ಹೋರಾಟ ಮಾಡಲು ವಿಜಯೇಂದ್ರಗೆ ಏನೂ ಉಳಿದಿಲ್ಲ, ನಾವು ಈಗಾಗಲೇ ವರದಿ ಕೂಡ ಸಲ್ಲಿಸಿದ್ದೇವೆ: ಯತ್ನಾಳ್
ಯತ್ನಾಳ್ಗೆ ರಾಜ್ಯದಲ್ಲಿ ಪ್ರಾಮುಖ್ಯತೆ ಹೆಚ್ಚಾಗುತ್ತದೆ ಎಂಬ ಭೀತಿಯಿಂದ ವಿಜಯೇಂದ್ರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಹೋರಾಟಕ್ಕಿಳಿದಿರುವಂತಿದೆ ಅಂತ ಹೇಳಿದಾಗ ಸ್ವಲ್ಪ ಮೃದು ಧಾಟಿಯಲ್ಲಿ ಮಾತಾಡಿದ ಯತ್ನಾಳ್, ಏನಾದರೂ ಮಾಡಿಕೊಳ್ಳಲಿ, ಆದರೆ ಹೊಂದಾಣಿಕೆ ರಾಜಕಾರಣ ಮಾಡದಿದ್ದರೆ ಸಾಕು ಎಂದರು.
ದೆಹಲಿ: ತನ್ನ ವಿರುದ್ಧ ಶೋಕಾಸ್ ನೋಟೀಸ್ ಜಾರಿಮಾಡಿದರೂ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಎರಡು-ಮೂರು ದಿನಗಳಿಂದ ದೆಹಲಿಯಲ್ಲಿರುವ ಅವರು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ, ಪಕ್ಷದ ರಾಜ್ಯಾಧ್ಯಕ್ಷರಿಗೆ ಈಗ ಜ್ಞಾನೋದಯವಾದಂತಿದೆ, ಇವತ್ತು ಅವರು ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿ ಮತ್ತು ಬೀದರ್ನಲ್ಲಿ ರೈತರನ್ನು ಭೇಟಿಯಾಗುತ್ತಿದ್ದಾರೆ, ಪ್ರಾಯಶಃ ವಕ್ಫ್ ವಿರುದ್ಧ ಇದು ಅವರ ಮೊದಲ ಹೋರಾಟವಿರಬಹುದು, ಅದರೆ ಈಗ ಹೋರಾಟ ಮಾಡವಂದಥದ್ದು ಏನೂ ಇಲ್ಲ, ತಮ್ಮ ತಂಡ ರೈತರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ದಾಖಲಿಸಿಕೊಂಡು ದಾಖಲೆ ಸಮೇತ ವರದಿಯನ್ನು ಜೆಪಿಸಿಗೆ ನೀಡಿದೆ ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೆಹಲಿಯಲ್ಲಿ ಯತ್ನಾಳ್ ತಂಡ ರಹಸ್ಯ ಸಭೆ
Latest Videos