ಡಿವೋರ್ಸ್ಗೆ ಮುಂದಾಗಿದ್ದ ದಂಪತಿಯನ್ನು ಒಂದುಗೂಡಿಸಿದ ದೊಡ್ಡಬಳ್ಳಾಪುರ ಜೆಎಂಎಫ್ಸಿ ನ್ಯಾಯಾಧೀಶರು
ಎಲ್ಲರ ಬದುಕಿನಲ್ಲೂ ಏರುಪೇರು, ಕಷ್ಟಸುಖ ಬರುತ್ತವೆ, ಅವುಗಳನ್ನು ಸರಿದೂಗಿಸಿಕೊಂಡು ಹೋಗುವುದರಲ್ಲೇ ದಾಂಪತ್ಯದ ಸಾರ್ಥಕತೆ ಮತ್ತು ಯಶಸ್ಸು ಅಡಗಿದೆ ಎಂದು ನ್ಯಾಯಾಧೀಶರು ನಾಗಮಣಿ ಮತ್ತು ಹನುಮಂತರಾಜುಗೆ ಹೇಳಿದರು. ದಂಪತಿ ಸಹ ಬೇರೆಯವರ ಮಾತಿಗೆ ಕಿವಿಗೊಡದೆ ನೆಮ್ಮದಿಯಿದ ಬಾಳ್ವೆ ಮಾಡಿಕೊಂಡು ಹೋಗೋದಾಗಿ ಹೇಳಿದರು. ಅವರಿಬ್ವರಿಗೆ ಒಳ್ಳೆಯದಾಗಲಿ ಅಂತ ಹಾರೈಸೋಣ.
ದೊಡ್ಡಬಳ್ಳಾಪುರ, ಮಾರ್ಚ್ 10: ಸ್ಥಳೀಯ ನಿವಾಸಿಗಳಾಗಿರುವ ನಾಗಮಣಿ ಮತ್ತು ಹನುಮಂತರಾಜು 2018ರಲ್ಲಿ ಸತಿಪತಿಯಾಗಿ ದಾಂಪತ್ಯ ಶುರುಮಾಡಿದರೂ ಯಾರದ್ದೋ ಮಾತುಕೇಳಿ ಕಳೆದ ವರ್ಷ ವಿಚ್ಛೇದನ ಕೋರಿ ಲೋಕ್ ಅದಾಲತ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರೆ, ದೊಡ್ಡಬಳ್ಳಾಪುರ ಜೆಎಂಎಫ್ಸಿ ನ್ಯಾಯಾಧೀಶರಾಗಿರುವ ಪ್ರವೀಣ್ ಅರ್ ಜೆಎಸ್ ಅವರು ದಂಪತಿಯ ಮನವೊಲಿಸಿ ಪುನಃ ಒಂದು ಮಾಡಿ ಹೊಸದಾಗಿ ಬದುಕು ಆರಂಭಿಸುವ ಸನ್ನಿವೇಶ ಸೃಷ್ಟಿಸಿದ್ದಾರೆ. ನ್ಯಾಯಾಧೀಶರು ಮತ್ತು ವಕೀಲರ ಸಮ್ಮುಖದಲ್ಲಿ ದಂಪತಿ ಹಾರ ವಿನಿಮಯ ಮಾಡಿಕೊಂಡು ಸಿಹಿ ತಿನ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಎಂಥಾ ಕಾರಣ: ತನಗೆ ಹೇಳದೆ ಅತ್ತೆ ತನ್ನ ಮೇಕ್ಅಪ್ ಕಿಟ್ ಬಳಸಿದ್ದಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ
Published on: Mar 10, 2025 02:22 PM
Latest Videos