥವರಿಗೆ ಮಾತ್ರ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಅವಕಾಶ ಕೊಡ್ತಾರೆ. ಮೊಟ್ಟೆ ಹೊಡದ್ರೆ ದೂರು ಸ್ವೀಕರಿಸಲ್ಲ, ಕಾರು ಹೊಡೆದ್ರೆ ದೂರು ಪಡೆಯಲ್ಲ. ದಯವಿಟ್ಟು ಒಬ್ಬ ಶಾಸಕನಿಗೆ ರಕ್ಷಣೆ ಕೊಡಿ ಎಂದು ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

