ಮೈಸೂರು: 188 ವರ್ಷಗಳ ಹಳೆಯದಾದ ಗರಡಿ ಮನೆ ಗೋಡೆ ಕುಸಿತ

| Updated By: ವಿವೇಕ ಬಿರಾದಾರ

Updated on: Dec 04, 2024 | 11:31 AM

ಫೆಂಗಲ್ ಚಂಡಮಾರುತದಿಂದ ಮೈಸೂರಿನಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ 188 ವರ್ಷಗಳ ಹಳೆಯದಾದ ಗರಡಿ ಮನೆಯ ಗೋಡೆ ಕುಸಿತವಾಗಿದೆ. ಇರ್ವಿನ್ ರಸ್ತೆಯಲ್ಲಿ ಉಸ್ತಾದ್ ಶ್ರೀನಿವಾಸಣ್ಣನವರ ಗರಡಿ 1836ರಲ್ಲಿ ರಾಜರ ಸಹಾಯದಿಂದ ನಿರ್ಮಾಣ ಮಾಡಲಾಗಿದೆ.

ಫೆಂಗಲ್ ಚಂಡಮಾರುತದಿಂದ ಮೈಸೂರಿನಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ 188 ವರ್ಷಗಳ ಹಳೆಯದಾದ ಗರಡಿ ಮನೆಯ ಗೋಡೆ ಕುಸಿತವಾಗಿದೆ. ಇರ್ವಿನ್ ರಸ್ತೆಯಲ್ಲಿ ಉಸ್ತಾದ್ ಶ್ರೀನಿವಾಸಣ್ಣನವರ ಗರಡಿ 1836ರಲ್ಲಿ ರಾಜರ ಸಹಾಯದಿಂದ ನಿರ್ಮಾಣ ಮಾಡಲಾಗಿದೆ. ಈ ಗರಡಿ ಮನೆಯಲ್ಲಿ ಪ್ರತಿದಿನ ಪೈಲ್ವಾನರು ಕಸರತ್ತು ನಡೆಸುತ್ತಿದ್ದರು. ಕಳೆದ 3-4 ದಿನಗಳಿಂದ ಎಡೆ ಬಿಡದೆ ಮಳೆ‌ ಸುರಿದ ಪರಿಣಾಮ ಮಟ್ಟಿ ಮನೆಯ ಗೋಡೆ ಕುಸಿತವಾಗಿದೆ. ಪಾರಂಪರಿಕ ಕಟ್ಟಡವಾದ ಹಿನ್ನೆಲೆ‌ಯಲ್ಲಿ ಗರಡಿ ಮನೆ ಸಂರಕ್ಷಿಸುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.