ಬೆಳಗ್ಗೆ ವಾಕಿಂಗ್ ಹೊರಟ ಮೂವರು ಮಹಿಳೆಯರು ಶವವಾಗಿ ಮನೆಗೆ ವಾಪಾಸ್

Updated on: Oct 04, 2025 | 10:32 PM

ಬೆಳಗಿನ ವಾಕಿಂಗ್​ಗೆ ಹೋಗಿದ್ದ ಗಾಜಿಯಾಬಾದ್‌ನ 3 ಮಹಿಳೆಯರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರೆಲ್ಲರೂ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಆ ಮೂವರು ಮಹಿಳೆಯರು ಈ ಅಪಘಾತದಿಂದಾಗಿ ಶವವಾಗಿ ಮನೆ ಸೇರಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸಲ್ವಾರ್ ಧರಿಸಿದ್ದ ಮೂವರು ಮಹಿಳೆಯರು ಒಬ್ಬ ಪುರುಷನೊಂದಿಗೆ ರಸ್ತೆ ದಾಟುತ್ತಿರುವುದನ್ನು ನೋಡಬಹುದು. 

ಗಾಜಿಯಾಬಾದ್, ಅಕ್ಟೋಬರ್ 4: ಗಾಜಿಯಾಬಾದ್‌ನ ಸಿಹಾನಿ ಗೇಟ್ ಪ್ರದೇಶದಲ್ಲಿ ವೇಗವಾಗಿ ಬಂದ ಕಾರು ನಾಲ್ವರು ಪಾದಚಾರಿಗಳ ಮೇಲೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಆ ಮೂವರು ಮಹಿಳೆಯರು ಈ ಅಪಘಾತದಿಂದಾಗಿ ಶವವಾಗಿ ಮನೆ ಸೇರಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸಲ್ವಾರ್ ಧರಿಸಿದ್ದ ಮೂವರು ಮಹಿಳೆಯರು ಒಬ್ಬ ಪುರುಷನೊಂದಿಗೆ ರಸ್ತೆ ದಾಟುತ್ತಿರುವುದನ್ನು ನೋಡಬಹುದು. ಆಗ ಬಿಳಿ ಬಣ್ಣದ ಕಾರು ಇದ್ದಕ್ಕಿದ್ದಂತೆ ಅವರಿಗೆ ಡಿಕ್ಕಿ ಹೊಡೆದು ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರ ಗಾಯಗಳಾಗಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ