ಹಂಪಿಯಲ್ಲಿ ಘನಘೋರ ಕೃತ್ಯಗಳನ್ನೆಸಗಿದವರಿಗೆ ಎನ್ಕೌಂಟರ್ ಮಾಡುವುದೇ ಸೂಕ್ತ ಪರಿಹಾರ: ಸಿಟಿ ರವಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸಾಮೂಹಿಕ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಿದೆ, ಹಾಡುಹಗಲೇ ದರೋಡೆಕೋರರು ಗಾರ್ಡ್ಗಳ ಮೇಲೆ ಗುಂಡು ಹಾರಿಸಿ ಲಕ್ಷಾಂತರ ರೂಪಾಯಿ ದೋಚುತ್ತಾರೆ, ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳಿಗೆ ರಾಜಕೀಯ ಸಂರಕ್ಷಣೆ ನೀಡಿದರೆ ಅಪರಾಧಗಳ ಸಂಖ್ಯೆ ಹೇಗೆ ಕಮ್ಮಿಯಾದೀತು ಎಂದು ರವಿ ಪ್ರಶ್ನಿಸಿದರು.
ಬೆಂಗಳೂರು, ಮಾರ್ಚ್ 10: ಯುನೆಸ್ಕೋನಿಂದ ವಿಶ್ವ ಹೆರಿಟೇಜ್ ಸ್ಥಳವೆಂಬ (World Heritage Centre) ಪಟ್ಟಕ್ಕೆ ಪಾತ್ರವಾಗಿರುವ ಹಂಪಿ ಒಂದು ಜಗದ್ವಿಖ್ಯಾತ ಪ್ರವಾಸಿ ಸ್ಥಳ, ಪ್ರತಿದಿನ ನೂರಾರು ವಿದೇಶಿಯರನ್ನು ಸೆಳೆಯುವ ಹಂಪಿಯಲ್ಲಿ ಒಬ್ಬ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ದರೋಡೆ, ಸುಲಿಗೆ ಅತ್ಯಂತ ಹೇಯಕರ, ಯಾರೋ ಒಂದಿಬ್ಬರು ಪಾಪಿಗಳ ದುಷ್ಕೃತ್ಯಕ್ಕೆ ಇಡೀ ಭಾರತದ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ, ಇದರಲ್ಲಿ ಭಾಗಿಯಾದವರನ್ನು ಎನ್ಕೌಂಟರ್ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅಕ್ರೋಷ ಹಾಕಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೊಪ್ಪಳ ಅತ್ಯಾಚಾರ ಪ್ರಕರಣದಿಂದ ಹಂಪಿ ಪ್ರವಾಸೋದ್ಯಮಕ್ಕೆ ತೀವ್ರ ಹೊಡೆತ: ಪ್ರವಾಸಿಗರ ಸಂಖ್ಯೆ ಭಾರಿ ಇಳಿಕೆ
Latest Videos