ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ: ಮದ್ವೆಗೂ ಮುನ್ನವೇ ಕೊರಳಲ್ಲಿ ಅರಿಶಿಣ ಕೊಂಬು ಪತ್ತೆ

Edited By:

Updated on: Nov 26, 2026 | 9:56 PM

ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೆ.ಪಿ.ಅಗ್ರಹಾರದ ಕಡಪಸ್ವಾಮಿ ಮಠದ ಬಳಿ ನಡೆದಿದೆ. 24 ವರ್ಷದ ಭೂಮಿಕಾ ನೇಣಿಗೆ ಶರಣಾದ ಯುವತಿ. ಆದ್ರೆ, ಈ ಆತ್ಮಹತ್ಯೆಗೆ ಹಲವು ಅನುಮಾನಗಳು ಎಡೆಮಾಡಿಕೊಟ್ಟಿದೆ. ಯಾಕಂದ್ರೆ ಮದುವೆಗೂ ಮುನ್ನ ಯುವತಿ ಕೊರಳಲ್ಲಿ ಅರಿಶಿಣ ಕೊಂಬು ಪತ್ತೆಯಾಗಿರುವುದು ಹತ್ತು ಹಲವು ಅನುಮಾನಕ್ಕೆ ಕಾರಣವಾಗಿದೆ.

ಬೆಂಗಳೂರು, ನವೆಂಬರ್ 26): ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೆ.ಪಿ.ಅಗ್ರಹಾರದ ಕಡಪಸ್ವಾಮಿ ಮಠದ ಬಳಿ ನಡೆದಿದೆ. 24 ವರ್ಷದ ಭೂಮಿಕಾ ನೇಣಿಗೆ ಶರಣಾದ ಯುವತಿ. ಆದ್ರೆ, ಈ ಆತ್ಮಹತ್ಯೆಗೆ ಹಲವು ಅನುಮಾನಗಳು ಎಡೆಮಾಡಿಕೊಟ್ಟಿದೆ. ಯಾಕಂದ್ರೆ ಮದುವೆಗೂ ಮುನ್ನ ಯುವತಿ ಕೊರಳಲ್ಲಿ ಅರಿಶಿಣ ಕೊಂಬು ಪತ್ತೆಯಾಗಿರುವುದು ಹತ್ತು ಹಲವು ಅನುಮಾನಕ್ಕೆ ಕಾರಣವಾಗಿದೆ.

ಹೌದು…ಕಿರಣ್ ಎನ್ನುವ ಯುವಕನ ಜೊತೆ ಭೂಮಿಕಾಳ ಮದುವೆ ನಿಶ್ಚಯವಾಗಿದ್ದು, ಜನವರಿವರಿಯಲ್ಲಿ ಮದ್ವೆ ಫಿಕ್ಸ್ ಆಗಿತ್ತು. ಆದ್ರೆ, ಮದುವೆಗೂ ಮುನ್ನ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಲೆ. ಇನ್ನು ಮೃತ ಭೂಮಿಕಾಳ ಕೊರಳಲ್ಲಿ ಅರಿಶಿಣ ಕೊಂಬು ಪತ್ತೆಯಾಗಿದೆ. ಹಾಗಾದ್ರೆ, ಭೂಮಿಕಾ ಕೊರಳಲ್ಲಿ ಪತ್ತೆಯಾದ ಅರಿಶಿಣ ಕೊಂಬು ಯಾವುದು? ಕಿರಣ್ ಬಿಟ್ಟು ಬೇರೆಯವನ ಜೊತೆಗೆ ವಿವಾಹವಾಗಿದ್ಳಾ? ಅದನ್ನು ಮನೆಯವರಿಂದ ಮುಚ್ಚಿಟ್ಟಿದ್ಲಾ? ಹೀಗೆ ಹತ್ತು ಹಲವು ಅನುಮಾನಕ್ಕೆ ಕಾರಣವಾಗಿದೆ.

ಇನ್ನು ಭೂಮಿಕಾ ಆತ್ಮಹತ್ಯೆಗೂ ಮುನ್ನ ಕಾಲೇಜು ಸ್ನೇಹಿತ ಗೌತಮ್​​ಗೆ ಕರೆ ಮಾಡಿದ್ದಾಳೆ. ಗೌತಮ್ ಜೊತೆಗೆ ಆತ್ಮೀಯವಾಗಿದ್ದ ಭೂಮಿಕಾ, ಅತೀ‌ ಹೆಚ್ಚು ಕರೆ, ವಿಡಿಯೋ ಮಾಡುತ್ತಿದ್ದಳು. ಅಲ್ಲದೇ 2 ತಿಂಗಳ ಹಿಂದೆ ಹಳೇ ಕಾಲೇಜು ಸ್ನೇಹಿತರ ಜತೆ ಪ್ರವಾಸಕ್ಕೆ ಹೋಗಿದ್ದಳು. ಆತ್ಮೀಯ ಸ್ನೇಹಿತ ಗೌತಮ್ ಎಂಬಾತ ಕೂಡ ಹೋಗಿದ್ದ. ಸಾವಿಗೂ ಮುನ್ನ ಕೊನೆಯದಾಗಿ ಗೌತಮ್ ಗೆ ಕರೆ ಮಾಡಿದ್ದಾಳೆ. ಹೀಗಾಗಿ ಇನ್ನು ಭೂಮಿಕಾಳ ಸ್ನೇಹಿತ ಗೌತಮ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಕೆ.ಪಿ ಅಗ್ರಹಾರ ಠಾಣೆ ಪೊಲೀಸರು ಸದ್ಯಕ್ಕೆ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನವರು. ಕಳೆದ 2 ವರ್ಷದಿಂದ ಟಿವಿ9 ಕನ್ನಡದ ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ ಅನುಭವವಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದಾರೆ.

Read More