AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahesh Babu: ಅಭಿಮಾನಿಗಳೆದುರು ವಿಶೇಷ ಕೋರಿಕೆಯೊಂದನ್ನು ಮುಂದಿಟ್ಟಿದ್ದಾರೆ ತೆಲುಗು ನಟ ಮಹೇಶ್ ಬಾಬು!

Mahesh Babu: ಅಭಿಮಾನಿಗಳೆದುರು ವಿಶೇಷ ಕೋರಿಕೆಯೊಂದನ್ನು ಮುಂದಿಟ್ಟಿದ್ದಾರೆ ತೆಲುಗು ನಟ ಮಹೇಶ್ ಬಾಬು!

TV9 Web
| Edited By: |

Updated on: Aug 06, 2021 | 5:50 PM

Share

ತೆಲುಗು ನಟ ಮಹೆಶ್ ಬಾಬು ತಮ್ಮ ಹುಟ್ಟುಹಬ್ಬವನ್ನು ಗ್ರೀನ್ ಇಂಡಿಯಾ ಭಾಗವಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಅವರು ಒಂದು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಆ ಕುರಿತ ವಿಡಿಯೊ ಸ್ಟೋರಿ ಇಲ್ಲಿದೆ.

ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಇದೇ ಆಗಸ್ಟ್ 9ರಂದು ತಮ್ಮ 46ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶವನ್ನು ಬರೆದಿರುವ ಅವರು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ. ಪ್ರತೀ ಅಭಿಮಾನಿಯೂ ಮೂರು ಗಿಡಗಳನ್ನು ನೆಟ್ಟು, ಗ್ರೀನ್ ಇಂಡಿಯಾ ಚಾಲೆಂಜ್​ನ ಭಾಗವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಮಹೇಶ್ ಬಾಬು ಕೋರಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ನಿಮ್ಮೆಲ್ಲರ ಹಾರೈಕೆ, ಅಭಿಮಾನಗಳಿಗೆ ನಾನೆಂದಿಗೂ ಆಭಾರಿ. ಈ ಬಾರಿ ನೀವು ಮೂರು ಗಿಡಗಳನ್ನು ನೆಟ್ಟು, ಹುಟ್ಟುಹಬ್ಬವನ್ನು ಆಚರಿಸಿ ಎಂದು ಹೇಳಿದ್ದಾರೆ.

ಇದನ್ನೂ ನೋಡಿ:

Viral Video: ನಾಯಿಯ ಹುಟ್ಟುಹಬ್ಬಕ್ಕೆ ಔತಣಕೂಟ ಏರ್ಪಡಿಸಿದ ಮನೆ ಮಂದಿ! ವಿಡಿಯೊ ವೈರಲ್

ಹಿಟ್ಲರ್​​ನ ಮೋಟು ಮೀಸೆ ಮಣ್ಣಾಗುವಂತೆ ‘ಭಾರತ ಮಾರಾಟಕ್ಕೆ ಇಲ್ಲ’ ಎಂದು ಧ್ಯಾನ್​ ಚಂದ್ ದಿಟ್ಟ ಉತ್ತರ ಕೊಟ್ಟಿದ್ದನ್ನು ಸ್ಮರಿಸಬೇಕಾದ ದಿನ ಇಂದು!

(Mahesh Babu requests his fans to plant and gift trees on behalf of his birthday)

Follow Us
Web contact
Web contact

TV9 Kannada

Read More