AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ. ಶಿವಕುಮಾರ ಸ್ವಾಮೀಜಿ ಜಯಂತೋತ್ಸವ: ಮಠಕ್ಕೆ ಆಗಮಿಸಿ, ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದ ಅಮಿತ್ ಶಾ

ಸಿದ್ದಗಂಗಾ ಮಠದಲ್ಲಿ ಅಮಿತ್ ಶಾ ಮೇಲೆ ಹೂವಿನ ಮಳೆಗೈದು ಅದ್ಧೂರಿ ಸ್ವಾಗತ ಕೋರಲಾಗಿದೆ. ಬಿಜೆಪಿ ಕಾರ್ಯಕರ್ತರಿಂದ ಅಮಿತ್ ಶಾಗೆ ಅದ್ಧೂರಿ ಸ್ವಾಗತ ಲಭಿಸಿದೆ. ವಿದ್ಯಾರ್ಥಿಗಳು ಅಮಿತ್ ಶಾಗೆ ಪೂರ್ಣಕುಂಭ ಸ್ವಾಗತ ಕೋರಿದ್ದಾರೆ. ನಂತರ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಶಾ, ಗದ್ದುಗೆಗೆ ಪೂಜೆ ಸಲ್ಲಿಸಿದ್ದಾರೆ.

ಡಾ. ಶಿವಕುಮಾರ ಸ್ವಾಮೀಜಿ ಜಯಂತೋತ್ಸವ: ಮಠಕ್ಕೆ ಆಗಮಿಸಿ, ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದ ಅಮಿತ್ ಶಾ
TV9 Web
| Updated By: ganapathi bhat|

Updated on:Apr 01, 2022 | 12:18 PM

Share

ತುಮಕೂರು: ಇಲ್ಲಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತೋತ್ಸವ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತುಮಕೂರಿಗೆ ಆಗಮಿಸಿದ್ದಾರೆ. ತುಮಕೂರು ವಿವಿಯ ಹೆಲಿಪ್ಯಾಡ್‌ಗೆ ಅಮಿತ್ ಶಾ ಆಗಮಿಸಿದ್ದಾರೆ. ಅಮಿತ್ ಶಾರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ವಾಗತಿಸಿದ್ದಾರೆ. ಬಳಿಕ, ಅಮಿತ್ ಶಾ ರಸ್ತೆ ಮಾರ್ಗವಾಗಿ ಸಿದ್ದಗಂಗಾ ಮಠದತ್ತ ತೆರಳಿದ್ದಾರೆ. ಸಿದ್ದಗಂಗಾ ಮಠದಲ್ಲಿ ಅಮಿತ್ ಶಾ ಮೇಲೆ ಹೂವಿನ ಮಳೆಗೈದು ಅದ್ಧೂರಿ ಸ್ವಾಗತ ಕೋರಲಾಗಿದೆ. ಬಿಜೆಪಿ ಕಾರ್ಯಕರ್ತರಿಂದ ಅಮಿತ್ ಶಾಗೆ ಅದ್ಧೂರಿ ಸ್ವಾಗತ ಲಭಿಸಿದೆ. ವಿದ್ಯಾರ್ಥಿಗಳು ಅಮಿತ್ ಶಾಗೆ ಪೂರ್ಣಕುಂಭ ಸ್ವಾಗತ ಕೋರಿದ್ದಾರೆ. ನಂತರ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಶಾ, ಗದ್ದುಗೆಗೆ ಪೂಜೆ ಸಲ್ಲಿಸಿದ್ದಾರೆ.

ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 115ನೇ ಜಯಂತಿ ಹಿನ್ನೆಲೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಗುರುವಂದನಾ ಕಾರ್ಯಕ್ರಮ ‘ನಡೆದಾಡುವ ದೇವರ ಬಸವ ಭಾರತ’ ಹೆಸರಿನಲ್ಲಿ ನಡೆಯುತ್ತಿದೆ. ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಅಮಿತ್ ಶಾ ಚಾಲನೆ ನೀಡಿದ್ದಾರೆ. ಈ ವೇಳೆ, ಬಿಸಿಯೂಟ ಯೋಜನೆಗೆ ಡಾ. ಶಿವಕುಮಾರಶ್ರೀಗಳ ಹೆಸರಿಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಬಿ.ವೈ. ವಿಜಯೇಂದ್ರ ಮನವಿ ಮಾಡಿದ್ದಾರೆ. ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿದ್ಧಗಂಗಾ ಮಠದಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ ಮನವಿ ಮಾಡಿದ್ದಾರೆ.

ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 115ನೇ ಜಯಂತಿ ಹಿನ್ನೆಲೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ತುಮಕೂರು ಸಿದ್ಧಗಂಗಾ ಮಠದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯುತ್ತಿದೆ. ‘ನಡೆದಾಡುವ ದೇವರ ಬಸವ ಭಾರತ’ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಂದು (ಏಪ್ರಿಲ್ 1) ದಿನಪೂರ್ತಿ ಕಾರ್ಯಕ್ರಮ ಇರಲಿದ್ದು ಸುಮಾರು 4 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಆಗಮಿಸಿದವರಿಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮಗಳು ಇರಲಿದೆ.

ಅರಮನೆ ಮೈದಾನದಲ್ಲಿ ಸಹಕಾರ ಸಮ್ಮೇಳನ; ಬದಲಿ ಮಾರ್ಗ ಬಳಸಲು ಸೂಚನೆ

ಇತ್ತ ಅರಮನೆ ಮೈದಾನದಲ್ಲಿ ಇಂದು ಸಹಕಾರ ಸಮ್ಮೇಳನ ಹಿನ್ನೆಲೆ, ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಭಾಗಿ ಆಗುತ್ತಿದ್ದಾರೆ. ಈ ಕಾರಣ, ಅರಮನೆ ಮೈದಾನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ ಇದೆ. ಹೀಗಾಗಿ ಪರ್ಯಾಯ ಮಾರ್ಗ ಬಳಸಲು ಪೊಲೀಸರಿಂದ ಸೂಚನೆ ನೀಡಲಾಗಿದೆ. ಬೆಂಗಳೂರು ನಗರದಿಂದ ಏರ್‌ಪೋರ್ಟ್‌ಗೆ ಹೋಗುವವರು ಚಾಲುಕ್ಯ ವೃತ್ತ, ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಕಾವೇರಿ ಜಂಕ್ಷನ್, ದೇವರಾಜ್ ಆಳ್ವ ರಸ್ತೆ, ಸದಾಶಿವನಗರ ಪಿಎಸ್ ಜಂಕ್ಷನ್, ನ್ಯೂ ಬಿಇಎಲ್ ರಸ್ತೆ, ದೇವಸಂದ್ರ, ಹೆಬ್ಬಾಳ ಮಾರ್ಗದಲ್ಲಿ ಸಂಚರಿಸಲು ಸೂಚನೆ ಕೊಡಲಾಗಿದೆ.

ಎಂ.ಜಿ.ರಸ್ತೆಯಿಂದ ಏರ್‌ಪೋರ್ಟ್‌ ಕಡೆ ಹೋಗುವವರು ಎಂ.ಜಿ.ರಸ್ತೆ, ಕಾಮರಾಜ ರಸ್ತೆ, ವ್ಹೀಲರ್ ರಸ್ತೆ, ಮಾರುತಿ ಸೇವಾ ನಗರ, ಹೊರ ವರ್ತುಲ ರಸ್ತೆ, ಥಣಿಸಂದ್ರ ಮುಖ್ಯ ರಸ್ತೆ, ಬಾಗಲೂರು ಕ್ರಾಸ್, KIAB ಮೂಲಕ ಮತ್ತು ಏರ್‌ಪೋರ್ಟ್‌ನಿಂದ ಬೆಂಗಳೂರಿಗೆ ಬರುವ ವಾಹನಗಳು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೆಬ್ಬಾಳಕ್ಕೆ ಬಂದು ಹೆಬ್ಬಾಳದಿಂದ ಬಿಇಎಲ್ ಸರ್ಕಲ್, ಸದಾಶಿವನಗರ ಠಾಣೆ, ಬಿಹೆಚ್ಇಎಲ್ ವೃತ್ತ, ಮಾರಮ್ಮ ವೃತ್ತ, ಮಾರ್ಗೋಸಾ ರಸ್ತೆ, ಮಾರ್ಗೋಸಾ ರಸ್ತೆ ಮೂಲಕ ಬೆಂಗಳೂರಿಗೆ ಆಗಮಿಸುವಂತೆ ಕೋರಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಬಿಗಿ ಬಂದೋಬಸ್ತ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಕ್ಕಬಳ್ಳಾಪುರಕ್ಕೆ ಆಗಮನ ಹಿನ್ನಲೆ ಮುದ್ದೇನಹಳ್ಳಿ ಗ್ರಾಮದ ಸುತ್ತಲೂ ಖಾಕಿ ಕಾಣ್ಗವಲು ಜೋರಾಗಿದೆ. ಓರ್ವ ಎಸ್.ಪಿ, 2 ಅಡಿಷನಲ್ ಎಸ್.ಪಿ, 5 ಡಿವೈಎಸ್​ಪಿ, 20 ಇನ್ಸ್​ಪೆಕ್ಟರ್ಗಳು, 45 ಪಿಎಸ್​ಐ, 100 ಎಎಸ್ಐ, 230 ಹೆಚ್​ಸಿ, 425 ಪಿಸಿ, 85 ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟಾರೆ 900 ಸಿಬ್ಬಂದಿ ಭದ್ರತೆಗೆ ನೇಮಕ ಮಾಡಲಾಗಿದೆ. 6 ಕೆಎಸ್​ಆರ್​ಪಿ, 4 ಡಿಎಆರ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಲಾ ಅಂಡ್ ಆರ್ಡರ್ ಎಡಿಜಿಪಿ ಶರತ್ ಚಂದ್ರ ಆಗಮಿಸಿದ್ದಾರೆ. ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿ ಸತ್ಯ ಸಾಯಿ ಆಶ್ರಮ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಇದೆ.

ಕೋಲಾರ: ಶಿವಕುಮಾರ ಸ್ವಾಮೀಜಿಗಳ ಜನ್ಮದಿನಾಚರಣೆ

ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳ 115 ನೇ ಜನ್ಮದಿನಾಚರಣೆ ಹಿನ್ನೆಲೆ ಕೋಲಾರದಲ್ಲಿ ಅದ್ದೂರಿಯಾಗಿ ಸಂಭ್ರಮಾಚರಿಸಲಾಗಿದೆ. ಕೋಲಾರದ ಗಾಂಧಿವನದಲ್ಲಿ ಶ್ರೀಗಳ ಜನ್ಮ ದಿನಾಚರಣೆ ಮಾಡಲಾಗಿದೆ. ಸ್ವಾಮಿ ವಿವೇಕಾನಂದ ಯುವ ವೇದಿಕೆ ವತಿಯಿಂದ ಶ್ರೀಗಳಿಗೆ ಪೂಜೆ ಸಲ್ಲಿಸಿ ಗುಣಗಾನ ಮಾಡಲಾಗಿದೆ. ಜನ್ಮದಿನ ಆಚರಣೆಗೆ ಬಂದಂತಹವರಿಗೆ ಮಜ್ಜಿಗೆ, ಚಿತ್ರಾನ್ನ ವಿತರಣೆ ಮಾಡಲಾಗಿದೆ.

ಇದನ್ನೂ ಓದಿ: ಡಾ. ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತೋತ್ಸವ: ವಾಹನ ಸಂಚಾರ, ಪಾರ್ಕಿಂಗ್, ಊಟೋಪಚಾರ ವ್ಯವಸ್ಥೆಯ ಬಗ್ಗೆ ಇಲ್ಲಿದೆ ಮಾಹಿತಿ

Published On - 12:06 pm, Fri, 1 April 22