ಹೋಗುತ್ತಿದ್ದ ಬೈಕ್ ಮೇಲೆ ರಪ್ ಅಂತ ಬಿದ್ದ ಬೃಹತ್ ಆಲದ ಮರ: ಸವಾರ ಮೃತ್ಯು, ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆ
ಭಾರೀ ಗಾಳಿ ಮಳೆಗೆ ಭೃಹತ್ ಗಾತ್ರದ ಆಲದ ಮರ ಬಿದ್ದು ಬೈಕ್ ಸವಾರ ಸ್ಥಳದಲ್ಲಿ ದುರಂತ ಅಂತ್ಯ ಕಂಡಿದ್ದಾನೆ. ಇನ್ನು ಬೈಕ್ ಮೇಲೆ ಮರ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಉಡುಪಿ: ಜುಲೈ ಆರಂಭವಾಗುತ್ತಿದ್ದಂತೆಯೇ ಕರವಾಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ವರುಣ ಅರ್ಭಟ ಇಂದು ಸಹ ಮುಂದುವರೆದಿದ್ದು, ಭಾರೀ ಗಾಳಿ ಧಾರಾಕಾರ ಮಳೆಗೆ ಮತ್ತೊಂದು ಬಲಿಯಾಗಿದೆ. ಕಾರ್ಕಳ ತಾಲೂಕಿನ ಬೆಳ್ಮಣ್ ದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಬೃಹತ್ ಆಲದ ಮರ ಬಿದ್ದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರವೀಣ್ ಆಚಾರ್ಯ ಮೃತ ದುರ್ವೈವಿ. ಪ್ರವೀಣ್ ತಮ್ಮ ಪಾಡಿಗೆ ತಾವು ಬೈಕ್ನಲ್ಲಿ ಹೋಗುತ್ತಿದ್ದಾಗ, ದೊಡ್ಡ ಆಲದ ಮರ ರಪ್ ಅಂತ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದಿಗೆ ಉಡುಪಿ ಜಿಲ್ಲೆಯಲ್ಲಿ ರಣ ಮಳೆಗೆ ಇದು ಮೂರನೇ ಬಲಿಯಾಗಿದೆ.