ಚಿಕ್ಕಮಗಳೂರು: ಚಾರ್ಮಾಡಿ ಘಾಟಿನಲ್ಲಿ 100 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಲಾರಿ; ಪ್ರಾಣ ಉಳಿಸಿದ ಮರ

| Updated By: ವಿವೇಕ ಬಿರಾದಾರ

Updated on: Sep 16, 2023 | 2:17 PM

ಚಾರ್ಮಾಡಿ ಘಾಟಿನಲ್ಲಿ ದಟ್ಟ ಮಂಜು ಹಾಗೂ ಮಳೆಯಿಂದ ದಾರಿ ಕಾಣದೆ ಲಾರಿ 100 ಅಡಿ ಪ್ರಪಾತಕ್ಕೆ ಬಿದ್ದಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಘಟನೆ ನಡೆದಿದೆ.

ಚಿಕ್ಕಮಗಳೂರು ಸೆ.16: ಚಾರ್ಮಾಡಿ ಘಾಟಿನಲ್ಲಿ (Charmadi Ghat) ದಟ್ಟ ಮಂಜು ಹಾಗೂ ಮಳೆಯಿಂದ ದಾರಿ ಕಾಣದೆ ಲಾರಿ 100 ಅಡಿ ಪ್ರಪಾತಕ್ಕೆ ಬಿದ್ದಿದೆ. ಮೂಡಿಗೆರೆ (Mudgere) ತಾಲೂಕಿನ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಘಟನೆ ನಡೆದಿದೆ. ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೀರಿನ ಬಾಟಲಿ ತುಂಬಿದ್ದ ಲಾರಿ ಪುತ್ತೂರಿನಿಂದ ಚಿತ್ರದುರ್ಗಕ್ಕೆ ಚಾರ್ಮಾಡಿ ಘಾಟ್​ ಮೂಲಕ ಸಾಗಿಸುತ್ತಿತ್ತು.
ಚಾರ್ಮಾಡಿ ಘಾಟಿನಲ್ಲಿ ದಟ್ಟ ಮಂಜು ಮತ್ತು ಮಳೆಯಿಂದ ರಸ್ತೆ ಕಂಡಿಲ್ಲ. ಇದರಿಂದ ಚಾಲಕ ಲಾರಿ ತಡೆಗೋಡೆಗೆ ಡಿಗ್ಗಿ ಹೊಡೆದು ಪಲ್ಟಿಯಾಗಿ ಬೀಳುವಾಗ 100 ಅಡಿ ಪ್ರಪಾತದಲ್ಲಿ ಮರಕ್ಕೆ ಸಿಕ್ಕಿಕೊಂಡಿದೆ. ಇದರಿಂದ ಚಾಲಕ ಹಾಗೂ ಕ್ಲೀನರ್​​ ಜೀವ ಉಳಿದಿದೆ. ಲಾರಿ ಪ್ರಪಾತಕ್ಕೆ ಬಿದ್ದ ತಕ್ಷಣ ಸ್ಥಳೀಯರು ಲಾರಿ ಚಾಲಕ-ಕ್ಲೀನರ್ ಅನ್ನು ರಕ್ಷಣೆ ಮಾಡಿದ್ದಾರೆ. ಒಂದು ವೇಳೆ ಲಾರಿ ಮರಕ್ಕೆ ಸಿಕ್ಕಿಕೊಳ್ಳದಿದ್ದಲ್ಲಿ ಸಾವಿರ ಅಡಿ ಪ್ರಪಾತಕ್ಕೆ ಹೋಗಿ ಬೀಳುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow us on