ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಎಸ್ಪಿ
ರಾಯಚೂರು ಜಿಲ್ಲೆಯ ಸಿಂಧನೂರು ಉಪವಿಭಾಗದ ಕವಿತಾಳ ಪೊಲೀಸ್ ಠಾಣೆಯಲ್ಲಿ 2026ರ ಜನವರಿ 21ರಂದು ಗಂಭೀರ ಕೊಲೆ ಪ್ರಕರಣ ವರದಿಯಾಗಿದೆ. ನಾಲ್ಕು ತಿಂಗಳ ಗರ್ಭಿಣಿ 24 ವರ್ಷದ ಶ್ರೀಮತಿ ರೇಖಾ ಅವರನ್ನು ಅವರ ಮಾವ ಶ್ರೀ ಸಿದ್ದಪ್ಪ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಆರೋಪಿ ಸಿದ್ದಪ್ಪ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಯಚೂರು, ಜನವರಿ 29: ಜಿಲ್ಲೆಯ ಸಿರವಾರ ತಾಲೂಕಿನ ಚಿಕ್ಕಹಣಗಿ ಗ್ರಾಮದಲ್ಲಿ ಬುಧವಾರ ಗರ್ಭಿಣಿ ಸೊಸೆಯನ್ನು ಮಾವ ಕತ್ತು ಸೀಳಿ ಕೊಲೆಗೈದಿದ್ದ ಘಟನೆ ನಡೆದಿತ್ತು. ಸದ್ಯ ಆರೋಪಿ ಮಾವ ಸಿದ್ದಪ್ಪನನ್ನು ಕವಿತಾಳ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ರಾಯಚೂರು ಎಸ್ಪಿ ಮಾತನಾಡಿದ್ದು, ಸೊಸೆ ರೇಖಾ ಮತ್ತು ಸಿದ್ದಪ್ಪ ನಡುವೆ ಹಿಂದಿನಿಂದಲೂ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಗರ್ಭಿಣಿ ಹಿನ್ನೆಲೆ ರೇಖಾ ತಮ್ಮ ಪೋಷಕರ ಮನೆಗೆ ಬಂದಿದ್ದರು. ನಿನ್ನೆ ಸಿದ್ದಪ್ಪ, ರೇಖಾರ ಮನೆಗೆ ಬಂದು ಚಾಕುವಿನಿಂದ ಇರಿದು ರೇಖಾ ಅವರನ್ನು ಕೊಲೆ ಮಾಡಿದ್ದ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jan 29, 2026 07:48 PM
