ಮೈಸೂರಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಬಡಾವಣೆಗಳನ್ನು ದ್ವೀಪಗಳಾಗಿ ಪರಿವರ್ತಿಸುತ್ತಿದೆ!
ಇಲ್ಲಿನ ಮನೆಗಳಲ್ಲಿ ವಾಸ ಮಾಡುವ ಜನರ ಸ್ಥಿತಿ ಒಮ್ಮೆ ಯೋಚಿಸಿ ನೋಡಿ. ಅವರು ಕಾಲೋನಿ ವಾಸಿಗಳಿಗಿಂತ ಜಾಸ್ತಿ ದ್ವೀಪ ನಿವಾಸಿಗಳು ಅನಿಸಿಕೊಳ್ಳುತ್ತಾರೆ! ಎಲ್ಲ ಮನೆಗಳ ಸುತ್ತ ನೀರು. ಜನ ಮನೆಗಳಿಂದ ಹೊರಗೆ ಹೋಗಬೇಕಾದರೆ ದೋಣಿಗಳು ಬೇಕಾಗುತ್ತವೆ!
ಮೈಸೂರಲ್ಲಿ ಮಳೆ ಸುರಿಯುವುದು ನಿಲ್ಲುತ್ತಿಲ್ಲ ಮಾರಾಯ್ರೇ. ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆ ಪ್ರಕಾರ ಮೈಸೂರು, ಬೆಂಗಳೂರು ಸೇರಿದಂತೆ ಹಲವಾರು ಭಾಗಗಳಲ್ಲಿ ಇನ್ನೂ ದಿನಗಳ ಕಾಲ ಮಳೆಯಾಗಲಿದೆ. ಮೈಸೂರು ಜಿಲ್ಲೆಯಾದ್ಯಂತ ಅಗುತ್ತಿರುವ ಮಳೆಯಿಂದ ಆಗುತ್ತಿರುವ ಅನಾಹುತಗಳನ್ನು ನಾವು ಆಗಾಗ ತೋರಿಸುತ್ತಿದ್ದೇವೆ. ಗ್ರಾಮೀಣ ಭಾಗಗಳ (rural areas) ಜಮೀನುಗಳಲ್ಲಿ ಕೈಗೆ ಬಂದ ಫಸಲು ನಾಶವಾಗಿದೆ. ರೈತಾಪಿ ಜನ ಮುಂದೇನು ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸೋಮವಾರದಂದು ಸುರಿದ ಮಳೆ ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಿದೆ ಅಂತ ವಿಡಿಯೋನಲ್ಲಿ ನೋಡಬಹುದು. ಇದು ಮೈಸೂರಿನ ಬೋಗಾದಿ ಪ್ರದೇಶ (Bogadi area). ಇಲ್ಲಿರುವ ಮನೆಗಳೆಲ್ಲ ಜಲಾವೃತಗೊಂಡಿರುವುದನ್ನು ಕಾಣಬಹುದು.
ಹಾಗೆಯೇ ಮಳೆಯಿಂದಾಗಿ ಮೋರಿ ಮೇಲೆ ನಿರ್ಮಿಸಲಾಗಿದ್ದ ಸೇತುವೆ ಕುಸಿದು ರಸ್ತೆಯನ್ನು ಇಬ್ಭಾಗವಾಗಿಸಿದೆ. ಕುಸಿದ ಭಾಗದ ಮೂಲಕ ಮಳೆ ನೀರು, ಮೋರಿ ನೀರು ರಭಸದಿಂದ ಹರಿಯುತ್ತಿದೆ. ನಾವು ಯಾವಾಗಲೂ ಹೇಳುವಂತೆ ಈ ಅವಾಂತರಕ್ಕೆ ಯಾರನ್ನೂ ದೂರಲಾಗದು. ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿ ಅದು ನೀಡಬಹುದಾದ ಅನುದಾನದಿಂದ ಕುಸಿದು ಬಿದ್ದಿರುವ ಸೇತುವೆ ಮತ್ತು ರಸ್ತೆಯನ್ನು ದುರಸ್ತಿ ಮಾಡಬಹುದು.
ಇಲ್ಲಿನ ಮನೆಗಳಲ್ಲಿ ವಾಸ ಮಾಡುವ ಜನರ ಸ್ಥಿತಿ ಒಮ್ಮೆ ಯೋಚಿಸಿ ನೋಡಿ. ಅವರು ಕಾಲೋನಿ ವಾಸಿಗಳಿಗಿಂತ ಜಾಸ್ತಿ ದ್ವೀಪ ನಿವಾಸಿಗಳು ಅನಿಸಿಕೊಳ್ಳುತ್ತಾರೆ! ಎಲ್ಲ ಮನೆಗಳ ಸುತ್ತ ನೀರು. ಜನ ಮನೆಗಳಿಂದ ಹೊರಗೆ ಹೋಗಬೇಕಾದರೆ ದೋಣಿಗಳು ಬೇಕಾಗುತ್ತವೆ! ಇನ್ನೂ 4-5 ದಿನ ಅವರು ಇದೇ ಸ್ಥಿತಿಯಲ್ಲಿರಬೇಕಿದೆ. ಅಗತ್ಯ ವಸ್ತುಗಳನ್ನು ತಂದುಕೊಳ್ಳವುದು ಹೇಗೆಂಬ ಯೋಚನೆಯಲ್ಲಿ ಅವರು ಬಸವಳಿದಿರುತ್ತಾರೆ.
ಇದನ್ನೂ ಓದಿ: ಮಗನ ಸಾವಿಗೆ ನ್ಯಾಯ ಸಿಗಲಿಲ್ಲ ಎಂದು ದಯಾಮರಣಕ್ಕೆ ಮುಂದಾದ ಕುಟುಂಬ; ಮೈಸೂರು ಡಿಸಿ, ಎಸ್ಪಿಗೆ ಮನವಿ