ಬರ್ಹಿದೆಸೆಗೆ ತೆರಳಿದ್ದ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಆರೋಪ; ಯುವಕ ಪರಾರಿ
ಬೀದರ್ ತಾಲೂಕಿನ ಚಾಂಬೋಳ ಗ್ರಾಮದಲ್ಲಿ ಬರ್ಹಿದೆಸೆಗೆ ಹೋದ ಮಹಿಳೆ ಮೇಲೆ ಯುವಕನೊಬ್ಬ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದ್ದು, ಆರೋಪಿ ಯುವಕ ಪರಾರಿಯಾಗಿದ್ದಾನೆ. ಈ ಕುರಿತು ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಸಂತ್ರಸ್ಥೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೀದರ್, ಏ.12: ಬೀದರ್(Bidar) ತಾಲೂಕಿನ ಜನವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆ ಮೇಲೆ ಯುವಕನಿಂದ ಅತ್ಯಾಚಾರ ಆರೋಪ ಕೇಳಿಬಂದಿದೆ. ಯುಗಾದಿ ಹಬ್ಬದ ದಿನ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಸಂತ್ರಸ್ತೆಗೆ ಬೀದರ್ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬರ್ಹಿದೆಸೆಗೆ ಹೋದಾಗ ಮಹಿಳೆ ಮೇಲೆ ಯುವಕ ಅತ್ಯಾಚಾರ ಮಾಡಿದ್ದಾನೆಂದು ಆರೋಪಿಸಿ, ಯುವಕನ ಮೇಲೆ ಕೊಲೆ ಯತ್ನ ಮತ್ತು ರೇಪ್ ಕೇಸ್ ದಾಖಲು ಮಾಡಲಾಗಿದೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಹೃದಯಾಘಾತಕ್ಕೆ ಪೊಲೀಸ್ ಪೇದೆ ಬಲಿ
ಕೊಡಗು: ವಿರಾಜಪೇಟೆಯಲ್ಲಿ ಹೃದಯಾಘಾತದಿಂದ ಕಾನ್ಸ್ಟೇಬಲ್ ಸಾವನ್ನಪ್ಪಿದ್ದಾನೆ. ಆನಂದ್ ಡೊಳ್ಳಿನ್(42) ಮೃತ ವ್ಯಕ್ತಿ. ವಿರಾಜಪೇಟೆ ಡಿವೈಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದ್, ವಸತಿ ಗೃಹದಲ್ಲಿದ್ದಾಗ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ:ತಾಯಿಯ ಸ್ನೇಹಿತನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಅಪರಾಧ ಮರೆಮಾಚಲು ಚಿತ್ರಹಿಂಸೆ
ಕಾರು ಡಿಕ್ಕಿಯಾಗಿ ಆಟೋ ಚಾಲಕನ ಸ್ಥಿತಿ ಗಂಭೀರ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ಕಾರು ಮತ್ತು ಅಟೋ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಆಟೋ ಸಂಪೂರ್ಣ ಜಖಂ ಆಗಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದೆ. ಕೂಡಲೇ ಆತನನ್ನು ಖಾಸಗಿ ಅಸ್ಪತ್ರೆಗೆ ರವಾನಿಸಲಾಗಿದೆ. ಇತ್ತ ಏರ್ ಬಲೂನ್ ಒಪನ್ ಆಗಿದ್ದರಿಂದ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಈ ಕುರಿತು ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:21 pm, Fri, 12 April 24