ಕಂಡ ಕಂಡವರ ಮೇಲೆ ದಾಳಿ ಮಾಡ್ತಿರುವ ಗೂಳಿ; ಆತಂಕದಲ್ಲೇ ಓಡಾಡ್ತಿರೋ ಸಾರ್ವಜನಿಕರು
ಗದಗದ ಬೆಟಗೇರಿಯಲ್ಲಿ ಗೂಳಿಯೊಂದು ಏಕಾಏಕಿ ಬಂದು ಗುದ್ದಿ ಗಾಯಗೊಳಿಸುತ್ತಿದೆ. ಗೂಳಿಯ ಹಾವಳಿಗೆ ಬೆಚ್ಚಿ ಬಿದ್ದ ಸಾರ್ವಜನಿಕರು ಆತಂಕದಲ್ಲೇ ಓಡಾಡುವಂತಾಗಿದೆ. ಗೂಳಿಯ ಡೆಡ್ಲಿ ಅಟ್ಯಾಕ್ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗದಗ, ಡಿ.03: ಕಂಡ ಕಂಡವರ ಮೇಲೆ ಗೂಳಿಯೊಂದು ದಾಳಿ(Bull Attack) ಮಾಡುತ್ತಿರುವ ಘಟನೆ ಗದಗದ ಬೆಟಗೇರಿಯಲ್ಲಿ ನಡೆದಿದೆ. ಈ ಗೂಳಿ ಏಕಾಏಕಿ ಬಂದು ಗುದ್ದಿ ಗಾಯಗೊಳಿಸುತ್ತಿದೆ. ಗೂಳಿಯ ಹಾವಳಿಗೆ ಬೆಚ್ಚಿ ಬಿದ್ದ ಸಾರ್ವಜನಿಕರು ಆತಂಕದಲ್ಲೇ ಓಡಾಡುವಂತಾಗಿದೆ. ಗೂಳಿಯ ಡೆಡ್ಲಿ ಅಟ್ಯಾಕ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಅಟ್ಯಾಕ್ ಮಾಡಿದೆ. ಕಳೆದ 15 ದಿನಗಳಲ್ಲಿ 8 ಜನರ ಮೇಲೆ ದಾಳಿ ಮಾಡಿದ್ದು, ಗೂಳಿಯ ದಾಳಿ ನಿಯಂತ್ರಣ ಮಾಡದ ನಗರಸಭೆ ವಿರುಧ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ