AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು

VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು

ಝಾಹಿರ್ ಯೂಸುಫ್
|

Updated on: Jun 28, 2025 | 11:31 AM

Share

Arpit Karki: ಕಠ್ಮಂಡುವಿನ ಡಿವೈನ್ ಸ್ಕೂಲ್​ನ ವಿದ್ಯಾರ್ಥಿಯಾಗಿರುವ ಅರ್ಪಿತ್ ಕರ್ಕಿ ಕಳೆದ ಕೆಲ ವರ್ಷಗಳಿಂದ ಕ್ರಿಕೆಟ್ ಅಭ್ಯಾಸ ಶುರು ಮಾಡಿದ್ದಾರೆ. ಅದರಲ್ಲೂ ಬ್ಯಾಟಿಂಗ್​ನಲ್ಲಿ ಉತ್ತಮ ಹಿಡಿತ ಹೊಂದಿರುವ ಅರ್ಪಿತ್ ಮುಂಬರುವ ದಿನಗಳಲ್ಲಿ ನೇಪಾಳ ಪರ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ. ಈ ಆತ್ಮ ವಿಶ್ವಾಸದೊಂದಿಗೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.

ಕ್ರಿಕೆಟ್ ಅಂಗಳಕ್ಕೆ ಎಂಟ್ರಿ ಕೊಡಲು 5 ವರ್ಷದ ಪೋರನೊಬ್ಬ ಸಜ್ಜಾಗುತ್ತಿದ್ದಾನೆ. ಅದು ಕೂಡ ಆಕ್ರಮಣಕಾರಿ ಬ್ಯಾಟ್ಸ್​ಮನ್ ಆಗಿ. ಹೌದು, ನೇಪಾಳದ ಪುಟ್ಟ ಪೋರ ಅರ್ಪಿತ್ ಕರ್ಕಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಬಾಲ್ಯದಲ್ಲೇ ಎಡಗೈ ದಾಂಡಿಗನಾಗಿ ಅಭ್ಯಾಸ ಆರಂಭಿಸಿರುವ ಅರ್ಪಿತ್ ಅತ್ಯುತ್ತಮ ಶಾಟ್​ಗಳ ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾನೆ.

ಕಠ್ಮಂಡುವಿನ ಡಿವೈನ್ ಸ್ಕೂಲ್​ನ ವಿದ್ಯಾರ್ಥಿಯಾಗಿರುವ ಅರ್ಪಿತ್ ಕರ್ಕಿ ಕಳೆದ ಕೆಲ ವರ್ಷಗಳಿಂದ ಕ್ರಿಕೆಟ್ ಅಭ್ಯಾಸ ಶುರು ಮಾಡಿದ್ದಾರೆ. ಅದರಲ್ಲೂ ಬ್ಯಾಟಿಂಗ್​ನಲ್ಲಿ ಉತ್ತಮ ಹಿಡಿತ ಹೊಂದಿರುವ ಅರ್ಪಿತ್ ಮುಂಬರುವ ದಿನಗಳಲ್ಲಿ ನೇಪಾಳ ಪರ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ.

ಇದೇ ಆತ್ಮ ವಿಶ್ವಾಸದಿಂದಲೇ ಅಭ್ಯಾಸ ನಡೆಸುತ್ತಿರುವ ಅರ್ಪಿತ್ ಕರ್ಕಿಯ ಬ್ಯಾಟಿಂಗ್​ ಶೈಲಿಗೆ ಈಗಾಗಲೇ ಹಲವರು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಇದೇ ಮಾದರಿಯಲ್ಲಿ ಅಭ್ಯಾಸ ಮುಂದುವರೆಸಿದರೆ ಶೀಘ್ರದಲ್ಲೇ ನೇಪಾಳ ಕಿರಿಯರ ತಂಡದಲ್ಲಿ ಅರ್ಪಿತ್ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.