ರಸ್ತೆಯಲ್ಲಿ ಹೊರಟಿದ್ದ ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಎದೆ ಝಲ್ ಎನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಗದಗ-ಬೆಟಗೇರಿ ಅವಳಿ ನಗರದಲ್ಲಿ ಗೂಳಿ ದಾಳಿಗೆ ಕಳೆದ ತಿಂಗಳು ಓರ್ವ ವೃದ್ಧ ಮೃತ ಪಟ್ಟಿದ್ದ. ಆದರೂ ತಲೆಕೆಡಿಸಿಕೊಳ್ಳದ ನಗರಸಭೆ ಆಡಳಿತ, ಕಾಟಾಚಾರಕ್ಕೆ ನಾಲ್ಕಾರು ಬೀದಿ ದನಗಳ ಸಾಗಾಟ ಮಾಡಿ ಗಪ್ ಚುಪ್ ಆಗಿತ್ತು. ಇದೀಗ ರಸ್ತೆ ಪಕ್ಕದಲ್ಲಿ ಹೊರಟ್ಟಿದ್ದ ವಿದ್ಯಾರ್ಥಿನಿಯರ(Students) ಮೇಲೆ ಹೊಂಚು ಹಾಕಿ ಗೂಳಿ ದಾಳಿ ಮಾಡಿದ್ದು, ವಿದ್ಯಾರ್ಥಿನಿ ಸ್ವಲ್ಪದರಲ್ಲೇ ಮಿಸ್ ಆಗಿದ್ದಾರೆ.
ಗದಗ, ಸೆ.07: ರಸ್ತೆ ಪಕ್ಕದಲ್ಲಿ ಹೊರಟ್ಟಿದ್ದ ವಿದ್ಯಾರ್ಥಿನಿಯರ(Students) ಮೇಲೆ ಹೊಂಚು ಹಾಕಿ ಗೂಳಿ ದಾಳಿ ಮಾಡಿದ ಘಟನೆ ಗದಗನ ಬೆಟಗೇರಿ ಮಾರ್ಕಂಡೇಶ್ವರ ದೇವಸ್ಥಾನದ ಹತ್ತಿರ ನಡೆದಿದೆ. ರೌಡಿ ಗೂಳಿ ದಾಳಿಗೆ ವಿದ್ಯಾರ್ಥಿನಿ ನೆಲಕಚ್ವಿದ್ದು, ಗೂಳಿ ದಾಳಿ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಳಿಕ ನಡುರಸ್ತೆಯಲ್ಲೇ ಎರಡು ಗೂಳಿಗಳ ಭೀಕರ ಕಾಳಗ ನಡೆದಿದ್ದು, ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಗೂಳಿಗಳ ಅಟ್ಟಹಾಸಕ್ಕೆ ಗದಗ-ಬೆಟಗೇರಿ ಅವಳಿ ನಗರದ ಜನರು ಕಂಗಾಲಾಗಿದ್ದಾರೆ. ಗೂಳಿ ದಾಳಿಗೆ ಕಳೆದ ತಿಂಗಳು ಓರ್ವ ವೃದ್ಧ ಮೃತ ಪಟ್ಟಿದ್ದ. ಆದರೂ ತಲೆಕೆಡಿಸಿಕೊಳ್ಳದ ನಗರಸಭೆ ಆಡಳಿತ, ಕಾಟಾಚಾರಕ್ಕೆ ನಾಲ್ಕಾರು ಬೀದಿ ದನಗಳ ಸಾಗಾಟ ಮಾಡಿ ಗಪ್ ಚುಪ್ ಆಗಿದೆ. ಇನ್ನು ನೂರಾರು ಬಿಡಾಡಿ ದನಗಳು ಅವಳಿ ನಗರದ ನಡು ರಸ್ತೆಯಲ್ಲಿ ಓಡಾಟ ನಡೆಸುತ್ತಿವೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:26 pm, Sat, 7 September 24