ಭಾರೀ ಮಳೆಗೆ ಹೆಚ್ಚಾದ ನೇತ್ರಾವತಿ ನದಿ ನೀರಿನ ರಭಸ: ತೆಂಗಿನಕಾಯಿಗಾಗಿ ಈಜುಗಾರರಿಂದ ಹುಚ್ಚು ಸಾಹಸ
ಭಾರೀ ಮಳೆಗೆ ನೇತ್ರಾವತಿ ನದಿ ನೀರಿನ ರಭಸ ಹೆಚ್ಚಾಗಿದೆ. ಅಷ್ಟಿದ್ದರೂ ಕೆಲ ಸಾಂಪ್ರದಾಯಿಕ ಈಜುಗಾರರು ದೋಣಿ ಇಳಿಸಿ ಹುಚ್ಚು ಸಾಹಸ ಪ್ರದರ್ಶಿಸಿದ್ದಾರೆ. ಹೋಮ್ ಗಾರ್ಡ್ಸ್ಗಳು, ಕಂದಾಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ಬಂದರೂ ಕೂಡ ಎಚ್ಚೆತ್ತುಕೊಂಡಿಲ್ಲ.
ಮಂಗಳೂರು: ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆ ಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಗೆ ನದಿ ನೀರಿನ ರಭಸವು ಹೆಚ್ಚಾಗಿದೆ. ಅಪಾಯದ ಮಟ್ಟ ಮೀರಿ ನೇತ್ರಾವತಿ ನದಿ (Netravati River) ಹರಿಯುತ್ತಿದ್ದು, ಕೆಲ ಸಾಂಪ್ರದಾಯಿಕ ಈಜುಗಾರರು ದೋಣಿ ಇಳಿಸಿ ಹುಚ್ಚು ಸಾಹಸ ಪ್ರದರ್ಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೂಡಿನಬಳಿಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಮಳೆಯಿಂದಾಗಿ ನೀರಿನಲ್ಲಿ ತೆಂಗಿನಕಾಯಿಗಳು ತೇಲಿ ಬರುತ್ತಿವೆ. ಅದನ್ನು ಆಯ್ದುಕೊಳ್ಳಲು ನಾಡದೋಣಿಯಲ್ಲಿ ಹೋಗಿ ಹುಚ್ಚು ಸಾಹಸ ಮಾಡಿದ್ದಾರೆ. ಹೋಮ್ ಗಾರ್ಡ್ಸ್ಗಳು, ಕಂದಾಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ಬಂದರೂ ಕೂಡ ಎಚ್ಚೆತ್ತುಕೊಂಡಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos