ಅಬ್ಬಾ! ಹೀಗೂ ಉಂಟೆ ಎಂದು ಉದ್ಘಾರ ತೆಗೆಯುವಷ್ಟರಮಟ್ಟಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರೀ ಕಳ್ಳತನ
Huubballi dacoity: ಹುಬ್ಬಳ್ಳಿಯಲ್ಲಿ ಗಣೇಶನ ವಿಸರ್ಜನೆಗೆ ಐದು ಸಾವಿರ ಪೊಲೀಸರ ನಿಯೋಜನೆ ಮಧ್ಯೆ ಈ ಕಳ್ಳತನ ನಡೆದಿರುವುದು ಹಲವರ ಹುಬ್ಬೇರಿಸಿದೆ. ಬಹುತೇಕ ಪೊಲೀಸರು ಗಣೇಶೋತ್ಸವಕ್ಕೆ ಬಂದೋಬಸ್ತ್ ಒದಗಿಸುವ ಕಾರ್ಯದಲ್ಲಿದ್ದಾಗ, ಎಂದಿನಂತೆ ಸಾಮಾನ್ಯ ಗಸ್ತು ತಿರುಗಲು ಪೊಲೀಸರ ಕೊರತೆ ಎದುರಾಗಿದೆ. ಇದೇ ಸಮಯ ಸಾಧಿಸಿದ ಕಳ್ಳರು ಭಾರೀ ದರೋಡೆ ನಡೆಸಿದ್ದಾರೆ. ಮನೆಯಲ್ಲಿದ್ದವರನ್ನೆಲ್ಲಾ ಕಟ್ಟಿ ಹಾಕಿ ಕೋಟಿ ರೂ ಚಿನ್ನಾಭರಣ ಡಕಾಯಿತಿ
ಹುಬ್ಬಳ್ಳಿ, ಸೆಪ್ಟೆಂಬರ್ 21: ಅಬ್ಬಾ ಹೀಗೂ ಉಂಟೆ ಎಂದು ಉದ್ಘಾರ ತೆಗೆಯುವಷ್ಟರಮಟ್ಟಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರೀ ಕಳ್ಳತನ ನಡೆದಿದೆ. ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಲ್ಲಿ ಉಲ್ಲಾಸ ದೊಡ್ಡಮನಿ ಎಂಬುವವರ ಮನೆಯಲ್ಲಿ ಇಂತಹ ಕಳ್ಳತನ ನಡೆದಿದೆ. ದೊಡ್ಡಮನಿ ಅವರ ಮನೆಯಲ್ಲಿದ್ದವರನ್ನ ಕಟ್ಟಿಹಾಕಿ ಕಳ್ಳತನ ಮಾಡಿದ್ದಾರೆ. ಅದೂ ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನವಾಗಿದೆ!
ಅಂದಹಾಗೆ ಉಲ್ಲಾಸ ದೊಡ್ಡಮನಿ ಅವರು ವಿದ್ಯಾ ಮಂದಿರ ಬುಕ್ ಡಿಪೋ ಮಾಲೀಕರು. ಕಿಟಕಿಯ ಕಬ್ಬಿಣದ ಗ್ರೀಲ್ ಕಟ್ ಮಾಡಿ ಮನೆಯೊಳಕ್ಕೆ ಎಂಟ್ರಿ ಕೊಟ್ಟು ಒಂದಲ್ಲಾ ಎರಡಲ್ಲಾ ಬರೋಬ್ಬರಿ 6 ಮಂದಿಯನ್ನ ಕಟ್ಟಿ ಹಾಕಿ ಕಳ್ಳತನ ಮಾಡುವಷ್ಟು ಧಾರ್ಷ್ಟ್ಯ ಮೆರೆದಿದ್ದಾರೆ ಖದೀಮರು. ಸುಮಾರು ಎಂಟು ಜನರಿಂದ ಈ ಡಕಾಯಿತ ಕೃತ್ಯ ನಡೆದಿದೆ.
ಕಳ್ಳತನಕ್ಕೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಸಂದರ್ಭವನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಈದ್ಗಾ ಮೈದಾನದ ಗಣೇಶನ ವಿಸರ್ಜನೆ ಜನಸಂದಣಿಯ ವೇಳೆ ಎಲ್ಲರೂ ಬ್ಯುಸಿಯಾಗಿರುವಾಗ ಕುಕೃತ್ಯವೆಸಗಿದ್ದಾರೆ ಎಂದು ಸ್ಥಳಕ್ಕೆ ದೌಡಾಯಿಸಿರುವ ಹುಬ್ಬಳ್ಳಿ-ಧಾರವಾಡ ಪೊಲೀಸರು ತಿಳಿಸಿದ್ದಾರೆ.
ಗಣೇಶನ ವಿಸರ್ಜನೆಗೆ ಐದು ಸಾವಿರ ಪೊಲೀಸರ ನಿಯೋಜನೆ ಮಧ್ಯೆ ಈ ಕಳ್ಳತನ ನಡೆದಿರುವುದು ಹಲವರ ಹುಬ್ಬೇರಿಸಿದೆ. ಬಹುತೇಕ ಪೊಲೀಸರು ಗಣೇಶೋತ್ಸವಕ್ಕೆ ಬಂದೋಬಸ್ತ್ ಒದಗಿಸುವ ಕಾರ್ಯದಲ್ಲಿದ್ದಾಗ, ಎಂದಿನಂತೆ ಸಾಮಾನ್ಯ ಗಸ್ತು ತಿರುಗಲು ಪೊಲೀಸರ ಕೊರತೆ ಎದುರಾಗಿದೆ. ಇದೇ ಸಮಯ ಸಾಧಿಸಿದ ಕಳ್ಳರು ಭಾರೀ ದರೋಡೆ ನಡೆಸಿದ್ದಾರೆ. ಸ್ಥಳಕ್ಕೆ ಗೋಕುಲ ರೋಡ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ