Video: ನಡುರಸ್ತೆಯಲ್ಲಿ ಗೂಳಿಯ ಪುಂಡಾಟ; ವೃದ್ಧನಿಗೆ ಗುಮ್ಮಿದ ಗೂಳಿ
Bull attack: ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರದಲ್ಲಿ ಗೂಳಿಯೊಂದು ಪುಂಡಾಟ ನಡೆಸಿದ್ದು, ಹಾದಿಯಲ್ಲಿ ನಡೆದು ಹೋಗುತ್ತಿದ್ದ ವೃದ್ಧನಿಗೆ ಗುದ್ದಿದೆ. ಪ್ರಕರಣದಲ್ಲಿ ಬೈಕ್ ಸವಾರರಿಬ್ಬರು ಕೆಳಗೆ ಬಿದ್ದಿದ್ದು ಅವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರದಲ್ಲಿ ಗೂಳಿಯೊಂದು ಪುಂಡಾಟ ನಡೆಸಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧನ ಮೇಲೆ ದಾಳಿ ಗೂಳಿ ದಾಳಿ ನಡೆಸಿದೆ. ತಪ್ಪಿಸಿಕೊಳ್ಳಲು ಹೋದ ವೃದ್ಧನಿಗೆ ಹಿಂದಿನಿಂದ ಬಂದ ಬೈಕೊಂದು ತಾಗಿದೆ. ಆ ಬೈಕ್ ಮತ್ತು ಅದರಲ್ಲಿರುವ ಸವಾರರಿಬ್ಬರೊಂದಿಗೆ ವೃದ್ಧನೂ ಕೆಳಗೆ ಬಿದ್ದಿದ್ದು, ಗಾಯಗಳಾಗಿವೆ. ಈ ದೃಶ್ಯವು ವಿಡಿಯೊದಲ್ಲಿ ಸೆರೆಯಾಗಿದೆ.
ನಗರದ ರಸ್ತೆಗಳಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟವರು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: Viral Video: ಕೆಸರಲ್ಲಿ ತುಂಟಾಟವಾಡುತ್ತಿರುವ ಈ ಆನೆಮರಿಯನ್ನು ನೋಡಿದರೆ ಮುದ್ದಾಡಬೇಕೆನಿಸೋದು ಗ್ಯಾರಂಟಿ!
ಇದನ್ನೂ ನೋಡಿ: Viral Video: ಮೆಟ್ರೋದಲ್ಲಿ ಮಗುವನ್ನು ಹೊತ್ತುಕೊಂಡಿದ್ದ ಯುವತಿಗೆ ಸೀಟು ಬಿಟ್ಟುಕೊಟ್ಟ ಯುವಕನಿಗೆ ಕಾದಿತ್ತು ಆಘಾತ!
(A Bull attacks an aged man at Islampura in Doddaballapura Town)