ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದಿಗೆ ಕೆಲವು ಕ್ಷಣಗಳನ್ನು ಕಳೆದ ಇವರ ಅನುಭವ ರೋಚಕ
ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿದರೆ ಎಂಟೆದೆಯುಳ್ಳವರೂ ಬೆವರುವುದು ಸತ್ಯ ಮಾರಾಯ್ರೇ. ಹುಲಿ, ಸಿಂಹ, ಚಿರತೆಗಳೇ ಹಾಗೆ, ಭಯ ಹುಟ್ಟಿಸುವ ಪ್ರಾಣಿಗಳು.
ಬಂಡೀಪುರದ ರಾಷ್ಟ್ರೀಯ ಉದ್ಯಾನವನಕ್ಕೆ (Bandipur National Park) ಭೇಟಿ ನೀಡಿದ್ದರೆ ಹಿಮವದ್ ಗೋಪಾಲ ಸ್ವಾಮಿ ಬೆಟ್ಟವನ್ನು (Himavad Gopalswamy Hill) ನೋಡಿರುತ್ತೀರಿ. ಈ ಉದ್ಯಾನವನ ಪ್ರದೇಶದಲ್ಲಿ ಹೆಚ್ಚು ಎತ್ತರದಬೆಟ್ಟವೆಂದರೆ ಇದೇ. ಗೋಪಾಲಸ್ವಾಮಿ ಬೆಟ್ಟದಲ್ಲಿ ವೇಣುಗೋಪಾಲ ಸ್ವಾಮಿ ದೇವಾಲಯವಿದ್ದು (Venugoplal Swamy Temple) ಸುತ್ತಣ ಪರಿಸರವು ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಈ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳು ಸ್ವೇಚ್ಛೆಯಿಂದ ಓಡಾಡುತ್ತಿರುತ್ತವೆ. ಇಲ್ಲಿನ ರಸ್ತೆಯ ಮೂಲಕ ವಾಹನಗಳು ಹಾದು ಹೋಗುವಾಗ ಅವು ಜನರ ಕಣ್ಣಿಗೆ ಕಾಣೋದುಂಟು. ಅಂಥ ಒಂದು ಸಂದರ್ಭ ಈ ಕಾರಿನಲ್ಲಿ ಪ್ರಯಾಣಿಸುತ್ತಿರುವವರಿಗೆ ಆಗಿದೆ. ಕಾರು ಚಲಿಸುವಾಗ ನಡುರಸ್ತೆಯಲ್ಲಿ ಕುಳಿತ ಹುಲಿ ಅದರಲ್ಲಿದ್ದವರ ಕಣ್ಣಿಗೆ ಕಂಡಿದೆ. ಅವರು ಧೈರ್ಯವಂತರು ಅಂತ ಅನುಮಾನವಿಲ್ಲದೆ ಹೇಳಬಹುದು.
ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿದರೆ ಎಂಟೆದೆಯುಳ್ಳವರೂ ಬೆವರುವುದು ಸತ್ಯ ಮಾರಾಯ್ರೇ. ಹುಲಿ, ಸಿಂಹ, ಚಿರತೆಗಳೇ ಹಾಗೆ, ಭಯ ಹುಟ್ಟಿಸುವ ಪ್ರಾಣಿಗಳು. ಆದರೆ, ಕಾರಲ್ಲಿದ್ದವರು ತಮ್ಮ ವಾಹನವನ್ನು ಬಂದ ದಾರಿಗೆ ವಾಪಸ್ಸು ತಿರುಗಿಸುವ ಪ್ರಯತ್ನ ಮಾಡದೆ, ನಿಧಾನಕ್ಕೆ ಅದರೆಡೆ ಹೋಗುತ್ತಾರೆ. ಕಾರು ತನ್ನತ್ತ ಬರುವುದನ್ನು ಕಂಡು ಹುಲಿ ಪಕ್ಕಕ್ಕೆ ಸರಿದು ಬಿಡುತ್ತದೆ. ಹಾಗಂತ ಅದೇನೂ ಅವಸರಿಸಿ ಓಡುವುದಿಲ್ಲ. ರಸ್ತೆಯಿಂದ 10-12 ಅಡಿ ದೂರ ದಿಣ್ಣೆಯಂಥ ಸ್ಥಳದಲ್ಲಿ ಕಾರಿನ ಕಡೆ ಮುಖ ಮಾಡಿ ಕೂರುತ್ತದೆ. ಕಾರಿನಲ್ಲಿರುವವರಿಗೂ ಕುತೂಹಲ. ಕಾರನ್ನು ನಿಲ್ಲಿಸಿ ಅದರ ವಿಡಿಯೋ ಮಾಡುವುದನ್ನು ಮುಂದುವರಿಸುತ್ತ್ತಾರೆ.
ಕಾರಿನಲ್ಲಿರುವವರ ಪೈಕಿ ಒಬ್ಬರು ಹುಲಿಗೆ ವಯಸ್ಸಾಗಿ ಬಿಟ್ಟಿದೆ ಅಂತ ಹೇಳುತ್ತಿದ್ದಾರೆ. ಅವರ ಮಾತು ನಿಜವೂ ಆಗಿರಬಹುದು. ಸಾಮಾನ್ಯವಾಗಿ ವಯಸ್ಸಾದ ಹುಲಿಗಳೇ ಹೀಗೆ ಒಂಟಿಯಾಗಿ ಓಡಾಡುತ್ತವೆ ಅಂತ ಹೇಳುತ್ತಾರೆ. ಅದೇನೇ ಇರಲಿ, ಹುಲಿ ಜೊತೆ ಸ್ವಲ್ಪ ಸಮಯ ಕಳೆದಿದ್ದು ಕಾರಲ್ಲಿದ್ದವರಿಗೆ ಲೈಫ್ ಟೈಮ್ ಅನುಭವ ಮಾರಾಯ್ರೇ.
ಇದನ್ನೂ ಓದಿ: Viral Video: ಬಾವಿಗೆ ಬಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ಕೊಯಮತ್ತೂರಿನ ಅರಣ್ಯಾಧಿಕಾರಿಗಳು; ವಿಡಿಯೋ ವೈರಲ್