AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget Session; ಶಿವಕುಮಾರ್ ಬಾಯಿಂದ ಮುನಿರತ್ನ ಹೆಸರು ಹೊರಬಿದ್ದಾಗ ವಿಶೇಷ ಅನಿಸದಿರುತ್ತದೆಯೇ?

Karnataka Budget Session; ಶಿವಕುಮಾರ್ ಬಾಯಿಂದ ಮುನಿರತ್ನ ಹೆಸರು ಹೊರಬಿದ್ದಾಗ ವಿಶೇಷ ಅನಿಸದಿರುತ್ತದೆಯೇ?

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 10, 2025 | 3:19 PM

Share

ಮುನಿರತ್ನ ಅವರ ಹೆಸರನ್ನು ಶಿವಕುಮಾರ್ ಉಲ್ಲೇಖಿಸಿರುವುದನ್ನು ನಾವು ಹೇಳುತ್ತಿರುವುದಕ್ಕೆ ಕಾರಣ ಇಲ್ಲದಿಲ್ಲ. ಅವರ ನಡುವೆ ಮಾತುಕತೆಯಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೊನ್ನೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರಿಬ್ಬರು ಅಕ್ಕಪಕ್ಕದಲ್ಲೇ ನಿಂತಿದ್ದರೂ ಪರಸ್ಪರ ಮುಖ ನೋಡಿಕೊಂಡಿರಲಿಲ್ಲ, ಈ ಹಿನ್ನೆಲೆಯಲ್ಲಿ ಶಿವಕುಮಾರ್, ಮುನಿರತ್ನ ಹೆಸರು ಹೇಳಿದ್ದು ವಿಶೇಷವೇ.

ಬೆಂಗಳೂರು, ಮಾರ್ಚ್ 10: ಸದನದಲ್ಲಿ ಗ್ರೇಟರ್ ಬೆಂಗಳೂರು ವಿಧೆಯಕ ಮಂಡನೆಗೆ ಸಂಬಂಧಿಸಿದಂತೆ ಮಾತಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಬೃಹತ್ ಬೆಂಗಳೂರು ನಗರ ಪಾಲಿಕೆ ನಡೆದುಕೊಂಡ ಹಾದಿಯನ್ನು ವಿವರಿಸುವಾಗ, ಶಾಸಕರು ಮತ್ತು ಮಿನಿಸ್ಟ್ರುಗಳಾಗಿರುವ ಹಲವಾರು ಜನ ಪ್ರತಿನಿಧಿಗಳು ಮೊದಲು ಕೌನ್ಸಿಲರ್ ಗಳಾಗಿದ್ದರು ಎಂದರು. ಅಂಥ ನಾಯಕರ ಹೆಸರುಗಳನ್ನು ಉಲ್ಲೇಖಿಸುವಾಗ ಅವರು ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಹೆಸರನ್ನೂ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಡಾ ಪ್ರಕರಣ ರಾಜಕೀಯ ಪ್ರೇರಿತ ಅಂತ ಮೊದಲೇ ಹೇಳಿದ್ದೆ, ನ್ಯಾಯಾಲಯ ಹೇಳಿದ್ದನ್ನು ಪಾಲಿಸುತ್ತೇವೆ: ಶಿವಕುಮಾರ್

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.