ಅಂಗಡಿಯೊಂದರಲ್ಲಿ 40 ಸಾವಿರ ಹಣ ದೋಚಿ ಕಳ್ಳ ಪರಾರಿ; ಸಿನಿಮೀಯ ಶೈಲಿಯಲ್ಲಿ ಚೇಸ್​ ಮಾಡಿದ ಪೊಲೀಸರು

ಅಂಗಡಿಯೊಂದರಲ್ಲಿ 40 ಸಾವಿರ ಹಣ ದೋಚಿ ಕಳ್ಳ ಪರಾರಿ; ಸಿನಿಮೀಯ ಶೈಲಿಯಲ್ಲಿ ಚೇಸ್​ ಮಾಡಿದ ಪೊಲೀಸರು

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 20, 2022 | 4:56 PM

ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು,  ಒಳ ನುಗ್ಗಿ ಡ್ರಾದಲ್ಲಿದ್ದ 40 ಸಾವಿರ ಹಣ ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿ ಕಾರ್ತಿಕ್​ನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ನಂದಿನಿ ಪಾರ್ಲರ್ ಶೆಟ್ಟರ್ ಬೀಗ ಒಡೆದು ಕಳ್ಳಬೆಕ್ಕಿನಂತೆ ಒಳನುಗ್ಗಿ ಹಣ ದೋಚಿ ಪರಾರಿಯಾದಂತಹ ಘಟನೆ ನಡೆದಿದೆ. ಇದೇ ತಿಂಗಳ ಎಂಟರಂದು ಮಧ್ಯರಾತ್ರಿಲಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು,  ಒಳ ನುಗ್ಗಿ ಡ್ರಾದಲ್ಲಿದ್ದ 40 ಸಾವಿರ ಹಣ ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ. ಮಧ್ಯರಾತ್ರಿ ಶೆಟ್ಟರ್ ಶಬ್ದ ಕೇಳಿ ಪಕ್ಕದ ಮನೆಯಲ್ಲೇ ವಾಸವಿದ್ದ ಮಾಲೀಕ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸ್ರು ಬರುವಷ್ಟರಲ್ಲಿ ಸ್ಥಳದಿಂದ ಕಳ್ಳರು ಕಾಲ್ಕಿತ್ತಿದ್ದಾರೆ. ಕಳ್ಳರ ಬೈಕ್ ಹಿಂದೆಯೇ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿದ್ರೂ ಪರಾರಿಯಾಗಿದ್ದ ಖತರ್ನಾಕ್ ಆರೋಪಿ ಕಾರ್ತಿಕ್​ನ್ನು ಸಿಸಿಟಿವಿ ದೃಶ್ಯ ಪರಿಶೀಲಿಸಿ ಎರಡೇ ಗಂಟೆಯಲ್ಲಿ ಪೊಲೀಸ್ರು ಆರೋಪಿಯನ್ನ ಖೆಡ್ಡಾಗೆ ಬೀಳಿಸಿದ್ದಾರೆ.  ಬಂಧನ ಬಳಿಕ ಬರೋಬ್ಬರಿ ಒಂಭತ್ತು ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಯನ್ನು‌‌ ಬಂಧಿಸಿದ  ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ:

ಅಭಿಮಾನಿ ಮೇಲೆ ಹಲ್ಲೆ ಆರೋಪ; ಈ ಪ್ರಕರಣದ ಹಿಂದೆ ಕುತಂತ್ರ ನಡೆದಿದೆ ಎಂದ ಧನ್ವೀರ್