AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​: ಬತ್ತಿದ ಬಾವಿ, ಬೋರ್​ವೆಲ್ ನೀರು; ‘ಬಾಳೆ’ ಬೆಳೆಸಿದ್ದ ರೈತ ಕಂಗಾಲು

ಬಾವಿ,ಬೋರ್ವೆಲ್​​ನಲ್ಲಿ ಬರಪುರ ನೀರು ಇರುವುದರಿಂದ ಆ ರೈತ  ‘ಬಾಳೆ’ ಬೆಳೆಸಿದ್ದ. ಕಾಲಕಾಲಕ್ಕೆ ಗೊಬ್ಬರ, ಔಷದೋಪಚಾರ ಮಾಡಿದ್ದರ ಫಲವಾಗಿ ಬಾಳೆ ಫಸಲು ಚನ್ನಾಗಿ ಬಂದಿತ್ತು. ಇನ್ನೊಂದು ತಿಂಗಳಲ್ಲಿ ಕಟಾವು ಮಾಡಿಬೇಕೆಂದಿದ್ದ ರೈತನಿಗೆ ಬಾವಿ, ಬೋರ್​ವೆಲ್​ನಲ್ಲಿ ನೀರು ಖಾಲಿಯಾಗಿದ್ದು, ರೈತನನ್ನ ಕಂಗಾಲು ಮಾಡಿದೆ.

ಬೀದರ್​: ಬತ್ತಿದ ಬಾವಿ, ಬೋರ್​ವೆಲ್ ನೀರು; ‘ಬಾಳೆ’ ಬೆಳೆಸಿದ್ದ ರೈತ ಕಂಗಾಲು
ಬಾಳೆ ಬೆಳೆದು ಸಂಕಷ್ಟಕ್ಕೆ ಬಂದ ರೈತ
ಸುರೇಶ ನಾಯಕ
| Edited By: |

Updated on:Apr 11, 2024 | 4:36 PM

Share

ಬೀದರ್, ಏ.11: ಬಾವಿ, ಬೋರ್​ವೆಲ್ ನಂಬಿಕೊಂಡು ‘ಬಾಳೆ’ ಬೆಳೆಸಿದ್ದ ರೈತ ನೀರಿಲ್ಲದೆ ಕಂಗಾಲಾಗಿದ್ದಾನೆ. ಸಾಲ ಮಾಡಿ ವರ್ಷವಿಡೀ ಬೆಳೆಸಿದ್ದ ಬಾಳೆ ಕಣ್ಮುಂದೆಯೇ ಒಣಗಿ ಹೋಗಿದೆ. ಬೀದರ್(Bidar) ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಣಮೇಳಕುಂದಾ ಗ್ರಾಮದ ರೈತ ಜಲೇಂದ್ರ ಎಂಬುವವರು ತಮ್ಮ ಮೂರು ಎಕರೆಯಷ್ಟು ಜಮೀನಿನಲ್ಲಿ ಬಾಳೆ ಬೆಳೆಸಿದ್ದರು. ಈಗ ಬಾಳೆ ನಾಟಿ ಮಾಡಿ 11 ತಿಂಗಳು ಕಳೆದಿದ್ದು, ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರುತ್ತಿತ್ತು. ಆದರೆ, ಬಾವಿ ಹಾಗೂ ಬೋರ್​ವೆಲ್​ನಲ್ಲಿ ನೀರು ಏಕಾಏಕಿ ಬಿಸಲಿನ ಹೊಡೆತಕ್ಕೆ ಬತ್ತಿದ್ದು, ಬೆಳೆಗೆ ನೀರು ಕೊಡಲು ಕೊಡಲಾಗಿಲ್ಲ. ಹೀಗಾಗಿ ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರುತ್ತಿದ್ದ ಬಾಳೆ ಒಣಗುತ್ತಿದ್ದು, ನೀರಿನ ಸಮಸ್ಯೆಯಿಂದಾಗಿ ಬಾಳೆ ಮುರಿದು ಬೀಳುತ್ತಿದೆ.

ಇನ್ನು ಬೇರೆಯವರಿಂದ ನೀರು ತೆಗೆದುಕೊಂಡು ಒಣಗುತ್ತಿದ್ದ ಬಾಳೆಯನ್ನ ಉಳಿಸೋಣ ಎಂದರೂ ಕೂಡ ಬೇರೆ ರೈತರ ಬಾವಿ, ಬೋರ್​ವೆಲ್​ನಲ್ಲಿಯೂ ನೀರು ಕಡಿಮೆಯಾಗಿದ್ದು, ಅವರ ಬೆಳೇಗೆನೇ ಸಾಕಾಗುತ್ತಿಲ್ಲ. ಹೀಗಾಗಿ ಏನು ಮಾಡಬೇಕು ಎಂದು ತಿಳಿಯದ ರೈತ ಕಂಗಾಲಾಗಿದ್ದಾನೆ. ಹಗಲು ರಾತ್ರಿ ಎನ್ನದೆ ಕಷ್ಟು ಪಟ್ಟು ಬೆಳೆಸಿದ ಬಾಳೆ ಕಣ್ಣೆದುರೇ ಒಣಗುತ್ತಿರುವುದು ರೈತನನ್ನ ಹತಾಶೆಗೊಳಿಸಿದೆ.

ಇದನ್ನೂ ಓದಿ:ಬರದ ನಾಡಲ್ಲೂ ಬಂಗಾರದಂತ‌ ಬೆಳೆ ಬೆಳೆದ ರೈತ; ಸಮಗ್ರ ಕೃಷಿ ಮೂಲಕ ಲಕ್ಷಾಂತರ ರೂ. ಲಾಭ

ಹನ್ನೊಂದು ತಿಂಗಳ ಹಿಂದೆ ಮೂರು ಎಕರೆಯಷ್ಟು ಜಮೀನಿನಲ್ಲಿ 3 ವರೆ ಸಾವಿರ ಬಾಳೆ ಸಸಿಗಳನ್ನ ತಂದು ನಾಟಿ ಮಾಡಿದ್ದ. ಸಕಾಲಕ್ಕೆ ಗೊಬ್ಬರ, ನೀರು, ಔಷಧಿ ಹಾಕಿದ್ದರ ಪರಿಣಾಮವಾಗಿ ಬಾಳೆ ಗಿಡಗಳು ಹುಲುಸಾಗಿ ಬೆಳೆದು, ದೊಡ್ಡ ಬಾಳೆ ಗೊಣೆಗಳು ಬಂದಿದ್ದವೂ, ಒಂದು ಬಾಳೆ ಗಿಡ ಈಗಿನ ಮಾರುಕಟ್ಟೆ ದರದಲ್ಲಿ ಕನಿಷ್ಟ ವೆಂದರೂ 5 ನೂರು ರೂಪಾಯಿಯಷ್ಟು ಹಣ್ನು ಬರುತ್ತಿತ್ತು. ಅಂದಾಜು 17 ಲಕ್ಷ ರೂಪಾಯಿವರೆಗೆ ಆದಾಯ ಬರುವ ನಿರಿಕ್ಷೇ ಇತ್ತು. ಆದರೆ, ಬಾವಿ, ಬೋರ್ವೆಲ್​ನಲ್ಲಿ ನೀರು ಬತ್ತಿದ ಕಾರಣ ಬಾಳೆಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಾಳೆಗಿಡಗಳು ಒಣಗುತ್ತಿದ್ದು ಬಾಳೆಯ ಗೊಣೆಗಳನ್ನ ಹೊತ್ತುಕೊಂಡು ನಿಲ್ಲಲ್ಲು ಸಾಧ್ಯವಾಗದೆ ಗಿಡಗಳು ನೆಲ್ಲಕ್ಕುರುಳುತ್ತಿದೆ.

ಇನ್ನು ಟ್ಯಾಂಕರ್ ಮೂಲಕ ನೀರು ತಂದು ಬಾಳೆ ಗಿಡಗಳನ್ನ ಬದುಕಿಸೋಣ ಎಂದರೂ ಕೂಡ ಬಾಳೆ ನೀರು ಸಾಕಷ್ಟು ಪ್ರಮಾಣದಲ್ಲಿ ಬೇಕು. ಹೀಗಾಗಿ ಟ್ಯಾಂಕರ್​​ನಿಂದ ನೀರು ಹಾಕಿ ಬಾಳೆ ಬದುಕಿಸಲು ಕೂಡ ಸಾಧ್ಯವಿಲ್ಲ. ಹೀಗಾಗಿ ರೈತ ಅಸಹಾಯಕನಾಗಿದ್ದು, ಏನು ಮಾಡಬೇಕು ತಿಳಿಯದಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಕಳೆದ ವರ್ಷ ಬರದಿಂದಾಗಿ ರೈತ ಬೆಳೆ ಕಳೆದುಕೊಂಡು ಆ ಸಾಲ ಇನ್ನೂ ತೀರಿಸಿಲ್ಲ. ಅಷ್ಟರಲ್ಲಾಗಲೇ ನೀರು ಕೈ ಕಟ್ಟಿದ್ದರಿಂದಾಗಿ ಬಾಳೆ ಬೆಳೆ ಕೂಡ ಒಣಗಿದ್ದು, ರೈತರನ್ನ ಕಂಗಾಲು ಮಾಡಿದ್ದಂತೂ ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:36 pm, Thu, 11 April 24