ಬುರ್ಖಾ ಧರಿಸಿ ಓಡಾಡ್ತಿದ್ದ ಪುರುಷನಿಗೆ ಧರ್ಮದೇಟು; ಬ್ಯಾಗಿನಲ್ಲಿ ಸಿಕ್ತು ಚಾಕು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 14, 2024 | 6:02 PM

ಇಳಕಲ್ ನಗರದ ಎಸಿಒ ಪ್ರಾಥಮಿಕ ಶಾಲೆ ಬಳಿ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನ ತಡೆದು ಬುರ್ಖಾ ತೆರೆದು ನೋಡಿದಾಗ ಅಚ್ಚರಿಯಾಗಿದ್ದು, ಪುರುಷನೂರ್ವ ಬುರ್ಖಾ ಧರಿಸಿ ತಿರುಗಾಡುತ್ತಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಆತನ ಬಗಲಲ್ಲಿದ್ದ ಬ್ಯಾಗಿನಲ್ಲಿ ಚಾಕು ಕೂಡ ಪತ್ತೆಯಾಗಿದೆ.

ಬಾಗಲಕೋಟೆ, ಜೂ.14: ಇಳಕಲ್ ನಗರದ ಎಸಿಒ ಪ್ರಾಥಮಿಕ ಶಾಲೆ ಬಳಿ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನ ತಡೆದು ಬುರ್ಖಾ ತೆರೆದು ನೋಡಿದಾಗ ಅಚ್ಚರಿಯಾಗಿದ್ದು, ಪುರುಷನೂರ್ವ ಬುರ್ಖಾ ಧರಿಸಿ ತಿರುಗಾಡುತ್ತಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಆತನ ಬಗಲಲ್ಲಿದ್ದ ಬ್ಯಾಗಿನಲ್ಲಿ ಚಾಕು ಕೂಡ ಪತ್ತೆಯಾಗಿದೆ. ಅಂದಾಜು 35 ರಿಂದ 40 ವರ್ಷ ವಯೋಮಾನದ ವ್ಯಕ್ತಿಯಾಗಿದ್ದು, ಬುರ್ಖಾ ಧರಿಸಿ ಸುತ್ತಾಟ ನಡೆಸಿದ್ದ. ವಿಷಯ ತಿಳಿಯುತ್ತಿದ್ದ ಜಮಾಯಿಸಿದ ಜನರು ಧರ್ಮದೇಟು ಕೊಟ್ಟಿದ್ದಾರೆ. ಜೊತೆಗೆ ಮಹಿಳೆಯರು ಸೇರಿಕೊಂಡು ಚಪ್ಪಲಿ ಏಟು ಕೊಟ್ಟು ಕಪಾಳ‌ ಮೋಕ್ಷ‌‌ ಮಾಡಿ ಹಲ್ಲೆ ಮಾಡಿದ್ದಾರೆ. ಮನಸೋ ಇಚ್ಚೆ ಥಳಿಸಿದ ಬಳಿಕ ಇಳಕಲ್ ‌ನಗರ ಠಾಣೆಗೆ ಒಪ್ಪಿಸಿದ್ದಾರೆ. ಇಳಕಲ್ ಪೊಲೀಸರು ಈ ಕುರಿತು ವಿಚಾರಣೆ ನಡೆಸಿದ್ದಾರೆ. ಇನ್ನು ಜನರು ಯಾಕೆ ಬುರ್ಖಾ ಯಾಕೆ ಧರಿಸಿದ್ದಿಯಾ?, ಚಾಕು ಏಕೆ ಇಟ್ಕೊಂಡಿದಿಯಾ ಎಂದು ಕೇಳಿದಾಗ ಉತ್ತರಿಸಿದ ಆತ ನನ್ನ ತಲೆ‌ಸರಿಯಿಲ್ಲ ಎಂದಿದ್ದಾನೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ