ಟೋಕಿಯೋನಿಂದ ಬರಗೈಲಿ ವಾಪಸ್ಸಾದ ಪಾಕಿಸ್ತಾನಕ್ಕೆ 7 ಪದಕ ಗೆದ್ದುಕೊಂಡ ಹಿಂದೂಸ್ತಾನದ ಮೇಲೆ ಹೊಟ್ಟೆಯುರಿ!

ಟೋಕಿಯೋನಿಂದ ಬರಗೈಲಿ ವಾಪಸ್ಸಾದ ಪಾಕಿಸ್ತಾನಕ್ಕೆ 7 ಪದಕ ಗೆದ್ದುಕೊಂಡ ಹಿಂದೂಸ್ತಾನದ ಮೇಲೆ ಹೊಟ್ಟೆಯುರಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 11, 2021 | 7:43 PM

ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ನೀರಜ್ ಚೋಪ್ರಾ ಅವರೊಂದಿಗೆ ಅಂತಿಮ ಸುತ್ತಿನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಸಹ ಪದಕದ ಬೇಟೆಯಲ್ಲಿದ್ದರು. ಅದರೆ ಅವರು 5 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು

ಪಾಕಿಸ್ತಾನಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಇಮ್ರಾನ್ ಖಾನ್ ಪ್ರಧಾನ ಮಂತ್ರಿಯಾದ ನಂತರ ಬೇರೆ ಕ್ಷೇತ್ರಗಳಲ್ಲದಿದ್ದರೂ ಕ್ರೀಡೆಯಲ್ಲಿ ದೇಶ ಪ್ರಗತಿ ಸಾಧಿಸಬಹುದೆಂಬ ನಿರೀಕ್ಷೆಯಿಟ್ಟುಕೊಂಡಿದ್ದ ಪಾಕಿಸ್ತಾನಿಯರಿಗೆ ಟೋಕಿಯೋ ಒಲಂಪಿಕ್ಸ್ ನಲ್ಲಿ ತಮ್ಮ 10 ಅಥ್ಲೀಟ್​ಗಳು ಬರಿಗೈಲಿ ವಾಪಸ್ಸು ಬಂದಿದ್ದು ಭಾರಿ ನಿರಾಶೆ ಹುಟ್ಟಿಸಿದೆ. ಗಾಯದ ಮೇಲೆ ಉಪ್ಪು ಸವರಿದ ಹಾಗೆ ಅದರ ನೆರೆರಾಷ್ಟ್ರ ಮತ್ತು ಆಜನ್ಮ ವೈರಿ ಹಿಂದೂಸ್ತಾನ ಒಂದು ಚಿನ್ನದ ಪದಕ ಸೇರಿದಂತೆ 7 ಪದಕಗಳನ್ನು ಗೆದ್ದಿರುವುದು ಅಲ್ಲಿನ ಜನರಿಗೆ ಸಹಿಸಿಕೊಳ್ಳುವುದಾಗುತ್ತಿಲ್ಲ.

ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ನೀರಜ್ ಚೋಪ್ರಾ ಅವರೊಂದಿಗೆ ಅಂತಿಮ ಸುತ್ತಿನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಸಹ ಪದಕದ ಬೇಟೆಯಲ್ಲಿದ್ದರು. ಅದರೆ ಅವರು 5 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪಾಕಿಸ್ತಾನದಲ್ಲಿ ಭಾರತದ ಹಾಗೆ ಕ್ರೀಡೆಗೆ ಪ್ರೋತ್ಸಾಹ ಮತ್ತು ಪೂರಕ ಸೌಲಭ್ಯಗಳಿಲ್ಲದಿದ್ದರೂ ನದೀಮ್ ಅವರ ಸಾಧನೆ ಗಮನಾರ್ಹವಾದದ್ದು ಎಂದು ಎಂದು ಕೆಲ ಪಾಕಿಸ್ತಾನಿ ಪತ್ರಕರ್ತರು ಹೇಳುತ್ತಿದ್ದಾರೆ.

ಹಾಗೆ ನೋಡಿದರೆ 1992 ರ ಬಾರ್ಸಿಲೋನಾ ಒಲಂಪಿಕ್ಸ್ ನಂತರ ಪಾಕಿಸ್ತಾನ ಪದಕದ ಬರ ಎದುರಿಸುತ್ತಿದೆ. ಹಾಕಿಯಲ್ಲಿ ಸಾಮಾನ್ಯವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಪಾಕಿಸ್ತಾನ ಈ ಬಾರಿ ಒಲಂಪಿಕ್ಸ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅರ್ಹತೆ ಗಳಿಸಲು ವಿಫಲವಾಯಿತು. ಟೋಕಿಯೋ ಒಲಂಪಿಕ್ಸ್ನಲ್ಲಿ ಮಹೂರ್ ಶೆಹಜಾದ (ವೇಟ್ಲಿಫ್ಟಿಂಗ್) ಮತ್ತು ತಲ್ಹಾ ತಾಲಿಬ್ (ಶೂಟಿಂಗ್) ಪದಕ ಗೆಲ್ಲುತ್ತಾರೆ ಎಂದು ಪಾಕಿಸ್ತಾನಿಗಳು ನಿರೀಕ್ಷಿಸಿದ್ದರು. ಆದರೆ, ನಿರೀಕ್ಷೆ ಹುಸಿಹೋಯಿತು.
ಒಲಂಪಿಕ್ಸ್ ಪದಕಕ್ಕಾಗಿ ಪಾಕಿಸ್ತಾನ ಇನ್ನೂ ಮೂರು ವರ್ಷ ಕಾಯದೆ ವಿಧಿಯಿಲ್ಲ.

ಇದನ್ನೂ ಓದಿ: Shocking Video: ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿದ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ; ವಿಡಿಯೋ ವೈರಲ್