Nithya Bhavishya: ಶ್ರಾವಣ ಶುಕ್ರವಾರ, ನಾಗ ಪಂಚಮಿಯ ಈ ಶುಭ ದಿನ ಯಾವೆಲ್ಲ ರಾಶಿಯವರಿಗೆ ಫಲ ಸಿಗಲಿದೆ

|

Updated on: Aug 09, 2024 | 6:49 AM

ಜಾತಕವು ಒಬ್ಬ ವ್ಯಕ್ತಿಯ ಹುಟ್ಟಿನ ಸಮಯದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಗಳ ಆಧಾರದ ಮೇಲೆ ಭವಿಷ್ಯದ ಮುನ್ಸೂಚನೆ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂಧಿಸಿದೆ. ಜ್ಯೋತಿಷ್ಯವು ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ.

ಶ್ರಾವಣ ಮಾಸ ಆರಂಭವಾಗಿದ್ದು. ಇಂದು ನಾಗ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು ನಾಗರ ಕಲ್ಲುಗಳಿಗೆ ಪೂಜೆ ಮಾಡಿದರೆ ನಾಗ ದೇವರ ಆಶೀರ್ವಾ ಸಿಗಲಿದೆ. ದುಷ್ಟರಿಂದ ರಕ್ಷಣೆ, ನಾಗ ದೋಷಗಳು ನಿವಾರಣೆಯಾಗಲಿವೆ. ಇನ್ನು ಶ್ರಾವಣ ಮಾಸದ ಎಲ್ಲ ದಿನಗಳು ಒಳ್ಳೆಯ ದಿನಗಳು. ಪ್ರತಿದಿನ ಹಬ್ಬ. ನಮ್ಮ ನಿತ್ಯದ ಜೀವನದಲ್ಲಿ ನಾವು ದೈನಂದಿನ (Horoscope) ಜೀವನದಲ್ಲಿ ಜಾತಕ ನೋಡುವುದನ್ನು ಮರೆಯಬಾರದು. ಜ್ಯೋತಿಷ್ಯದ ಪ್ರಕಾರ, ನಮ್ಮ ದೈನಂದಿನ ಜೀವನವು ಗ್ರಹಗಳ ಚಲನೆಗಳಿಂದ ಪ್ರಭಾವಿತವಾಗಿರತ್ತವೆ. ಏಕೆಂದರೆ ಅವು ನಿರಂತರವಾಗಿ ತಮ್ಮ ಸ್ಥಾನಗಳನ್ನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಬದಲಾಯಿಸುತ್ತವೆ. ಈ ಚಲನವು ಒಬ್ಬರ ಜೀವನದಲ್ಲಿ ಧನಾತ್ಮಕವಾಗಿದ್ದರೆ ಮತ್ತೊಬ್ಬರ ಜೀವನಕ್ಕೆ ನಕಾರಾತ್ಮಕ ಪ್ರಭಾವಗಳನ್ನು ತರಬಹುದು. ಅಂತಹ ವಿಷಯಗಳನ್ನು ಮುಂಚಿತವಾಗಿ ತಿಳಿದಿರುವುದು ಅನಿಶ್ಚಿತತೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಇಂದಿನ ಗ್ರಹಗಳ ಚಲನವಲನ ಹೇಗಿದೆ? ಇಂದಿನ (ಆಗಸ್ಟ್ 09) ರಾಶಿ ಭವಿಷ್ಯವೇನು? ಇಂದಿನ ಅಥವಾ ನಾಳೆಯ ಜಾತಕವನ್ನು ಹುಡುಕುತ್ತಿರುವಿರಾ? ಈ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಉತ್ತರ ನೀಡಲಿದ್ದಾರೆ. ವಿಡಿಯೋ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಶ್ರಾವಣ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಸಿದ್ಧ ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:57 ಗಂಟೆ, ರಾಹು ಕಾಲ ಬೆಳಿಗ್ಗೆ 11:03 ರಿಂದ ಮಧ್ಯಾಹ್ನ 12:38, ಯಮಘಂಡ ಕಾಲ ಮಧ್ಯಾಹ್ನ 03:48 ರಿಂದ 05:22ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:54 ರಿಂದ 09:29ರ ವರೆಗೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 

Follow us on