ಬೆಳಗಾವಿ ಜಿಲ್ಲೆಯಲ್ಲೊಬ್ಬ ವಿವಾಹಿತ ಪ್ರೇಮಿಯ ಹುಚ್ಚಾಟ, ಪ್ರೀತ್ಸೆ ಅಂತ ವಿವಾಹಿತ ಮಹಿಳೆ ಹಿಂದೆ ಬಿದ್ದು ದೌರ್ಜನ್ಯ

Updated on: Apr 05, 2025 | 10:50 AM

ಮಹಿಳೆಯ ಕುಟುಂಬದ ಸದಸ್ಯರು ಎಷ್ಟು ಅಮಾಯಕರೆಂದರೆ ಲಗುಮಪ್ಪನ ವಿರುದ್ಧ ಅವರಿಗೆ ಪೊಲೀಸ್​ ಠಾಣೆಗೆ ಹೋಗಿ ದೂರು ನೀಡುವುದು ಸಹ ಗೊತ್ತಿಲ್ಲ. ಲಗುಮಪ್ಪನ ವರ್ತನೆ ಬಗ್ಗೆ ಕೇಳಿಸಿಕೊಂಡರೆ ಅವನು ಸ್ಥಿತಿವಂತನಂತೆ ಕಾಣುತ್ತಾನೆ. ನೊಂದಿರುವ ಕುಟುಂಬಕ್ಕೆ ನ್ಯಾಯ ಬೇಕಿದೆ. ಖಾನಾಪುರದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಲಗುಮಪ್ಪ ಮತ್ತು ನೊಂದ ಮಹಿಳೆಯನ್ನು ವಿಚಾರಿಸಿದರೆ ಸತ್ಯ ಗೊತ್ತಾಗುತ್ತದೆ.

ಬೆಳಗಾವಿ, ಏಪ್ರಿಲ್ 5: ವಿವಾಹಿತ ಮಹಿಳೆಯ ಹಿಂದೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಅಂತ ಗೋಗರೆಯುವುದು, ಅಕೆ ನಿರಾಕರಿಸಿದಾಗ ಹುಚ್ಚಾಟ ಮತ್ತು ಹಲ್ಲೆಗಳನ್ನು ಮಾಡೋದು ಅಂದಕಾಲತ್ತಿಲ್ ನಡೆದುಕೊಂಡು ಬಂದಿದೆ. ಬೆಳಗಾವಿ ಜಿಲ್ಲೆ (Belagavi district) ಖಾನಾಪುರ ತಾಲೂಕಿನ ಇದ್ದಲಹೊಂಡ ಹೆಸರಿನ ಗ್ರಾಮದಲ್ಲಿ ಲಗಮಪ್ಪ ಪೂಜಾರಿ ಹೆಸರಿನ ವಿವಾಹಿತ ದುರುಳನೊಬ್ಬ ವಿಡಿಯೋದಲ್ಲಿ ಕಾಣುತ್ತಿರುವ ತನ್ನನ್ನು ಪ್ರೀತಿಸುವಂತೆ ಮಹಿಳೆ ಮೇಲೆ ದೌರ್ಜನ್ಯ ವೆಸಗಿದ್ದಾನೆ, ಆಕೆಯ ಮೇಲೆ ಖಾರದ ಪುಡಿ ಎರಚಿ ಅವಮಾನವೀಯವಾಗಿ ವರ್ತಿಸಿದ್ದಾನೆ, ಮಹಿಳೆ ತನ್ನ ಗೋಳಿನ ಕತೆಯನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  ಬೆಂಗಳೂರು: ಪ್ರೀತ್ಸೆ…ಪ್ರೀತ್ಸೆ ಎಂದು ವಿವಾಹಿತ ಮಹಿಳೆ ಬಲಿ ಪಡೆದ ಕಾಮಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ