ಹುಬ್ಬಳ್ಳಿ ಹತ್ತಿರದ ಅಗಡಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಶಾಲಾಮಕ್ಕಳು ಮತ್ತವರ ಪಾಲಕರು ಬಸ್ ತಡೆದು ಪ್ರತಿಭಟನೆ ನಡೆಸಿದರು
ಸಂಜೆ 5 ಗಂಟೆಗೆ ತಮ್ಮೂರಿಗೆ ಬಸ್ ಬಿಡುವಂತೆ ಆಗ್ರಹಿಸಿ ಶಾಲಾಮಕ್ಕಳು ಮತ್ತು ಅವರ ಪಾಲಕರು ಗುರುವಾರ ರಾತ್ರಿ ಅಗಡಿಯಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ: ಅಗಡಿ ಗ್ರಾಮದ ಶಾಲಾಮಕ್ಕಳ ಸಮಸ್ಯೆ ಮತ್ತು ತಾಪತ್ರಯ ಈಶಾನ್ಯ ಸಾರಿಗೆ ಸಂಸ್ಥೆಯ (NEKRTC) ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಇವರು ಪ್ರತಿದಿನ ವಿದ್ಯಾಭ್ಯಾಸಕ್ಕಾಗಿ ಅಗಡಿಯಿಂದ ಹುಬ್ಬಳ್ಳಿಯಲ್ಲಿರುವ (Hubballi) ಶಾಲೆಗಳಿಗೆ ಹೋಗುತ್ತಾರೆ. ಆದರೆ ಶಾಲೆ ಮುಗಿದ ಬಳಿಕ ಊರಿಗೆ ವಾಪಸ್ಸಾಗಲು ಸೂಕ್ತ ಬಸ್ಸಿನ ವ್ಯವಸ್ಥೆ (bus facility) ಇಲ್ಲ. ಹುಬ್ಬಳ್ಳಿಯಿಂದ ಅಗಡಿಗೆ ರಾತ್ರಿ 8.00 ಗೆ ಬಸ್ಸು ಹೊರಡುತ್ತಿದೆಯಂತೆ. ಕೆಲ ಮಕ್ಕಳು ಅಂಗಡಿಯಿಂದ ಐದೈದು ಕಿಮೀ ದೂರವಿರುವ ಊರುಗಳಿಗೆ ನಡೆದು ಹೋಗಬೇಕು. ಹಾಗಾಗಿ, ಸಂಜೆ 5 ಗಂಟೆಗೆ ತಮ್ಮೂರಿಗೆ ಬಸ್ ಬಿಡುವಂತೆ ಆಗ್ರಹಿಸಿ ಶಾಲಾಮಕ್ಕಳು ಮತ್ತು ಅವರ ಪಾಲಕರು ಗುರುವಾರ ರಾತ್ರಿ ಅಗಡಿಯಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
Latest Videos