ತುಮಕೂರಿನಲ್ಲಿ ನಾಯೊಂದು ಕರುವಿಗೆ ಮಮತೆಯಿಂದ ಹಾಲುಣಿಸಿ ತಾಯ್ತನದ ಸುಖ ಅನುಭವಿಸಿತು!

ನಾವು ವರ್ಣಿಸಲಾಗದ್ದನ್ನು ಎರಡು ನಿಮಿಷಗಳ ವಿಡಿಯೋ ಸವಿಸ್ತಾರವಾಗಿ ಹೇಳುತ್ತದೆ. ತುಮಕೂರಿನ ಬಸವರಾಜ ಮತ್ತು ಗೀತಾ ಹೆಸರಿನ ದಂಪತಿ ಮನೆಯಲ್ಲಿ ಈ ಅಪರೂಪದ ದೃಶ್ಯ ಕಂಡಿದೆ.

TV9kannada Web Team

| Edited By: Arun Belly

May 17, 2022 | 7:07 PM

Tumakuru: ಮರಿಗಳನ್ನು ಹಾಕಿ ಕೆಚ್ಚಲು ತುಂಬಿಕೊಂಡಿರುವ ನಾಯಿ (dog) ಮತ್ತು ಹಸಿವಿನಿಂದ ತಾಯಿ ಹಾಲಿಗಾಗಿ ತವಕಿಸುತ್ತಿರುವ ಒಂದು ಕರುವಿನ (calf) ನಡುವೆ ತಾಯಿ ಮತ್ತು ಮಗುವಿನ ಸಂಬಂಧ ಏರ್ಪಡಬಹುದೇ? ನಾವು ಹೇಳುತ್ತಿರುವುದು ನಿಮಗೆ ವಿಚಿತ್ರ ಅನಿಸಬಹುದಾರೂ ಈ ವಿಡಿಯೋ ನೋಡಿದರೆ ಹೀಗೂ ನಡೆಯುತ್ತಾ? ಅಂತ ಸೋಜಿಗ ಪಡುತ್ತೀರಿ. ಈ ವಿಡಿಯೋ ನಮಗೆ ತುಮಕೂರಿನಿಂದ (Tumakuru) ಲಭ್ಯವಾಗಿದೆ ಮಾರಾಯ್ರೇ. ನಾವು ವರ್ಣಿಸಲಾಗದ್ದನ್ನು ಎರಡು ನಿಮಿಷಗಳ ವಿಡಿಯೋ ಸವಿಸ್ತಾರವಾಗಿ ಹೇಳುತ್ತದೆ. ತುಮಕೂರಿನ ಬಸವರಾಜ ಮತ್ತು ಗೀತಾ ಹೆಸರಿನ ದಂಪತಿ ಮನೆಯಲ್ಲಿ ಈ ಅಪರೂಪದ ದೃಶ್ಯ ಕಂಡಿದೆ.

ಎತ್ತರ ಮತ್ತು ಗಾತ್ರದಲ್ಲಿ ಕರು ನಾಯಿಗಿಂತ ದೊಡ್ಡದೆನಿಸಿದರೂ ವಯಸ್ಸಿನಲ್ಲಿ ಚಿಕ್ಕದು. ಇತ್ತೀಚಿಗೆ ಜನಸಿರುವ ಅಕಳು ಮರಿ ಅದು. ನಾಯಿ ಮರಿಗಳನ್ನೂ ಕೂಡ ಹೆತ್ತಿದೆ. ಅದು ಮರಿ ಹಾಕಿರುವುದು ಇದು ಮೊದಲ ಸಲವೋ ಅಥವಾ ಎಷ್ಟನೇ ಸಲವೋ ಅಂತ ಗೊತ್ತಿಲ್ಲ. ನಾಯಿ ಮನೆಮುಂದೆ ನಿಂತಾಗ ಅಲ್ಲೇ ಕಟ್ಟಿರುವ ಹಸಿದ ಕರುವಿಗೆ ಅದರ ಕೆಚ್ಚಲಲ್ಲಿ ಹಾಲಿದೆ ಅಂತ ಗೊತ್ತಾಗಿ ಅಲ್ಲಿಗೆ ಬಾಯಿ ಹಾಕಿದೆ.

ಬಸವರಾಜ ಸಾಕಿರುವ ನಾಯಿ ನಿಸ್ಸಂದೇಹವಾಗಿ ವಾತ್ಸಲ್ಯಮಯಿ ಮಾರಾಯ್ರೇ. ಕರು ಬಾಯಿ ಹಾಕಿದಾಗ ಅದು ದೂರ ಸರಿಯುವ ಪ್ರಯತ್ನ ಮಾಡುವುದಿಲ್ಲ. ಬದಲಿಗೆ ತನ್ನ ಹಾಲು ಕುಡಿಯಲು ಅನುವು ಮಾಡಿಕೊಟ್ಟು ಪ್ರೀತಿಯಿಂದ ಅದರ ಮೈ ನೆಕ್ಕುತ್ತದೆ. ತನ್ನದಲ್ಲದ ಮರಿಗೆ ಹಾಲುಣಿಸುವಾಗಲೂ ಅದು ತಾಯ್ತನದ ಸುಖ ಅನುಭವಿಸುತ್ತದೆ. ಬಹಳ ಅಪರೂಪದ ಹಾಗೂ ಮನಸ್ಸಿಗೆ ಮುದ ನೀಡುವ ದೃಶ್ಯವಿದು!

ಇದನ್ನೂ ಓದಿ:   Viral Video: ಮೂರು ಅನಾಥ ಹುಲಿ ಮರಿಗಳನ್ನು ಸಾಕುತ್ತಿದೆ ಈ ನಾಯಿ!; ವಿಡಿಯೋ ನೋಡಿ ನೆಟ್ಟಿಗರು ಶಾಕ್

Follow us on

Click on your DTH Provider to Add TV9 Kannada