ಮುಡಾ ಪ್ರಕರಣ ರಾಜಕೀಯ ಪ್ರೇರಿತ ಅಂತ ಮೊದಲೇ ಹೇಳಿದ್ದೆ, ನ್ಯಾಯಾಲಯ ಹೇಳಿದ್ದನ್ನು ಪಾಲಿಸುತ್ತೇವೆ: ಶಿವಕುಮಾರ್
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಮಾತಾಡಿದ ಶಿವಕುಮಾರ್, ಅರಣ್ಯ ಇಲಾಖೆಯಿಂದ ಕೆಲಸ ಮುಂದುವರಿಸಲು ಅನುಮತಿ ಸಿಗುತ್ತಿಲ್ಲ, ಅವರಿಗೆ ಸುಮಾರು 170 ಹೆಕ್ಟೇರ್ ಬದಲೀ ಜಮೀನನ್ನು ನೀಡಬೇಕಿದೆ, ಮಾರ್ಚ್ 18ರಂದು ದೆಹಲಿಗೆ ತೆರಳಿ ಕೇಂದ್ರ ಅರಣ್ಯ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ; ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ನೀರು ಕೊಟ್ಟೇ ಕೊಡುತ್ತೇವೆ ಎಂದು ಹೇಳಿದರು.
ಬೆಂಗಳೂರು, ಮಾರ್ಚ್ 7 : ಮುಡಾ ಪ್ರಕರಣಕ್ಕೆ (MUDA case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಪಾರ್ವತಿ ಸಿದ್ದರಾಮಯ್ಯ ಮತ್ತು ಸಚಿವ ಭೈರತಿ ಸುರೇಶ್ ಜಾರಿ ಮಾಡಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದು ಮಾಡಿದೆ. ಈ ವಿಚಾರವವನ್ನು ಡಿಸಿಎಂ ಡಿಕೆ ಶಿವಕುಮಾರ್ ಗಮನಕ್ಕೆ ತಂದಾಗ, ತಮ್ಮ ಸರ್ಕಾರ ಯಾವತ್ತಿಗೂ ನ್ಯಾಯದ ಪರವಾಗಿ ಹೋರಾಟ ಮಾಡುತ್ತಾ ಬಂದಿದೆ, ಬೇರೆ ಕೇಸ್ನಲ್ಲಿ ಕೂಡ ಸಮನ್ಸ್ ರದ್ದಾಗಿತ್ತು, ಕಾನೂನು ಮತ್ತು ನ್ಯಾಯಾಲಯ ಏನು ಹೇಳುತ್ತೋ ಅದನ್ನು ಪಾಲಿಸುತ್ತೇವೆ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಿವಕುಮಾರ್ ಆಡಿದ ಮಾತಗಳನ್ನು ಪದೇಪದೆ ವಿಶ್ಲೇಷಣೆ ಮಾಡೋದ್ರಲ್ಲಿ ಅರ್ಥವಿಲ್ಲ: ಶರತ್ ಲೋಹಿತಾಶ್ವ, ನಟ
Latest Videos