ಬೆಂಗಳೂರಿನ ಈ ಗೌಡಾಸ್ ಹೋಟೆಲ್ ನಲ್ಲಿ ಹಲಾಲ್ ಕಟ್ ಮಾಂಸಕ್ಕೆ ಆಸ್ಪದವೇ ಇಲ್ಲ ಅನ್ನುತ್ತಾರೆ ಗ್ರಾಹಕರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 30, 2022 | 5:01 PM

ಮುಸ್ಲಿಂ ಜನರು ನಡೆಸುವ ಹೋಟೆಲ್ ಗಳು ಸಹ ಈ ಪ್ರದೇಶದಲ್ಲಿವೆ, ಅವರೇನೂ ಬೇರೆಯವರಲ್ಲ, ನಮ್ಮ ಅಣ್ಣತಮ್ಮಂದಿದ್ದಂತೆ ಹೇಳುವ ಅವರು ಊಟಕ್ಕೆ ಮಾತ್ರ ಅವರ ಹೋಟೆಲ್ ಗಳಿಗೆ ಹೋಗೋದಿಲ್ಲ ಅನ್ನುತ್ತಾರೆ.

ಬೆಂಗಳೂರು: ಹಲಾಲ್ ಕಟ್ (halal cut), ಜಟ್ಕಾ ಕಟ್ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಲಾಲ್ ಕಟ್ ಬೋರ್ಡು ತೂಗು ಹಾಕಿರುವ ಮುಸ್ಲಿಂ ಸಮುದಾಯ ಜನರ ಒಡೆತನದಲ್ಲಿರುವ ಚಿಕನ್ ಮತ್ತು ಮಟನ್ ಅಂಗಡಿಗಳಲ್ಲಿ (meat stalls) ಮಾಂಸ ಖರೀದಿಸಬಾರದೆಂಬ ಅಭಿಯಾನ (campaign) ಜೋರು ಹಿಡಿದಿದೆ. ಮಾಂಸ ಖರೀದಿಸದಂತಿರುವುದು ಅಲ್ಲದೆ ಮುಸಲ್ಮಾನರ ಒಡೆತನದ ಹೋಟೆಲ್ ಗಳಲ್ಲಿ ಊಟ ಮಾಡಲು ಸಹ ಹೋಗಬಾರದು ಅಂತ ಹಿಂದೂ ಪರ ಸಂಘಟನೆಗಳು ಹೇಳುತ್ತಿವೆ. ಟಿವಿ9 ಚ್ಯಾನೆಲ್ ನ ಬೆಂಗಳೂರು ವರದಿಗಾರರು ನಗರದಲ್ಲಿರುವ ಮಾರುತಿ ಗೌಡಾಸ್ ಮಾಂಸಾಹಾರಿ ಹೋಟೆಲ್ ಗೆ ಊಟಕ್ಕೆಂದು ಬರುವ ಕೆಲ ಗ್ರಾಹಕರನ್ನು ಬುಧವಾರ ಮಾತಾಡಿಸಿದ್ದಾರೆ. ಈ ಹೋಟೆಲ್ ಮಾಲೀಕರು ಹಲಾಲ್ ಕಟ್ ಅಂಗಡಿಗಳಿಂದ ಮಾಂಸ ತರುವುದಿಲ್ಲವಂತೆ.

ಇಲ್ಲಿ ಮಾತಾಡುತ್ತಿರುವ ವ್ಯಕ್ತಿ ಮಾಗಡಿಯವರು. ಕೆಲಸದ ನಿಮಿತ್ತ ಅವರು ಬೆಂಗಳೂರಿಗೆ ಬಂದಾಗೆಲ್ಲ ಊಟ ಮಾಡಲು ಇದೇ ಹೋಟೆಲ್ ಗೆ ಬರುತ್ತಾರಂತೆ. ಇವರ ಹೆಸರು ಶ್ರೀನಿವಾಸ ಅಂತ. ಕಳೆದ 26 ವರ್ಷಗಳಿಂದ ಈ ಹೋಟೆಲ್ ಗೆ ಬರುತ್ತಿರುವುದಾಗಿ ಹೇಳುವ ಶ್ರೀನಿವಾಸ ಅವರು ಇಲ್ಲಿನ ಮಾಲೀಕರು ಹಲಾಲ್ ಕಟ್ ಮಾಂಸ ತರೋದಿಲ್ಲ ಎಂದು ಹೇಳುತ್ತಾರೆ.

ಮುಸ್ಲಿಂ ಜನರು ನಡೆಸುವ ಹೋಟೆಲ್ ಗಳು ಸಹ ಈ ಪ್ರದೇಶದಲ್ಲಿವೆ, ಅವರೇನೂ ಬೇರೆಯವರಲ್ಲ, ನಮ್ಮ ಅಣ್ಣತಮ್ಮಂದಿದ್ದಂತೆ ಹೇಳುವ ಅವರು ಊಟಕ್ಕೆ ಮಾತ್ರ ಅವರ ಹೋಟೆಲ್ ಗಳಿಗೆ ಹೋಗೋದಿಲ್ಲ ಅನ್ನುತ್ತಾರೆ.

ಹೋಟೆಲ್ ಮಾಲೀಕರು ಮುಸ್ಲಿಂ ಗ್ರಾಹಕರನ್ನು ಸೆಳೆಯುವುದಕ್ಕೋಸ್ಕರ ಹಲಾಲ್ ಕಟ್ ಅಂತ ಬೋರ್ಡು ಹಾಕಿಕೊಂಡು ಮುಸಲ್ಮಾನರ ಅಂಗಡಿಗಳಿಂದ ಮಾಂಸ ತರೋದನ್ನು ಆರಂಭಿಸಿದರೆ, ಒಕ್ಕಲಿಗ ಸಮುದಾಯದ ಜನ ಇಲ್ಲಿಗೆ ಊಟಕ್ಕೆ ಬರುವದನ್ನೇ ನಿಲ್ಲಿಸಿಬಿಡುತ್ತಾರೆ ಅಂತ ಶ್ರೀನಿವಾಸ ಹೇಳುತ್ತಾರೆ.

ಇದನ್ನೂ ಓದಿ:  ಹಲಾಲ್ VS ಜಟ್ಕಾ ಕಟ್: ಯುಗಾದಿಗೆ ಮೊದಲು ಭುಗಿಲೆದ್ದ ಮತ್ತೊಂದು ವಿವಾದ, ಎರಡೂ ಪ್ರಾಣಿವಧೆ ಪದ್ಧತಿಗಳ ವಿವರ ಇಲ್ಲಿದೆ