ಬ್ಯೂಸಿ ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಕುಡುಕನ ಚೆಲ್ಲಾಟ, ವಾಹನ ಸವಾರರಿಗೆ ಸಂಕಟ!

|

Updated on: May 17, 2024 | 2:16 PM

ಅವನಿನ್ನೂ ಯುವಕ, ಬಹಳ ವರ್ಷಗಳ ಕಾಲ ಬದುಕಬೇಕಿದೆ ಮತ್ತು ಹೆಗಲ ಮೇಲೆ ಕೆಲ ಜವಾಬ್ದಾರಿಗಳೂ ಇರಬಹುದು. ಆದರೆ, ಹೀಗೆ ಕಂಠಮಟ್ಟ ಕುಡಿದು ಹೆದ್ದಾರಿಯಲ್ಲಿ ಓಡಾಡಿ ಅವನು ತನ್ನ ಜೀವವನ್ನು ಅಪಾಯಕ್ಕೊಡುವ ಜೊತೆಗೆ ತನ್ನ ಮೇಲೆ ಅವಲಂಬಿತರ ಭವಿಷ್ಯಕ್ಕೂ ಸಂಚಕಾರ ತಂದೊಡ್ಡುವ ಹಾಗಿದ್ದಾನೆ.

ಅತ್ತಿಬೆಲೆ: ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಅನ್ನೋದನ್ನು ಕೇಳಿದ್ದೇವೆ, ಆದರೆ ಇಲ್ನೋಡಿ, ಕುಡುಕನಿಗೆ ಚೆಲ್ಲಾಟ ವಾಹನ ಸವಾರರಿಗೆ ಪ್ರಾಣ ಸಂಕಟ! ಪ್ರಾಣ ಸಂಕಟ ಆಗುತ್ತಿರೋದು ವಾಹನಗಳನ್ನು ಓಡಿಸುತ್ತಿರುವವರಿಗೆ ಹೊರತು ಕುಡಕನಿಗಲ್ಲ. ಯಾಕೆಂದರೆ ಅವನು ಬಿಂದಾಸ್ ಆಗಿ ಹೆದ್ದಾರಿಯಲ್ಲಿ ಓಡಾಡುತ್ತಿದ್ದಾನೆ. ಈ ದೃಶ್ಯ ಕಂಡಿದ್ದು ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಅತ್ತಿಬೆಲೆ ಗಡಿಗೋಪುರದ ಬಳಿ. ಈ ರಸ್ತೆ ಅತ್ಯಂತ ಬ್ಯೂಸಿ, ಹೆದ್ದಾರಿಯಾಗಿರುವ ಕಾರಣ ವಾಹನಗಳು ಎರಡೂ ಬದಿಗಳಲ್ಲಿ ವೇಗವಾಗಿ ಚಲಿಸುತ್ತಿರುತ್ತವೆ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರೆ ವಾಹನ ಸವಾರರಲ್ಲಿ ಕುಡುಕ ಸೃಷ್ಟಿಸುತ್ತಿರುವ ಭೀತಿ ನೋಡಿ. ಅವನು ಬಿಂದಾಸ್ ಆಗಿ, ಯಾವುದಾದರು ವಾಹನ ಗುದ್ದಿದರೆ ಏನು ಪರಿಣಾಮವಾಹಬಹುದು ಅನ್ನೋದರ ಪರಿವೆಯಿಲ್ಲದೆ ಮನೆಯಂಗಳದಲ್ಲಿ ಓಡಾಡುವ ಹಾಗೆ ಓಲಾಡುತ್ತಿದ್ದಾನೆ. ಅವನಿನ್ನೂ ಯುವಕ, ಬಹಳ ವರ್ಷಗಳ ಕಾಲ ಬದುಕಬೇಕಿದೆ ಮತ್ತು ಹೆಗಲ ಮೇಲೆ ಕೆಲ ಜವಾಬ್ದಾರಿಗಳೂ ಇರಬಹುದು. ಆದರೆ, ಹೀಗೆ ಕಂಠಮಟ್ಟ ಕುಡಿದು ಹೆದ್ದಾರಿಯಲ್ಲಿ ಓಡಾಡಿ ಅವನು ತನ್ನ ಜೀವವನ್ನು ಅಪಾಯಕ್ಕೊಡುವ ಜೊತೆಗೆ ತನ್ನ ಮೇಲೆ ಅವಲಂಬಿತರ ಭವಿಷ್ಯಕ್ಕೂ ಸಂಚಕಾರ ತಂದೊಡ್ಡುವ ಹಾಗಿದ್ದಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಟೋಲ್ ಬಳಿ ಹೊತ್ತಿ ಉರಿದ BMW ಕಾರು