ಡಾ ಶಿವಕುಮಾರ ಸ್ವಾಮೀಜಿ 115ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ 20 ಎಕರೆ ಜಾಗವನ್ನು ಪಾರ್ಕಿಂಗ್​ಗೆ ಗೊತ್ತು ಮಾಡಲಾಗಿತ್ತು

ಡಾ ಶಿವಕುಮಾರ ಸ್ವಾಮೀಜಿ 115ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ 20 ಎಕರೆ ಜಾಗವನ್ನು ಪಾರ್ಕಿಂಗ್​ಗೆ ಗೊತ್ತು ಮಾಡಲಾಗಿತ್ತು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Apr 01, 2022 | 11:55 PM

ಅಮಿತ್ ಶಾ ಅವರಿಗೆ ವೈಯಕ್ತಿಕ ಭದ್ರತೆ ಇದ್ದೇ ಇರುತ್ತದೆ ಆದಾಗ್ಯೂ ಬಿಗಿ ಪೊಲೀಸ್​ ಬಂದೋಬಸ್ತ್​ ಮಠದ ಸುತ್ತ ಮಾಡಲಾಗಿತ್ತು. ಲಕ್ಷಾಂತರ ಜನ ಸೇರಿದಾಗ ಮತ್ತು ಅತಿ ಗಣ್ಯರೆನಿಸಿಕೊಂಡವರು ಕಾರ್ಯಕ್ರಮದಲ್ಲಿ ಭಾಗಿಯಾಗುವಾಗ ಭದ್ರತೆ ಬಹಳ ಪ್ರಮುಖ ಅಂಶ ಅನಿಸಿಕೊಳ್ಳುತ್ತದೆ.

ಡಾ ಶಿವಕುಮಾರ ಸ್ವಾಮೀಜಿ (Dr Shivakumar Swamiji) 115ನೇ ಜಯಂತೋತ್ಸವ ಹಾಗೂ ಸಿದ್ದಗಂಗಾ ಮಠದಲ್ಲಿ (Siddaganga Mutt) ಗುರುವಂದನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಾರ್ಕಿಂಗ್ (parking) ಗಾಗಿ 20 ಎಕರೆ ಜಾಗವನ್ನು ಗೊತ್ತು ಮಾಡಲಾಗಿತ್ತು. ನಿಮಗೆ ಕಾಣುತ್ತಿರುವ ವಿಡಿಯೋ ಕಾರ್ಯಕ್ರಮ ಆರಂಭಗೊಳ್ಳುವ ಸಾಕಷ್ಟು ಮೊದಲು ಶೂಟ್​ ಮಾಡಿದ್ದು ಮಾರಾಯ್ರೇ. ಟಿವಿ9 ಕನ್ನಡ ವಾಹಿನಿ ತುಮಕೂರು ಪ್ರತಿನಿಧಿ ಈ ವರದಿಯನ್ನು ಶುಕ್ರವಾರ ಬೆಳಗ್ಗೆ ಕಳಿಸಿದ್ದರು. ನಿಮಗೆ ಕಾಣುತ್ತಿರುವ ಹಾಗೆ ಪಾರ್ಕಿಂಗ್​ ಗೆ ಗೊತ್ತು ಮಾಡಿರುವ ಜಾಗದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ವಾಹನಗಳಿವೆ. ಸಿದ್ದಗಂಗಾ ಮಠದ ಹಿಂಭಾಗದಲ್ಲಿ ಬಂಡೆಪಾಳ್ಯ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಈಗಾಗಲೇ ವರದಿಯಾಗಿರುವಂತೆ ಕೇಂದ್ರ ಗೃಹ ಸಚಿವ ಆಮಿತ್ ಶಾ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಷಿ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕಾಂಗ್ರೆಸ್ ಧುರೀಣ ಜಿ ಪರಮೇಶ್ವರ, ಹಲವಾರು ಮಠಾಧೀಶರು ಸೇರಿದಂತೆ ಅನೇಕ ಗಣ್ಯರು ಮತ್ತು ಲಕ್ಷಾಂತರ ಭಕ್ತರು ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಡಿದ್ದರು.

ಅಮಿತ್ ಶಾ ಅವರಿಗೆ ವೈಯಕ್ತಿಕ ಭದ್ರತೆ ಇದ್ದೇ ಇರುತ್ತದೆ ಆದಾಗ್ಯೂ ಬಿಗಿ ಪೊಲೀಸ್​ ಬಂದೋಬಸ್ತ್​ ಮಠದ ಸುತ್ತ ಮಾಡಲಾಗಿತ್ತು. ಲಕ್ಷಾಂತರ ಜನ ಸೇರಿದಾಗ ಮತ್ತು ಅತಿ ಗಣ್ಯರೆನಿಸಿಕೊಂಡವರು ಕಾರ್ಯಕ್ರಮದಲ್ಲಿ ಭಾಗಿಯಾಗುವಾಗ ಭದ್ರತೆ ಬಹಳ ಪ್ರಮುಖ ಅಂಶ ಅನಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ತುಮಕೂರು ಮತ್ತು ಕಾರ್ಯಕ್ರಮಕ್ಕಾಗಿ ನಿಯೋಜಿಸಲ್ಪಟ್ಟಿದ್ದ ಬೇರೆ ಜಿಲ್ಲೆಗಳ ಪೋಲಿಸರನ್ನು ಅಭಿನಂದಿಸಲೇಬೇಕು.

ವಾಹನಗಳ ಪಾರ್ಕಿಂಗ್ ಗೆ ಮಾಡಿದ ಸಾವಿರಾರು ವಾಹನಗಳಿದ್ದರೂ ಕಾರ್ಯಕ್ರಮ ಮುಗಿದ ಬಳಿಕ ಗಲಾಟೆಯಂಥ ಸಂಗತಿಗಳು ಸಂಭವಿಸಲಿಲ್ಲ.

ಇದನ್ನೂ ಓದಿ:   ತುಮಕೂರು: ರಾಷ್ಟ್ರೀಯ ಹೆದ್ದಾರಿಗೆ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ- ಪೂರ್ಣ ಮಾಹಿತಿ ಇಲ್ಲಿದೆ

 

Published on: Apr 01, 2022 09:56 PM