ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ನುಗ್ಗಿದ ಬೃಹತ್ ಕಾಳಿಂಗ ಸರ್ಪ: ಗ್ರಾಮಸ್ಥರಲ್ಲಿ ಆತಂಕ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 15, 2022 | 8:14 PM

ಸಮೀಪದಲ್ಲೇ ದಟ್ಟ ಅರಣ್ಯ ಇರುವುದರಿಂದ ಅಲ್ಲಿಂದ ಸುಮಾರು 10 ಅಡಿ ಉದ್ದದ ಹೆಬ್ಬಾವು ತನ್ನ ಬೇಟೆಯನ್ನು ಹಿಂಬಾಲಿಸಿಯೋ ಅಥವಾ ಆಹಾರವನ್ನು ಹುಡುಕುತ್ತಲೋ ನಾರಗೇರಿಯ ಜನವಸತಿ ಪ್ರದೇಶಕ್ಕೆ ಬಂದಿತ್ತು.

ಕಾರವಾರ: ಬೃಹತ್ ಕಾಳಿಂಗ ಸರ್ಪವೊಂದು ಆಹಾರ ಅರಸಿ ಕಾಡಿನಿಂದ ಜನವಸತಿ ಪ್ರದೇಶಕ್ಕೆ ನುಗ್ಗಿದ ಪರಿಣಾಮ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾದ ಘಟನೆ ತಾಲ್ಲೂಕಿನ ಶಿರವಾಡದ ನಾರಗೇರಿಯಲ್ಲಿ ನಡೆದಿದೆ. ಸಮೀಪದಲ್ಲೇ ದಟ್ಟ ಅರಣ್ಯ ಇರುವುದರಿಂದ ಅಲ್ಲಿಂದ ಸುಮಾರು 10 ಅಡಿ ಉದ್ದದ ಹೆಬ್ಬಾವು ತನ್ನ ಬೇಟೆಯನ್ನು ಹಿಂಬಾಲಿಸಿಯೋ ಅಥವಾ ಆಹಾರವನ್ನು ಹುಡುಕುತ್ತಲೋ ನಾರಗೇರಿಯ ಜನವಸತಿ ಪ್ರದೇಶಕ್ಕೆ ಬಂದಿತ್ತು. ಈ ವೇಳೆ ಬಂಜರು ಗದ್ದೆಯಲ್ಲಿ ಕಾಳಿಂಗ ಸರ್ಪ ಇರುವುದನ್ನು ಕಂಡ ಗ್ರಾಮಸ್ಥರು ಕೆಲಕಾಲ ಆತಂಕಕ್ಕೆ ಒಳಗಾದರು. ಬಳಿಕ ಉರಗ ಪ್ರೇಮಿ ನಿತಿನ್ ಪೂಜಾರಿ ಅವರಿಗೆ ವಿಷಯ ಮುಟ್ಟಿಸಲಾಯಿತು. ಸ್ಥಳಕ್ಕಾಗಮಿಸಿದ ಅವರು ಸ್ಥಳೀಯರ ನೆರವಿನಿಂದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು. ಬಳಿಕ ಅರಣ್ಯಾಧಿಕಾರಿಗಳು ಕಾಳಿಂಗವನ್ನು ಜನವಸತಿ‌ ಇಲ್ಲದ. ಅರಣ್ಯ ಪ್ರದೇಶದಲ್ಲಿ ಬಿಟ್ಟು ರಕ್ಷಣೆ ಮಾಡಿದ್ದಾರೆ.