ಗಂಡು ಸೊಳ್ಳೆಗಿಂತ ಹೆಚ್ಚು ಹೆಣ್ಣು ಸೊಳ್ಳೆಗಳೇ ಮನುಷ್ಯರ ರಕ್ತ ಹೀರೋದು ಆಂತ ನಿಮಗೆ ಗೊತ್ತಾ?
ಗರ್ಭಿಣಿ ಮತ್ತು ಬಾಣಂತಿಯ ದೇಹದಿಂದ ಹೆಚ್ಚಿನ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಎಮಿಟ್ ಆಗುತ್ತದೆ. ಹಾಗಾಗಿ ಸೊಳ್ಳೆಗಳು ತಮ್ಮ ಬೇಟೆಗೆ ಇವರನ್ನು ಆರಿಸಿಕೊಳ್ಳುತ್ತವಂತೆ.
ಸೊಳ್ಳೆಗಳ ಬಗ್ಗೆ ಒಂದಷ್ಟು ವೈಜ್ಞಾನಿಕ ಸತ್ಯಗಳನ್ನು ನಿಮಗೆ ಹೇಳಬೇಕು ಮಾರಾಯ್ರೇ. ಏನು ಗೊತ್ತಾ? ಈ ಕೀಟ ರಕ್ತ ಪಿಪಾಸು ನಿಜ, ಹಾಗಂತ ಆದು ಕಂಡಕಂಡವರನ್ನು ಕಚ್ಚಿ ರಕ್ತ ಹೀರೋದಿಲ್ಲ. ಈ ವಿಷಯದಲ್ಲಿ ಅದು ಬಹಳ ಚ್ಯೂಸಿಯಾಗಿದೆ. ಅದಕ್ಕಿಂತ ಮೊದಲು ನಿಮಗೆ ಇನ್ನೊಂದು ಮುಖ್ಯ ವಿಷಯ ಹೇಳಬೇಕು. ಮಾನವರನ್ನು ಹೆಚ್ಚು ಕಚ್ಚೋದು ಹೆಣ್ಣು ಸೊಳ್ಳೆಗಳಂತೆ. ಇದನ್ನು ಓದುತ್ತಿರುವ ನೀವು ಮಹಿಳೆಯಾಗಿದ್ದರೆ ದಯವಿಟ್ಟು ನಮ್ಮನ್ನು ದೂರಬೇಡಿ, ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶವಿದು.
ನಮ್ಮೆಲ್ಲರ ದೇಹಗಳಿಂದ ಇಂಗಾಲದ ಡೈ ಆಕ್ಸೈಡ್ ಹೊರಬೀಳುವುದು ನಿಮಗೆ ಗೊತ್ತಿರುವ ವಿಚಾರವೇ. ಸೊಳ್ಳೆಗಳು ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೊರಹಾಕುವ ಜನರ ಮೇಲೆ ದಾಳಿ ನಡೆಸುತ್ತವೆ. ಗರ್ಭಿಣಿ ಮತ್ತು ಬಾಣಂತಿಯ ದೇಹದಿಂದ ಹೆಚ್ಚಿನ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಎಮಿಟ್ ಆಗುತ್ತದೆ. ಹಾಗಾಗಿ ಸೊಳ್ಳೆಗಳು ತಮ್ಮ ಬೇಟೆಗೆ ಇವರನ್ನು ಆರಿಸಿಕೊಳ್ಳುತ್ತವಂತೆ.
ವೈದ್ಯಕೀಯ ಸಮೀಕ್ಷೆಯೊಂದರ ಪ್ರಕಾರ ಸಾಮಾನ್ಯ ಜನರ ದೇಹಗಳಿಗಿಂತ ಗರ್ಭಿಣಿ ಮತ್ತು ಬಾಣಂತಿಯರ ದೇಹದಿಂದ ಶೇಕಡಾ 20 ರಷ್ಟು ಹೆಚ್ಷುಇಂಗಾಲದ ಡೈ ಆಕ್ಸೈಡ್ ಹೊರ ಸೂಸುತ್ತದೆ.
ನಮ್ಮ ಬ್ಲಡ್ ಗ್ರೂಪ್ ಗೊತ್ತಾಗಬೇಕಾದರೆ ಲ್ಯಾಬ್ಗಳಿಗೆ ಹೋಗಬೇಕು. ಆದರೆ, ಯಾವುದೇ ಟೆಸ್ಟ್ ನಡೆಸದೆ, ಬ್ಲಡ್ ಗ್ರೂಪ್ ಪತ್ತೆ ಮಾಡುವ ಕ್ಷಮತೆ ಸೊಳ್ಳೆಗಳಲ್ಲಿದೆ. ಅವುಗಳಿಗೆ ಬಿ ಮತ್ತು ಒ ಗುಂಪಿನ ರಕ್ತವೆಂದರೆ ಪಂಚಪ್ರಾಣ. ಮತ್ತೊಂದು ವಿಷಯ ಹೇಳಿದರೆ ಸೋಜಿಗ ಪಡುತ್ತೀರಿ. ಸೊಳ್ಳೆಗಳು ತೆಳು ಬಟ್ಟೆ ಧರಿಸುವ ಜನರ ಮೇಲೆ ಜಾಸ್ತಿ ದಾಳಿ ಮಾಡುತ್ತವೆ. ಬಟ್ಟೆ ದಪ್ಪವಿದ್ದರೆ ರಕ್ತ ಹೀರುವ ಸೊಂಡಿಲು ಮುರಿದೀತು ಎಂಬ ಭಯವಿರಬೇಕು!
ಇದನ್ನೂ ಓದಿ: Viral Video: ಮದುವೆ ವೇದಿಕೆಯಲ್ಲಿ ವಧು ವರರ ವ್ಯಾಯಾಮ ಸ್ಪರ್ಧೆ; ಪುಶ್ ಅಪ್ಸ್ನಲ್ಲಿ ಯಾರು ಗೆಲ್ತಾರೆ? ವಿಡಿಯೋ ನೋಡಿ