AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೆಮಹದೇಶ್ವರಬೆಟ್ಟ ವನ್ಯಧಾಮ ಮೀಣ್ಯಂ ಅರಣ್ಯ ಪ್ರದೇಶದಲ್ಲಿ 15 ಹುಲಿಗಳಿರಬಹುದು: ಅರಣ್ಯಾಧಿಕಾರಿ

ಮಲೆಮಹದೇಶ್ವರಬೆಟ್ಟ ವನ್ಯಧಾಮ ಮೀಣ್ಯಂ ಅರಣ್ಯ ಪ್ರದೇಶದಲ್ಲಿ 15 ಹುಲಿಗಳಿರಬಹುದು: ಅರಣ್ಯಾಧಿಕಾರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 28, 2025 | 10:52 AM

Share

ಹುಲಿಯನ್ನು ಕೊಂದ ಅಪರಾಧಿಗಳಿಗೆ ಡಬಲ್ ಶಿಕ್ಷೆಯಾಗಲಿದೆ, ವನ್ಯಜೀವಿಗಳನ್ನು ಕೊಲ್ಲುವುದು ಬಹುದೊಡ್ಡ ಆಪರಾಧ, ಕೊಂದವರಿಗೆ ಜೈಲುಶಿಕ್ಷೆಯ ಜೊತೆ ದಂಡವನ್ನೂ ವಿಧಿಸಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಈ ಪ್ರಕರಣದಲ್ಲಿ ಅಪರಾಧಿಗಳು ಮರಿಗಳನ್ನು ಕೊಂದಿರುವುದರಿಂದ ಅನುಕಂಪದ ಅಂಶವೂ ಸೇರುತ್ತದೆ, ಮತ್ತು ಅಪರಾಧವೆಸಗಿದವರಿಗೆ ಜಾಮೀನು ಸಿಗೋದಿಲ್ಲ ಎಂದು ಅವರು ಹೇಳುತ್ತಾರೆ.

ಚಾಮರಾಜನಗರ, ಜೂನ್ 28: ಮಲೆಮಹದೇಶ್ವರ ವನ್ಯಧಾಮ ಹೂಗ್ಯಂನ ಮೀಣ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳ ಅಸಹಜ ಸಾವಿನ ತನಿಖೆಯನ್ನು ಪೊಲೀಸ್ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಮಾಡುತ್ತಿವೆ. ಸುಮಾರು 10 ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳ ಜೊತೆ ಮಾತಾಡಿರುವ ಅರಣ್ಯಾಧಿಕಾರಿಯೊಬ್ಬರು (forest official) ಹೇಳುತ್ತಾರೆ. ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಎಷ್ಟು ಹುಲಿಗಳಿವೆ ಅಂತ ಅಧಿಕಾರಿಗೆ ಮಾಹಿತಿ ಇಲ್ಲ, 12ರಿಂದ 15 ಇರಬಹುದು ಎಂದು ಹೇಳುತ್ತಾರೆ. ಇಲ್ಲಿಗೆ ಹತ್ತಿರದ ಸತ್ಯಮಂಗಲ ಮತ್ತು ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶಗಳಲ್ಲೂ ಹುಲಿ ಸಂರಕ್ಷಿತಧಾಮಗಳಿಗೆ, ಅವುಗಳಿಂದಾಗಿ ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:  ಹುಲಿಗಳ ಸಾವು: ಮಾಧ್ಯಮದವರ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡದೆ ಪಲಾಯನಗೈದ ಅರಣ್ಯ ಸಚಿವ ಈಶ್ವರ್ ಖಂಡ್ರೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ