ನೇರ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಕಾರು ಕೆರೆಯೊಳಗೆ ಜಾರುತ್ತದೆ, ವರದಿಗಾರನ ಗಮನಕ್ಕೆ ಅದು ಬರೋದೇ ಇಲ್ಲ!
ಆಮೇರಿಕಾದ ಸಂಗಮೋನ್ ಕೌಂಟಿ ತುರ್ತು ನಿರ್ವಹಣೆ ಕಚೇರಿಯ ನಿರ್ದೇಶಕ ಬಿಲ್ ಲೀ ಹೇಳಿರುವ ಹಾಗೆ ಕಾರು ಪಾರ್ಕ್ ಅಗಿದ್ದ ರ್ಯಾಂಪ್ ಪಾಚಿಗಟ್ಟಿ ಜಾರುತ್ತಿದ್ದುದರಿಂದ ಕಾರು ಸ್ಲೈಡ್ ಆಗಿ ಕೆರೆಯಲ್ಲಿ ಸ್ನಾನಕ್ಕೆ ಹೋಗಿದೆ!
ಈ ಟಿವಿ ವರದಿಗಾರ ಏನು ಹೇಳುತ್ತಿದ್ದಾನೆ ಅಂತ ಕೇಳಿಸಿಕೊಳ್ಳುವ ಪ್ರಯತ್ನ ದಯವಿಟ್ಟು ಮಾಡಬೇಡಿ. ಯಾಕೆಂದರೆ, ಅವನು ಹೇಳುತ್ತಿರುವುದು ನಮಗೆ ಸಂಬಂಧಪಡದ ವಿಷಯ ಮಾರಾಯ್ರೇ. ಆದರೆ ಅವನ ಹಿಂಭಾಗದಲ್ಲಿ ಒಂದು ಕೆರೆಯಿದೆ ಮತ್ತು ವರದಿಗಾರನ ಬಲಗಡೆಯಲ್ಲಿ ಒಂದು ಬಿಳಿಬಣ್ಣದ ಕಾರು ಱಂಪ್ ಮೇಲೆ ಪಾರ್ಕ್ ಆಗಿರುವುದು ನಿಮಗೆ ಕಾಣುತ್ತಿದೆ. ಅದು ನಿಂತಲ್ಲೇ ಇದೆಯಾ ಅಥವಾ ಚಲಿಸುತ್ತಿದೆಯಾ? ಹೌದು, ಅದು ನಿಧಾನಕ್ಕೆ ಕೆರೆಯೊಳಗೆ ಜಾರುತ್ತಿದೆ! ವರದಿಗಾರನಿಗೆ ಅದರ ಬಗ್ಗೆ ಸುಳಿವೇ ಇಲ್ಲ!! ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ನೋಡಿದವರು ಆಫ್ ಕೋರ್ಸ್ ನಗುತ್ತಿದ್ದಾರೆ..
ಅಂದಹಾಗೆ, ಫಾಕ್ಸ್ ನ್ಯೂಸ್ ವರದಿ ಮಾಡಿರುವ ಹಾಗೆ ಇವನು ಡಬ್ಲ್ಯುಸಿಐಎಸ್ ವರದಿಗಾರ ಜೇಕಬ್ ಎಮರ್ಸನ್. ಈ ವಿಡಿಯೋನಲ್ಲಿ ಕಾರು ನಿಧಾನಕ್ಕೆ ಕೆರೆಯೊಳಗೆ ಸ್ಲಿಪ್ ಆಗುತ್ತಾ ಹೋಗಿ ಕೊನೆಗೆ ಮುಳುಗಿಯೇ ಬಿಡುತ್ತದೆ. ವಿಷಯ ಗಮನಕ್ಕೆ ಬರುತ್ತಿದ್ದಂತೆ ಜೇಕಬ್ ತನ್ನನ್ನು ಬಿಟ್ಟು ಕಾರಿನ ಮೇಲೆ ಕೆಮೆರಾ ಪ್ಯಾನ್ ಮಾಡುವಂತೆ ತನ್ನ ಕೆಮೆರಾಮನ್ಗೆ ಹೇಳುತ್ತಾನೆ.
ಆಮೇರಿಕಾದ ಸಂಗಮೋನ್ ಕೌಂಟಿ ತುರ್ತು ನಿರ್ವಹಣೆ ಕಚೇರಿಯ ನಿರ್ದೇಶಕ ಬಿಲ್ ಲೀ ಹೇಳಿರುವ ಹಾಗೆ ಕಾರು ಪಾರ್ಕ್ ಅಗಿದ್ದ ರ್ಯಾಂಪ್ ಪಾಚಿಗಟ್ಟಿ ಜಾರುತ್ತಿದ್ದುದರಿಂದ ಕಾರು ಸ್ಲೈಡ್ ಆಗಿ ಕೆರೆಯಲ್ಲಿ ಸ್ನಾನಕ್ಕೆ ಹೋಗಿದೆ!
ಕೆರೆಯ ರ್ಯಾಂಪ್ ಪಾಚಿಗಟ್ಟಿದ್ದರೆ ಅದರ ಮೇಲೆ ವಾಹನಗಳನ್ನು ಪಾರ್ಕ್ ಮಾಡಬಾರದು ಎಂಬ ನೀತಿಪಾಠ ಕಲಿತೆ ಎಂದು ಜೇಕಬ್ ಹೇಳಿದ್ದಾನೆ!
ಇದನ್ನೂ ಓದಿ: Shocking Video: ಆಕಸ್ಮಿಕವಾಗಿ ರೈಲ್ವೆ ಹಳಿಯ ಮಧ್ಯೆ ಬಿದ್ದ ವ್ಯಕ್ತಿ! ಆಘಾತಕಾರಿ ದೃಶ್ಯದ ವಿಡಿಯೋ ವೈರಲ್