ಕಣ್ಣಾ ಮುಚ್ಚೆ ಕಾಡೇಗೂಡೆ ಆಟ ನಾವು ಮರೆತಿರಬಹುದು, ಆದರೆ ಈ ನಾಯಿಗೆ ಆಟ ಚೆನ್ನಾಗಿ ಗೊತ್ತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 11, 2021 | 9:51 PM

ಕಳೆದ ವರ್ಷ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋ ನೋಡಿ. ಒಂದು ಪುಟಾಣಿ ಮಗು ತನ್ನ ನಾಯಿಯ ಜೊತೆ ಕಣ್ಣಾ ಮುಚ್ಚೆ ಕಾಡೇ ಗೂಡೆ ಆಟ ಆಡುತ್ತಿದೆ. ಬಹಳ ಅಪ್ಯಾಯಮಾನವಾಗಿರುವ ಮತ್ತು ಮನಸ್ಸಿಗೆ ಮುದ ನೀಡುವ ವಿಡಿಯೋ ಇದು.

ಕಣ್ಣಾ ಮುಚ್ಚೆ ಕಾಡೇಗೂಡೆ ಉದ್ದಿನ ಮೂಟೆ ಉರುಳೇ ಹೋಯ್ತು, ನಮ್ಮಯ ಹಕ್ಕಿ ಬಿಟ್ಟೇಬಿಟ್ಟ್ಟೆ ನಿಮ್ಮಯ ಹಕ್ಕಿ ಬಚ್ಚಿಟ್ಟುಕೊಳ್ಳಿ, ಈ ಹಾಡು ಮತ್ತು ಆಟ ನೆನೆಪಿದೆ ತಾನೆ? ನಿಜ ಹೇಳಬೇಕೆಂದರೆ ಈ ಹಳೆ ಕೇವಲ ನೆನಪಿನಲ್ಲಿ ಮಾತ್ರ ಉಳಿದು ಬಿಟ್ಟಿವೆ. ಈ ಜಮಾನಾದ ಮಕ್ಕಳಿಗೆ ಈ ಆಟಗಳಲ್ಲ ಕೇವಲ ವಿಡಿಯೋ ಗೇಮ್ಗಳು ಮಾತ್ರ ಗೊತ್ತು ಮಾರಾಯ್ರೇ. ಲಾಕ್ಡೌನ್ ಸಮಯದಲ್ಲಿ ಶಾಲೆಗಳು ಮುಚ್ಚಿ ಮಕ್ಕಳು ನಿತ್ಯ ಮನೆಯಲ್ಲೇ ಇದ್ದಾಗ ಅವರಿಗೆ ಹೈಡ್ ಅಂಡ್ ಸೀಕ್ ಮತ್ತು ಇನ್ನಿತರ ಆಟಗಳ ಬಗ್ಗೆ ವಿವರಿಸಬಹುದಾಗಿತ್ತು, ಆದರೆ, ನಮ್ಮದೂ ಫೋನ್ ಇಲ್ಲದಿದ್ರೆ ಬದುಕೇ ಇಲ್ಲ ಅನ್ನುವ ಸ್ಥಿತಿ!

ಆದರೆ ಕಳೆದ ವರ್ಷ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋ ನೋಡಿ. ಒಂದು ಪುಟಾಣಿ ಮಗು ತನ್ನ ನಾಯಿಯ ಜೊತೆ ಕಣ್ಣಾ ಮುಚ್ಚೆ ಕಾಡೇ ಗೂಡೆ ಆಟ ಆಡುತ್ತಿದೆ. ಬಹಳ ಅಪ್ಯಾಯಮಾನವಾಗಿರುವ ಮತ್ತು ಮನಸ್ಸಿಗೆ ಮುದ ನೀಡುವ ವಿಡಿಯೋ ಇದು.

ಮಗುವಿನೊಂದಿಗೆ ಒಂದು ಮಗುವಾಗಿ ಈ ನಾಯಿ ಆಟವಾಡುತ್ತ್ತಿದೆ. ನೀನು ಆ ಕಡೆ ಹೋಗಿ ಕಣ್ಣು ಮುಚ್ಚಿಕೋ ಅಂತ ಮಗು ಹೇಳಿದಾಕ್ಷಣ ನಾಯಿ ತನ್ನ ಹಿಂದಿರುವ ಗೋಡೆ ಕಡೆ ಹೋಗಿ ಮುಖ ಮುಚ್ಚಿಕೊಳ್ಳುತ್ತದೆ. ನಮ್ಮಂತೆ ಹಿಂದೆ ತಿರುಗಿ ನೋಡುವ ಕಳ್ಳಾಟವನ್ನೂ ಅದು ಮಾಡುತ್ತದೆ. ಆದರೆ ಮಗು, ನೋ ಚೀಟಿಂಗ್ ಅಂತ ಗದರಿದಾಕ್ಷಣ ಪ್ಯಾದೆಯಂತೆ ನಾಲಗೆ ಹೊರಹಾಕಿ ಪುನಃ ಮುಖವನ್ನು ಗೋಡೆ ಕಡೆ ತಿರುಗಿಸುತ್ತದೆ!

ಬಹಳ ಸ್ವಿಟ್ ಅನಿಸುತ್ತದೆ ಈ ವಿಡಿಯೋ. ಒಮ್ಮೆ ನೋಡಿದರೆ ನಮಗೆ ತೃಪ್ತಿಯಾಗದು, ಪದೇಪದೆ ನೋಡಬೇಕೆನಿಸುತ್ತದೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಸಫಾರಿಗೆ ಹೋದವರಿಗೆ ಮೂರು ಕರಡಿಗಳ ದರ್ಶನ, ಪ್ರವಾಸಿಗರು ಫುಲ್ ಖುಷ್; ವಿಡಿಯೋ ನೋಡಿ