ಕಳ್ಳರಿಗೆ ಸುಲಭವಾಗಿ ತಮ್ಮ ಕೆಲಸ ಸಾಧಿಸಲು ನೆರವಾಗುವ ಜನರೂ ಇದ್ದಾರೆ, ಇಲ್ಲಿದೆ ಪುರಾವೆ!

|

Updated on: Oct 07, 2023 | 7:44 PM

ಗುಡಿಯ ಮುಂದೆ ತಮ್ಮ ದ್ವಿಚಕ್ರ ವಾಹನ ಪಾರ್ಕ್ ಮಾಡಿ ಒಳಗೆ ಹೋಗುವಾಗ, ಹೆಲ್ಮೆಟ್ ನೊಂದಿಗೆ ಬ್ಯಾಗ್ ಅನ್ನು ಸಹ ವಾಹನ ಮುಂಭಾಗದ ಡಿಕ್ಕಿಯಲ್ಲಿಟ್ಟು ಹೋಗಿದ್ದಾರೆ. ಅವರು ಒಳಗೆ ಹೋಗಿ ದೇವರಿಗೆ ಏನು ಮೊರೆಯಿಟ್ಟರೋ ಗೊತ್ತಿಲ್ಲ, ಅದರೆ ಕಳ್ಳರು ಮಾತ್ರ ಇಂಥ ಭಕ್ತರು ಪ್ರತಿನಿತ್ಯ ದೇವಸ್ಥಾನಕ್ಕೆ ಬರುವಂತಾಗಲಿ ಅಂತ ಬೇಡಿಕೊಂಡಿರುತ್ತಾರೆ!

ಹಾಸನ: ಇದು ಕಳ್ಳರ (thieves) ಚಾಲಾಕಿತನ ಅಲ್ಲ, ಬ್ಯಾಗ್ ಕಳೆದುಕೊಂಡವರ ಮೂರ್ಖತನ ಅನ್ನೋದು ಹೆಚ್ಚು ಸೂಕ್ತ. ಸ್ಕೂಟರ್ ನೊಂದಿಗೆ ದೇವಸ್ಥಾನದ ಬಳಿ ಹೊಂಚು ಹಾಕ್ಕೊಂಡು ನಿಂತಿದ್ದ ಕಳ್ಳರಿಗೂ ತಮ್ಮ ಕೆಲಸ ಅಷ್ಟು ಸಲೀಸಾಗಿ ಮುಗಿದೀತು ಅಂತ ಅನಿಸಿರಲಾರದು. ಎಷ್ಟು ಆರಾಮವಾಗಿ ಸಿಗರೇಟು ಸೇದುತ್ತಾ, ಹರಟುತ್ತಾ, ಕಳ್ಳರು ತಮ್ಮ ಕೆಲಸ ಪೂರೈಸುತ್ತಾರೆ ಅಂತ ನೀವೇ ನೋಡಿ. ಅಂದಹಾಗೆ, ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರದಲ್ಲಿರುವ ಸುಬ್ರಹ್ಮಣ್ಯ ದೇವಸ್ಥನದ (Subramanya temple) ಮುಂದೆ ನಡೆದ ಕೃತ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳರು ಸ್ಕೂಟರ್ ನಿಂದ ಹಾರಿಸಿದ ಬ್ಯಾಗು ಬ್ಯಾಂಕ್ ಉದ್ಯೋಗಿ ಕಾವ್ಯ (banker Kavya) ಅನ್ನುವವರಿಗೆ ಸೇರಿದ್ದು. ಅವರು ಇವತ್ತಿನ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ, ದೇವರ ದರ್ಶನ ಮಾಡಿಕೊಳ್ಳೋಣ ಅಂತ ದೇವಸ್ಥಾನಕ್ಕೆ ಬಂದಿದ್ದಾರೆ. ಗುಡಿಯ ಮುಂದೆ ತಮ್ಮ ದ್ವಿಚಕ್ರ ವಾಹನ ಪಾರ್ಕ್ ಮಾಡಿ ಒಳಗೆ ಹೋಗುವಾಗ, ಹೆಲ್ಮೆಟ್ ನೊಂದಿಗೆ ಬ್ಯಾಗ್ ಅನ್ನು ಸಹ ವಾಹನ ಮುಂಭಾಗದ ಡಿಕ್ಕಿಯಲ್ಲಿಟ್ಟು ಹೋಗಿದ್ದಾರೆ. ಅವರು ಒಳಗೆ ಹೋಗಿ ದೇವರಿಗೆ ಏನು ಮೊರೆಯಿಟ್ಟರೋ ಗೊತ್ತಿಲ್ಲ, ಅದರೆ ಕಳ್ಳರು ಮಾತ್ರ ಇಂಥ ಭಕ್ತರು ಪ್ರತಿನಿತ್ಯ ದೇವಸ್ಥಾನಕ್ಕೆ ಬರುವಂತಾಗಲಿ ಅಂತ ಬೇಡಿಕೊಂಡಿರುತ್ತಾರೆ! ಅವರ ಬ್ಯಾಗಲ್ಲಿ ಒಂದು ದುಬಾರಿ ಮೊಬೈಲ್ ಫೋನ್ ಮತ್ತು ರೂ. 10,000 ನಗದು ಇತ್ತಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ