ಹಿರಿಯ ಕಾಂಗ್ರೆಸ್ ನಾಯಕ ಪರಮೇಶ್ವರರನ್ನು ಅಮಿತ್ ಶಾಗೆ ಪರಿಚಯಿಸಿದರು ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪರಮೇಶ್ವರ ಅವರ ನಡುವೆ ಉತ್ತಮ ಸ್ನೇಹವಿದೆ. ಈ ವಿಡಿಯೋ ನೋಡಿದರೆ ಅದು ನಿಮಗೂ ಗೊತ್ತಾಗುತ್ತದೆ. ವೇದಿಕೆ ಮೇಲೆ ಅವರಿಬ್ಬರು ಸ್ವಲ್ಪ ಹೊತ್ತು ಗಹನವಾಗಿ ಮಾತಾಡುತ್ತಾರೆ ಮತ್ತು ಆಮೇಲೆ ಬೊಮ್ಮಾಯಿ ಅವರು ಪರಮೇಶ್ವರರನ್ನು ಕರೆತಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪರಿಚಯಿಸುತ್ತಾರೆ.

TV9kannada Web Team

| Edited By: Arun Belly

Apr 01, 2022 | 8:50 PM

ತುಮಕೂರು: ಹಿಂದೊಮ್ಮೆ ಕರ್ನಾಟಕ ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ (G Parameshwara) ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿರಬಹುದು, ಆದರೆ ಅವರು ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಹೆವಿವೇಟ್ಗಳಲ್ಲಿ ಒಬ್ಬರು. ಕಾಂಗ್ರೆಸ್ (Congress) ಪಕ್ಷದ ನಾಯಕರಲ್ಲಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಒಳಜಗಳಗಳು ಇಂದಿರಾಗಾಂಧಿಯವರ (Indira Gandhi) ಜಮಾನಾದಿಂದಲೂ ಇವೆ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಈ ಸಂಪ್ರದಾಯಕ್ಕೆ ಹೊರತಾಗೇನೂ ಇಲ್ಲ. ಆದರೆ ತುಮಕೂರಿನಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ ಹಲವಾರು ಕಾಲೇಜುಗಳನ್ನು ನಡೆಸುತ್ತಿರುವ ಪರಮೇಶ್ವರ ಅವರು ಇತ್ತೀಚಿನ ದಿನಗಳಲ್ಲಿ ಪಕ್ಷದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ.

ಅವರ ಬಗ್ಗೆ ಮಾತಾಡಲು ಕಾರಣವಿದೆ ಮಾರಾಯ್ರೇ. ಶುಕ್ರವಾರ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಡಾ. ಶಿವಕುಮಾರ ಸ್ವಾಮೀಜಿ (Dr Shivakumar Swamiji) ಅವರ 115 ನೇ ಜಯಂತ್ಯುತ್ಸವ ಮತ್ತು ಗುರುವಂದನಾ ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರಲ್ಲಿ ಪರಮೇಶ್ವರ ಒಬ್ಬರಾಗಿದ್ದರು.

ಕಾರ್ಯಕ್ರಮ ಆರಂಭವಾಗುವ ಮೊದಲು ವೇದಿಕೆ ಮೇಲೆ ಒಂದು ಅಚ್ಚರಿಯ ಸಂಗತಿ ನೋಡಲು ಸಿಕ್ಕಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪರಮೇಶ್ವರ ಅವರ ನಡುವೆ ಉತ್ತಮ ಸ್ನೇಹವಿದೆ ಮಾರಾಯ್ರೇ. ಈ ವಿಡಿಯೋ ನೋಡಿದರೆ ಅದು ನಿಮಗೂ ಗೊತ್ತಾಗುತ್ತದೆ. ವೇದಿಕೆ ಮೇಲೆ ಅವರಿಬ್ಬರು ಸ್ವಲ್ಪ ಹೊತ್ತು ಗಹನವಾಗಿ ಮಾತಾಡುತ್ತಾರೆ ಮತ್ತು ಆಮೇಲೆ ಬೊಮ್ಮಾಯಿ ಅವರು ಪರಮೇಶ್ವರರನ್ನು ಕರೆತಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪರಿಚಯಿಸುತ್ತಾರೆ. ಗಣ್ಯರು ನಗುತ್ತಾ ನಮಸ್ಕಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಅಂದಹಾಗೆ, ಶುಕ್ರವಾರ ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ಬೆಂಗಳೂರಲ್ಲಿದ್ದರು ಮತ್ತು ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೆಪಿಸಿಸಿ ನಾಯಕರ ಚರ್ಚೆ ನಡೆಸಿದರು. ಪರಮೇಶ್ವರ ಅವರು ಸಭೆಯಲ್ಲಿ ಭಾಗಿಯಾಗಿದ್ದರೋ ಇಲ್ಲವೋ ಅಂತ ಗೊತ್ತಿಲ್ಲ ಮಾರಾಯ್ರೇ.

ಇದನ್ನೂ ಓದಿ:   ಡಾ. ಶಿವಕುಮಾರ ಸ್ವಾಮೀಜಿ ಜಯಂತೋತ್ಸವ: ಮಠಕ್ಕೆ ಆಗಮಿಸಿ, ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದ ಅಮಿತ್ ಶಾ

Follow us on

Click on your DTH Provider to Add TV9 Kannada