ಹಿಜಾಬ್ ಧರಿಸಲು ಅನುಮತಿ ಕೋರಿ ಮಂಗಳೂರು ಕಾಲೇಜೊಂದರ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗಳನ್ನು ಭೇಟಿಯಾದರು

ಹಿಜಾಬ್ ಧರಿಸಲು ಅನುಮತಿ ಕೋರಿ ಮಂಗಳೂರು ಕಾಲೇಜೊಂದರ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗಳನ್ನು ಭೇಟಿಯಾದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 30, 2022 | 5:13 PM

ಕಾಲೇಜಿನ ಆಡಳಿತ ಮಂಡಳಿಯು ಈ ತಿಂಗಳ ಆರಂಭದಲ್ಲಿ ಪೋಷಕರ ಜೊತೆ ಸಭೆಯೊಂದನ್ನು ನಡೆಸಿ, ತಮ್ಮ ಮಕ್ಕಳಿಗೆ ಹಿಜಾಬ್ ಧರಿಸದೆ ಕಾಲೇಜಿಗೆ ಬರಲು ತಿಳಿಸಬೇಕೆಂದು ಹೇಳಿತ್ತು. ಆದರೂ ಕೆಲ ವಿದ್ಯಾರ್ಥಿನಿಯರು ಅದನ್ನು ಧರಿಸಿಯೇ ಕಾಲೇಜಿಗೆ ಬರಲಾರಂಭಿಸಿದ್ದರು.

Mangaluru: ಹಿಜಾಬ್ ವಿವಾದ (hijab row) ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಶಾಲಾ ಕಾಲೇಜುಗಳ ಕ್ಯಾಂಪಸ್ನಲ್ಲಿ ಹಿಜಾಬ್ ಧರಿಸಬಾರದು, ಸರ್ಕಾರ ಅಥವಾ ಆಯಾ ಶಾಲಾ ಕಾಲೇಜಿನ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (SDMC) ನಿಗದಿಪಡಿಸಿದ ಸಮವಸ್ತ್ರ (uniform) ಮಾತ್ರ ಧರಿಸಿ ಕಾಲೇಜಿಗೆ ಬರಬೇಕೆಂದು ಆದೇಶ ನೀಡಿದ್ದರೂ ವಿವಾದ ಪದೇಪದೆ ತಲೆ ಎತ್ತುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿಂತೆ ಮಂಗಳೂರು ವಿವಿ ಘಟಕ ಪದವಿ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಸೋಮವಾರ ಮಂಗಳೂರು ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆವಿ ಅವರ ವಿರುದ್ಧ ತಮ್ಮ ಅಳಲು ತೋಡಿಕೊಳ್ಳಲು ಆಗಮಿಸಿದ್ದರು. ಜಿಲ್ಲಾಧಿಕಾರಿಗಳಿಂದ ವಿದ್ಯಾರ್ಥಿನಿಯರು ಏನು ನಿರೀಕ್ಷಿಸಿದ್ದರು, ಮತ್ತು ಅವರು ಹೇಳಿದ್ದೇನು ಅನ್ನೋದು ನಮಗೆ ಗೊತ್ತಾಗಿಲ್ಲ.

ಕಾಲೇಜಿನ ಆಡಳಿತ ಮಂಡಳಿಯು ಈ ತಿಂಗಳ ಆರಂಭದಲ್ಲಿ ಪೋಷಕರ ಜೊತೆ ಸಭೆಯೊಂದನ್ನು ನಡೆಸಿ, ತಮ್ಮ ಮಕ್ಕಳಿಗೆ ಹಿಜಾಬ್ ಧರಿಸದೆ ಕಾಲೇಜಿಗೆ ಬರಲು ತಿಳಿಸಬೇಕೆಂದು ಹೇಳಿತ್ತು. ಆದರೂ ಕೆಲ ವಿದ್ಯಾರ್ಥಿನಿಯರು ಅದನ್ನು ಧರಿಸಿಯೇ ಕಾಲೇಜಿಗೆ ಬರಲಾರಂಭಿಸಿದ್ದರು. ಅದೇ ಕಾಲೇಜಿನ ಹಿಂದೂ ವಿದ್ಯಾರ್ಥಿಗಳು ಅಕ್ಷೇಪಣೆ ಎತ್ತಿದಾಗ ಕಾಲೇಜು ಆವರಣದಲ್ಲಿ ಅಹಿತಕರ ಸಂಗತಿಗಳು ನಡೆಯಲಾರಂಭಿಸಿದವು.

ಕಾಲೇಜಿನ ಪ್ರಿನ್ಸಿಪಾಲ ಮತ್ತು ಅಡಳಿತ ಮಂಡಳಿ ಹೇಳುವ ಪ್ರಕಾರ ಕೆಲವು ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಧರಿಸಿ ಕಾಲೇಜಿಗೆ ಬರುವ ಬಗ್ಗೆ ಹಠಮಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ. ಆದರೆ ಅವರಿಗೆ ಅದಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟವಾಗಿ ಹೇಳಲಾಗಿದೆಯೆಂದು ಮಂಡಳಿ ಹೇಳಿದೆ. ಸದರಿ ವಿದ್ಯಾರ್ಥಿನಿಯರಿಗೆ ಬೇರೆ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಕುಮ್ಮಕ್ಕಿದೆ ಎಂದು ಆರೋಪಿಸಲಾಗುತ್ತಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲೇ 14 ವಿದ್ಯಾರ್ಥಿನಿಯರು ಸೋಮವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾದರು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.